ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಗ್ರಹದ ಸಾಗಣೆಯನ್ನು ಗ್ರಹಗಳ ಸಂಕ್ರಮಣ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಿದಾಗ ಅದು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಂಗಳವು ಗ್ರಹಗಳಲ್ಲಿ ಸೇನಾಧಿಪತಿ ಸ್ಥಾನಮಾನವನ್ನು ಹೊಂದಿದೆ. ಏಪ್ರಿಲ್ 7 ರಂದು, ಮಂಗಳನು ​​ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ.


COMMERCIAL BREAK
SCROLL TO CONTINUE READING

ಮಂಗಳದೇವ  ಮೇ 17 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾರೆ. ಮೇ 17 ರಂದು ಬೆಳಿಗ್ಗೆ 09:30 ಕ್ಕೆ ಮೀನ ರಾಶಿಗೆ ಮಂಗಳನ ಪ್ರವೇಶ ಆಗಲಿದೆ. ಮಂಗಳನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೂ ಇರುತ್ತದೆ. ಮಂಗಳದ ಅಂಶಗಳು ಯುದ್ಧ, ಭೂಮಿ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾಗಿದೆ.  


ಇದನ್ನೂ ಓದಿ : Weekly Horoscope: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಹಾನಿ ಸಾಧ್ಯತೆ, 7 ದಿನಗಳವರೆಗೆ ಎಚ್ಚರದಿಂದಿರಿ


ಕರ್ಕಾಟಕ : ಕರ್ಕಾಟಕ ರಾಶಿಯಎಂಟನೇ ಮನೆಯಲ್ಲಿ ಮಂಗಳವು ಸಾಗುತ್ತಿದೆ. ಈ  ಅವಧಿಯಲ್ಲಿ,  ಕೆಲಸದ ಸ್ಥಳದಲ್ಲಿ ನಿರಾಶೆಯನ್ನು ಎದುರಿಸಬೇಕಾಗಬಹುದು. ಈ ವೇಳೆ ಹಿರಿಯ ಅಧಿಕಾರಿಗಳ ಜತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕೆಲಸದಲ್ಲಿ ತೃಪ್ತಿಯ ಕೊರತೆ ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಸಂಗಾತಿಯೊಂದಿಗಿನ ಸಂಬಂಧಗಳು ಹದಗೆಡಬಹುದು. ಗಾಯವಾಗುವ ಸಾಧ್ಯತೆ ಇದೆ.


ತುಲಾ :  ಮಂಗಳ ಗ್ರಹವು ತುಲಾ ರಾಶಿಯ ಐದನೇ ಮನೆಯಲ್ಲಿ ಸಾಗಿದೆ. ಈ  ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೀವು ನೋಡಬಹುದು. ಸಹೋದ್ಯೋಗಿಗಳೊಂದಿಗೆ ವಾಗ್ವಾದದ ಸಾಧ್ಯತೆ ಇದೆ. ನೀವು ಕೆಲಸದ ಸ್ಥಳದಲ್ಲಿ ಪಿತೂರಿಗೆ ಬಲಿಯಾಗಬಹುದು. ಹಣಕಾಸಿನ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು.


ಇದನ್ನೂ ಓದಿ : Solar Eclipse 2022 Date : ಈ ಮೂರು ರಾಶಿಯವರ ಪಾಲಿಗೆ ಅದೃಷ್ಟ ತರಲಿದೆ ವರ್ಷದ ಮೊದಲ ಸೂರ್ಯ ಗ್ರಹಣ


ವೃಶ್ಚಿಕ ರಾಶಿ  : ಮಂಗಳ ಗ್ರಹವು ವೃಶ್ಚಿಕ ರಾಶಿಯ ನಾಲ್ಕನೇ ಮನೆಯಲ್ಲಿ ಸಾಗಿದೆ. ಇದರಿಂದಾಗಿ ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಕಾಣಬಹುದು. ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರಲಿದೆ. ತಾಯಿಯ ಆರೋಗ್ಯದ ಮೇಲೆ ನಿಗಾ ಇರಿಸಿ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.