200 ವರ್ಷಗಳ ನಂತರ ರಕ್ಷಾಬಂಧನದ ದಿನ ಅಪರೂಪದ ಯೋಗ ! ಈ ರಾಶಿಯವರ ಜೀವನದಲ್ಲಿ ಧನಾಗಮನ
200 ವರ್ಷಗಳ ನಂತರ ರಕ್ಷಾಬಂಧನದ ದಿನ ಅತ್ಯಂತ ಅಪರೂಪದ ಬುಧಾದಿತ್ಯ ಯೋಗ, ರವಿ ಯೋಗ ಮತ್ತು ಶತಭಿಷಾ ನಕ್ಷತ್ರದ ಸಂಯೋಜನೆ ರೂಪುಗೊಳ್ಳುತ್ತಿದೆ. ಈ ಅಪರೂಪದ ಸಂಯೋಗಗಳು 3 ರಾಶಿಯವರ ಅದೃಷ್ಟವನ್ನು ಬೆಳಗಲಿದೆ.
ಬೆಂಗಳೂರು : ಸಹೋದರ-ಸಹೋದರಿ ವಾತ್ಸಲ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬಕ್ಕೆ ಒಂದು ವಾರ ಮಾತ್ರ ಉಳಿದಿದೆ. ಈ ವರ್ಷ ಭದ್ರಾ ಕಾರಣ, ಈ ಹಬ್ಬವನ್ನು ಎರಡು ದಿನಗಳ ಕಾಲ ಅಂದರೆ ಆಗಸ್ಟ್ 30 ಮತ್ತು 31 ರಂದು ಆಚರಿಸಲಾಗುತ್ತದೆ. 200 ವರ್ಷಗಳ ನಂತರ ರಕ್ಷಾಬಂಧನದ ದಿನ ಅತ್ಯಂತ ಅಪರೂಪದ ಬುಧಾದಿತ್ಯ ಯೋಗ, ರವಿ ಯೋಗ ಮತ್ತು ಶತಭಿಷಾ ನಕ್ಷತ್ರದ ಸಂಯೋಜನೆ ರೂಪುಗೊಳ್ಳುತ್ತಿದೆ. ಈ ಅಪರೂಪದ ಸಂಯೋಗಗಳು 3 ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಜ್ಯೋತಿಷಿಗಳ ಪ್ರಕಾರ, ಈ 3 ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯಲಿದೆ. ಎಲ್ಲಾ ದಿಕ್ಕುಗಳಿಂದಲೂ ಲಾಭ ಗಳಿಸುವ ಸಾಮರ್ಥ್ಯ ಒದಗಿ ಬರಲಿದೆ.
ಈ ರಾಶಿಗಳ ಮೇಲೆ ರಕ್ಷಾ ಬಂಧನ 2023 ರ ಶುಭ ಪರಿಣಾಮಗಳು :
ಧನು ರಾಶಿ :
ಈ ಬಾರಿಯ ರಕ್ಷಾ ಬಂಧನವು ನಿಮಗೆ ತುಂಬಾ ಸಿಹಿಯಾಗಿರಲಿದೆ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಬಲವಾಗಿರುತ್ತದೆ. ಸಂಬಳದ ಹೊರತಾಗಿ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಮಂಗಳ-ಕೇತು ಯುತಿ: ಈ 4 ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ
ಸಿಂಹ ರಾಶಿ :
ಈ ರಕ್ಷಾಬಂಧನ ನಿಮ್ಮ ಅದೃಷ್ಟವನ್ನು ತೆರೆಯುತ್ತದೆ. ಲಕ್ಷ್ಮೀ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರುತ್ತದೆ. ಇದ್ದಕ್ಕಿದ್ದಂತೆ ನಿಮಗೆ ತಿಳಿಯದ ಮೂಲದಿಂದ ಹಣ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಹಬ್ಬವು ಅದ್ಭುತವಾಗಿರಲಿದೆ. ಈ ಸಮಯದಲ್ಲಿ ಹೊಸ ಹೂಡಿಕೆಗೆ ನಿರ್ಧರಿಸುತ್ತೀರಿ. ಅದು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ.
ಮಿಥುನ ರಾಶಿ :
ರಕ್ಷಾಬಂಧನದಂದು ಸಂಭವಿಸಿದ ಅಪರೂಪದ ಯೋಗದಿಂದಾಗಿ ಜೀವನದಿಂದ ಹಣಕಾಸಿನ ಬಿಕ್ಕಟ್ಟು ಕೊನೆಗೊಳ್ಳಬಹುದು. ಹಠಾತ್ ಆಗುವ ಹಣದ ಲಾಭದ ಕಾರಣದಿಂದಾಗಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡು ಬರಲಿದೆ. ಮೊದಲಿಗಿಂತ ಹೆಚ್ಚು ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ರಕ್ಷಾ ಬಂಧನದ ದಿನದಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ರಿಯಲ್ ಎಸ್ಟೇಟ್‌ನಿಂದಲೂ ಆರ್ಥಿಕ ಲಾಭವಾಗುವುದು.
ಇದನ್ನೂ ಓದಿ : ಈ ರಾಶಿಗಳ ಮೇಲೆ ಸಿರಿ-ಸಂಪತ್ತಿನ ಮಳೆ ಹರಿಸಲಿದ್ದಾನೆ ಸೂರ್ಯದೇವ: ಮುಂದಿನ 30 ದಿನ ಹಣ, ಪ್ರಗತಿ, ಖ್ಯಾತಿಗಿರಲ್ಲ ಎಳ್ಳಷ್ಟೂ ಬರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ