Rahu Positive effect on life:ಛಾಯಾಗ್ರಹ ರಾಹು-ಕೇತುಗಳ ಹೆಸರು ಕೇಳಿದರೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಭಯದ ಭಾವ ಮೂಡುತ್ತದೆ. ಈ ಗ್ರಹಗಳು ಜನರಿಗೆ ಮಾತ್ರ ಹಾನಿ ಮಾಡುತ್ತದೆ ಎಂದು ಸಾಮಾನ್ಯವಾಗಿ ಜನರು ನಂಬುತ್ತಾರೆ, ಆದರೆ ಅದು ಹಾಗಲ್ಲ. ರಾಹುವಿನ ಬಗ್ಗೆ ಹೇಳುವುದಾದರೆ, ಈ ಗ್ರಹವು ಹಿಂದಿನ ಜನ್ಮದಲ್ಲಿನ ವ್ಯಕ್ತಿಗಳ ಕರ್ಮಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತಾನೆ.
ಒಬ್ಬ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ಕೆಟ್ಟ ಕರ್ಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಈ ಜನ್ಮದಲ್ಲಿ ರಾಹು ಆ ವ್ಯಕ್ತಿಯ ಜಾತಕದಲ್ಲಿ ಅಶುಭ ಸ್ಥಾನದಲ್ಲಿ ಉಳಿಯುತ್ತಾನೆ. ಮತ್ತೊಂದೆಡೆ, ನೀವು ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮನ್ಗಳನ್ನು ಮಾಡಿದ್ದರೆ, ರಾಹು ಈ ಜನ್ಮದಲ್ಲಿ ಅದೃಷ್ಟವನ್ನೇ ಬದಲಾಯಿಸುತ್ತಾನೆ. ಆದ್ದರಿಂದ, ಜ್ಯೋತಿಷ್ಯದಲ್ಲಿ, ಎಲ್ಲಾ ಪರಿಹಾರಗಳೊಂದಿಗೆ, ಉತ್ತಮ ಕರ್ಮಗಳನ್ನು ಮಾಡಲು ಹೆಚ್ಚು ಒತ್ತು ನೀಡಲಾಗುತ್ತದೆ. ಇತ್ತೀಚೆಗಷ್ಟೇ ಮೇಷ ರಾಶಿಗೆ ರಾಹುವಿನ ಪ್ರವೇಶವಾಗಿದೆ ಎಂಬುದು ಇಲ್ಲಿ ಗಮನಾರ್ಹ.
ನಿಮ್ಮ ಕರ್ಮಗಳ ಬಗ್ಗೆ ವಿಶೇಷ ಗಮನ ಕೊಡಿ
ಹಿಂದೂ ಧರ್ಮದಲ್ಲಿ ಸತ್ಕಾರ್ಯಗಳಿಗೆ, ದಾನ ಧರ್ಮಗಳಿಗೆ ಹೆಚ್ಚಿನ ಮಹತ್ವವಿದೆ. ಇದು ನಿರ್ಗತಿಕರಿಗೆ ಸಹಾಯ ಮಾಡುವುದು, ದಾನ ಮಾಡುವುದು, ಉತ್ತಮ ನಡವಳಿಕೆಯನ್ನು ಒಳಗೊಂಡಿದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಈ ಶುಭ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಿಶೇಷವಾಗಿ ಶನಿ, ರಾಹು-ಕೇತುಗಳಂತಹ ಗ್ರಹಗಳು ಕೇವಲ ಕರ್ಮಗಳಿಗೆ ಸಂಬಂಧಿಸಿವೆ. ಈ ಕಾರಣದಿಂದಾಗಿ ಜಾತಕದಲ್ಲಿ ಒಂದು ವೇಳೆ ರಾಹು ಶುಭ ಸ್ಥಾನದಲ್ಲಿದ್ದರೆ, ಅಂತಹ ಜನರ ಅದೃಷ್ಟ ಹೊಳೆಯುತ್ತದೆ. ರಾಹುವಿನ ಶುಭ ಫಲಿತಾಂಶವು ಅಂತವರಿಗೆ ಅನೇಕ ಸಂದರ್ಭಗಳಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ-Diya In Worship: ದೇವಿ-ದೇವತೆಗಳ ಮುಂದೆ ತುಪ್ಪದ ದೀಪ ಬೆಳಗಿ ಅಥವಾ ಎಳ್ಳೆಣ್ಣೆ ದೀಪ, ವಿಧಾನ ಮಾತ್ರ ಇದಾಗಿರಲಿ
>> ಜಾತಕದಲ್ಲಿ ರಾಹುವಿನ ಸ್ಥಾನ ಬಲಿಷ್ಠವಾಗಿದ್ದರೆ, ವ್ಯಕ್ತಿಯು ಸ್ವಭಾವತಃ ತೇಜದಿಂದ ಕೂಡಿದ್ದರು ಕೂಡ ಅವರ ಹೃದಯವು ಶುದ್ಧವಾಗಿರುತ್ತದೆ.
>> ರಾಹುವಿನ ಶುಭ ಪರಿಣಾಮವು ವ್ಯಕ್ತಿಗೆ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ನೀಡುತ್ತದೆ.
>> ರಾಹುವಿನ ಶುಭ ಪ್ರಭಾವದಿಂದಾಗಿ, ವ್ಯಕ್ತಿಯು ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾನೆ. ಆಧ್ಯಾತ್ಮ ಕ್ಷೇತ್ರದಲ್ಲೂ ಅವರು ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.
>> ರಾಹುವಿನ ಶುಭ ಪರಿಣಾಮವು ವ್ಯಕ್ತಿಗೆ ಅಪಾರ ಸಂಪತ್ತು ಮತ್ತು ಘನತೆ ಗೌರವವನ್ನು ತರುತ್ತದೆ. ವ್ಯಕ್ತಿಯ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ.
ಇದನ್ನೂ ಓದಿ-Hanuman Jayanti 2022: ಈ ರೀತಿ ಹನುಮನನ್ನು ಪೂಜಿಸಿದರೆ ಶನಿ ದೋಷದಿಂದ ಕೂಡ ಮುಕ್ತಿ ಸಿಗುತ್ತದೆ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.