Weekly Horoscope: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಹಾನಿ ಸಾಧ್ಯತೆ, 7 ದಿನಗಳವರೆಗೆ ಎಚ್ಚರದಿಂದಿರಿ

Weekly Numerology Horoscope: ಮುಂದಿನ 7 ದಿನಗಳವರೆಗೆ ಕೆಲವರಿಗೆ ವೃತ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿಶೇಷವಾಗಿ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಬಹಳ ಜಾಗರೂಕರಾಗಿರಿ.

Written by - Nitin Tabib | Last Updated : Apr 16, 2022, 01:53 PM IST
  • ಮುಂದಿನ ವಾರ ನಿಮ್ಮ ಪಾಲಿಗೆ ಹೇಗಿರಲಿದೆ?
  • ವೇದಾಶ್ವಪತಿ ಪಂಡಿತರು ಹೇಳುವುದೇನು?
  • ಮೂಲಾಂಕ ಜೋತಿಷ್ಯದ ಮೂಲಕ ತಿಳಿದುಕೊಳ್ಳೋಣ ಬನ್ನಿ
Weekly Horoscope: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಹಾನಿ ಸಾಧ್ಯತೆ, 7 ದಿನಗಳವರೆಗೆ ಎಚ್ಚರದಿಂದಿರಿ title=
Weekly Horoscope On Numerology

Weekly Numerology Horoscope 17 to 23 April: ಈ ವಾರ ಕೆಲವು ಜನರು ತಮ್ಮ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಸಹೋದ್ಯೋಗಿಗಳು ನಿಮಗೆ ಹಾನಿಯನ್ನುಂಟು ಮಾಡಬಹುದು. ಮುಂದಿನ ವಾರ (17 ರಿಂದ 23 ಏಪ್ರಿಲ್ 2022) ಎಲ್ಲಾ ಮೂಲಾಂಕಗಳ ಜನರ ಪಾಲಿಗೆ ಹೇಗೆ ಇರಲಿದೆ ಎಂಬುದನ್ನು ಮಹರ್ಷಿ ಕಪಿ ಗುರುಕುಲದ ಸಂಸ್ಥಾಪಕರಾದ ಜ್ಯೋತಿಷಿ ಅಲೋಕ್ ಅವಸ್ಥಿ 'ವೇದಾಶ್ವಪತಿ' ಅವರಿಂದ ತಿಳಿಯೋಣ.

ಮೂಲಾಂಕ 1: ಈ ವಾರ ನೀವು ಉದ್ಯೋಗ ಕ್ಷೇತ್ರದಲ್ಲಿ ವಿರೋಧ ಎದುರಿಸಬೇಕಾಗುತ್ತದೆ, ಆದರೆ ನೀವು ಹೋರಾಡುವುದರ ಜೊತೆಗೆ ಹಣಕಾಸಿನ ಲಾಭವನ್ನು ಸಹ ಪಡೆಯಬಹುದು. ವೈವಾಹಿಕ ಜೀವನದಲ್ಲಿ ಪರಸ್ಪರ ನಂಬಿಕೆ ಹೆಚ್ಚಾಗಲಿದೆ ಮತ್ತು ಕುಟುಂಬದಲ್ಲಿ ಸಂಬಂಧಗಳಲ್ಲಿ ಸುಧಾರಣೆ ಇರಲಿದೆ. ಈ ವಾರ ಹೂಡಿಕೆಯನ್ನು ತಪ್ಪಿಸಲು ಪ್ರಯತ್ನಿಸಿ. ವಾರದ ಮಧ್ಯಭಾಗವು ಪ್ರಯಾಣಕ್ಕೆ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕೇಸರಿ, ಅದೃಷ್ಟ ಸಂಖ್ಯೆ: 3

ಮೂಲಾಂಕ 2: ಈ ವಾರ, ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷದಿಂದ ಕೂಡಿರಲಿದೆ ಮತ್ತು ನೀವು ಅವಿವಾಹಿತರಾಗಿದ್ದರೆ, ಹೊಸ ಸಂಬಂಧವನ್ನು ಕೂಡಿಬರುವ ಸಾಧ್ಯತೆಯಿದೆ. ಧನ ಲಾಭ ಸಾಮಾನ್ಯವಾಗಿರಲಿದೆ.ಆದರೆ ವೆಚ್ಚಗಳು ಕಡಿಮೆ ಇರುತ್ತದೆ. ಉದರ ಸಮಸ್ಯೆ ಮತ್ತು ಖಿನ್ನತೆಯ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ಖಾಕಿ/ಕಂದು ಅದೃಷ್ಟ ಸಂಖ್ಯೆ: 5

ಮೂಲಾಂಕ 3: ಈ ವಾರ ಆರ್ಥಿಕ ಪರಿಸ್ಥಿತಿಯು ನಿಮ್ಮ ಪಾಲಿಗೆ ಚನ್ನಾಗಿರಲಿದೆ ಮತ್ತು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೈವಾಹಿಕ ಜೀವನವು ಹರಸಾಹಸದಿಂದ ಕೂಡಿರುತ್ತದೆ ಮತ್ತು ಕುಟುಂಬದಲ್ಲಿ ವಿರಹದ ಸಾಧ್ಯತೆಯಿದೆ. ವಾರದ ಕೊನೆಯಲ್ಲಿ ಆರೋಗ್ಯದ ಕಡೆ ಜಾಗ್ರತೆ ವಹಿಸಿ. ಹೃದಯ, ರಕ್ತ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಕೇಸರಿ, ಅದೃಷ್ಟ ಸಂಖ್ಯೆ: 5

ಮೂಲಾಂಕ 4: ಈ ವಾರ, ನೀವು ನಿಮ್ಮ ಕಠಿಣ ಪರಿಶ್ರಮದಿಂದ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವಿರಿ. ಓಡಾಟ ಹೆಚ್ಚಾಗಿರಲಿದೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗಲಿದೆ. ಅಹಂಕಾರವು ವೈವಾಹಿಕ ಜೀವನದಲ್ಲಿ ವೈಮನಸ್ಯ ಉಂಟುಮಾಡಬಹುದು. ವಾಹನ ಚಾಲನೆ ಮಾಡುವಾಗ ಕೋಪವನ್ನು ನಿಯಂತ್ರಿಸಿ.
ಅದೃಷ್ಟದ ಬಣ್ಣ: ನೇವಿ ಬ್ಲೂ ಅದೃಷ್ಟ ಸಂಖ್ಯೆ: 1

ಮೂಲಾಂಕ 5: ಈ ವಾರದ ಆರಂಭದಲ್ಲಿ ವೆಚ್ಚಗಳು ಹೆಚ್ಚಾಗಿರಲಿವೆ, ಆದರೆ ಗುರುವಾರದಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಕಡಿಮೆಯಾಗಲಿವೆ. ಈ ವಾರ ನೀವು ಯಾವುದೇ ಯೋಜನೆಯಲ್ಲಿ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡಲಿವೆ. ಉದರ ಮತ್ತು ಮೂತ್ರಪಿಂಡದ ತೊಂದರೆಗಳ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ನೇವಿ ಬ್ಲೂ ಅದೃಷ್ಟ ಸಂಖ್ಯೆ: 1

ಮೂಲಾಂಕ 6: ಈ ವಾರ ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯುವಿರಿ, ಆದರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರಿ. ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಜಾಗ್ರತೆವಹಿಸಿ. ನೀವು ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದರೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ ಈ ಕಾಲ ನಿಮಗೆ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ತಿಳಿ ನೇರಳೆ ಅದೃಷ್ಟ ಸಂಖ್ಯೆ: 3

ಮೂಲಾಂಕ 7: ಈ ವಾರ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. ವಾರದ ಮಧ್ಯದಲ್ಲಿ ಲಾಭದಿಂದ ಮನಸ್ಸು ಸಂತೋಷದಿಂದ ಕೂದಿರಲಿದೆ. ವಾರದ ಕೊನೆಯಲ್ಲಿ, ಆರೋಗ್ಯ ಸಮಸ್ಯೆಗಳಿಂದ ಕುಟುಂಬದಲ್ಲಿ ಓಡಾಟ ಸಂಭವಿಸುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಗುಲಾಬಿ ಅದೃಷ್ಟ ಸಂಖ್ಯೆ: 2

ಮೂಲಾಂಕ 8: ಈ ವಾರ ನಿಮ್ಮ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ. ಧನಲಾಭದಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಗುವಿನ ಬೇಡಿಕೆಗಳನ್ನು ಪೂರೈಸಲು ಸಮಯ ಮೀಸಲಿಡುವುದು ಕಷ್ಟಕರವಾಗಿರಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿವಹಿಸಿ,
ಅದೃಷ್ಟದ ಬಣ್ಣ: ತಿಳಿ ನೇರಳೆ ಅದೃಷ್ಟ ಸಂಖ್ಯೆ: 3

ಇದನ್ನೂ ಓದಿ-Rahu Gochar 2022: ರಾಹುಗೆ ಸಂಬಂಧಿಸದ ಈ ದೊಡ್ಡ ಭ್ರಾಂತಿಯನ್ನು ಇಂದೇ ದೂರಗೊಳಿಸಿ! ಭಾಗ್ಯ ಬೆಳಗುತ್ತಾನೆ ರಾಹು

ಮೂಲಾಂಕ 9: ಈ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ ಮತ್ತು ಕೆಲವು ಹಳೆಯ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಸಂಗಾತಿಯ ಜೊತೆಗೆ ಪ್ರವಾಸದ ಸಾಧ್ಯತೆ ಇದೆ. ಉದರ ಮತ್ತು ಜನನಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ.
ಅದೃಷ್ಟದ ಬಣ್ಣ: ತಿಳಿ ಕೆಂಪು ಅದೃಷ್ಟ ಸಂಖ್ಯೆ: 1

ಇದನ್ನೂ ಓದಿ-Hanuman Janmotsav 2022:ಹನುಮ ಜನ್ಮೊತ್ಸವದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭ ಯೋಗ. ಮುಹೂರ್ತ-ಪೂಜಾ ವಿಧಿ ವಿವರ ಇಲ್ಲಿದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News