ಕ್ಯಾಲೆಂಡರ್‌ಗಳನ್ನು ಈ ದಿಕ್ಕಿನಲ್ಲಿ ಹಾಕಿದರೆ ಉಕ್ಕಿ ಬರುವುದು ಧನ ಸಂಪತ್ತು !ಬಂಗಲೆ, ಕಾರು ಖರೀದಿ ಯೋಗವೂ ಹುಟ್ಟಿಕೊಳ್ಳುವುದು !
ಶುಭ ಅಶುಭ ಶಕುನಗಳನ್ನು ನಂಬಿ ವಸ್ತುಗಳನ್ನು ಮನೆಗೆ ತರುವೂ ಮಾತ್ರವಲ್ಲ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಕೂಡಾ ಅರಿತಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಬೆಂಗಳೂರು : ವಾಸ್ತುವಿನಲ್ಲಿ ಪ್ರತಿಯೊಂದು ವಸ್ತುವನ್ನು ಎಲ್ಲಿ ಇಡಬೇಕು. ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ, ಯಾವ ದಿಕ್ಕು ಅಶುಭ ಎನ್ನುವುದನ್ನು ಹೇಳಲಾಗಿದೆ. ಅಲ್ಲದೆ ಶುಭ ಅಶುಭ ಶಕುನಗಳನ್ನು ನಂಬಿ ವಸ್ತುಗಳನ್ನು ಮನೆಗೆ ತರುವುದು ಮಾತ್ರವಲ್ಲ ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ಕೂಡಾ ಅರಿತಿರಬೇಕು ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸರಿಯಾದ ವಸ್ತುವನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಕುಬೇರನ ಖಜಾನೆಯೇ ಮನೆಯೊಳಗೆ ಕಾಲಿಡುತ್ತದೆಯಂತೆ.
ವಾಸ್ತುಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್‌ಗಳನ್ನು ಮನೆಯಲ್ಲಿ ಇಡಬಾರದು. ಹಳೆಯ ಕ್ಯಾಲೆಂಡರ್ ಮನೆಯಲ್ಲಿ ಇದ್ದರೆ, ಮನೆ ಮತ್ತು ಮನೆ ಮಂದಿಯ ಪ್ತಗತಿಯನ್ನು ತಡೆಯುತ್ತದೆಯಂತೆ. ಹಾಗಾಗಿ ಹೊಸ ವರ್ಷ ಬಂತು ಎಂದರೆ ಹಳೆ ಕ್ಯಾಲೆಂಡರ್ ತೆಗದು ಹಾಕಿ ಹೊಸ ಕ್ಯಾಲೆಂಡರ್ ಅನ್ನು ನೇತು ಹಾಕಬೇಕು.
ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿ :
ಕ್ಯಾಲೆಂಡರ್ ಅನ್ನು ಉತ್ತರ, ಪಶ್ಚಿಮ ಅಥವಾ ಪೂರ್ವ ಗೋಡೆಯ ಮೇಲೆ ಮಾತ್ರ ಇಡಬೇಕು. ಇನ್ನು ಕ್ಯಾಲೆಂಡರ್ ನಲ್ಲಿ ಇರುವ ಫೋಟೋಗಳು ಕೂಡಾ ಇಲ್ಲಿ ಮುಖ್ಯವಾಗುತ್ತವೆ. ಹಿಂಸಾತ್ಮಕ ಪ್ರಾಣಿಗಳು, ದುಃಖದ ಮುಖಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಹಾಕಬಾರದು. ಈ ಚಿತ್ರಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೂರ್ವ ದಿಕ್ಕಿನ ಅಧಿಪತಿ ಸೂರ್ಯ. ಹಾಗಾಗಿ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಅನ್ನು ಇಟ್ಟುಕೊಳ್ಳುವುದು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಕೆಂಪು ಅಥವಾ ಗುಲಾಬಿ ಬಣ್ಣದ ಹಾಳೆಯ ಮೇಲೆ ಉದಯಿಸುವ ಸೂರ್ಯ, ದೇವರು ಇತ್ಯಾದಿ ಚಿತ್ರಗಳಿರುವ ಕ್ಯಾಲೆಂಡರ್ ಇದ್ದರೆ ಒಳ್ಳೆಯದು.
ಸುಖ ಸಮೃದ್ಧಿಗೆ :
ಉತ್ತರ ದಿಕ್ಕು ಕುಬೇರನ ದಿಕ್ಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ದಿಕ್ಕಿನಲ್ಲಿ ಹಸಿರು, ಕಾರಂಜಿ, ನದಿ, ಸಮುದ್ರ, ಜಲಪಾತಗಳು, ಮದುವೆ ಇತ್ಯಾದಿಗಳ ಚಿತ್ರಗಳನ್ನು ಹೊಂದಿರುವ ಕ್ಯಾಲೆಂಡರ್ ಇಟ್ಟರೆ ಸುಖ ಸಮೃದ್ದಿ ಹೆಚ್ಚುವುದು.
ಈ ದಿಕ್ಕಿನಲ್ಲಿಟ್ಟರೆ ಲಾಭ :
ಪಶ್ಚಿಮ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಕೆಲಸದ ವೇಗ ಹೆಚ್ಚುತ್ತದೆ. ದಕ್ಷತೆಯೂ ಹೆಚ್ಚುತ್ತದೆ.
ಇನ್ನು ಕ್ಯಾಲೆಂಡರ್ ಅನ್ನು ಮುಖ್ಯ ಬಾಗಿಲಿನ ಮುಂದೆ ಇಡಬಾರದು. ಬಾಗಿಲಿನ ಮೂಲಕ ಹಾದುಹೋಗುವ ಶಕ್ತಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಕ್ಯಾಲೆಂಡರ್‌ನಲ್ಲಿ ಸಂತರು, ಮಹಾಪುರುಷರು ಮತ್ತು ದೇವರ ಚಿತ್ರಗಳಿದ್ದರೆ, ಹೆಚ್ಚು ಸದ್ಗುಣ ಮತ್ತು ಸಂತೋಷದಾಯಕವೆಂದು ಪರಿಗಣಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.