Budh Gochar Effect: ನವಗ್ರಹಗಳಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಡಿಸೆಂಬರ್ 3 ರಂದು ಬೆಳಿಗ್ಗೆ 06:45 ಕ್ಕೆ ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಡಿಸೆಂಬರ್ 28 ರ ಬೆಳಿಗ್ಗೆ 05:10ರವರೆಗೂ ಬುಧ ಇದೇ ರಾಶಿಯಲ್ಲಿ ಇರಲಿದ್ದಾನೆ. ಸಂಪತ್ತು, ಬುದ್ಧಿವಂತಿಕೆ, ವ್ಯವಹಾರ ಮತ್ತು ಸಂವಹನಕಾರಕನಾದ ಬುಧನ ಈ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇನ್ನು 24 ಗಂಟೆಗಳಲ್ಲಿ ಬುಧನ ರಾಶಿ ಪರಿವರ್ತನೆಯಿಂದ ನಾಲ್ಕು ರಾಶಿಯ ಜನರ ಅದೃಷ್ಟ ಹೊಳೆಯಲಿದ್ದು, ಅವರು ಜೀವನದಲ್ಲಿ ಅಪಾರ ಹಣ, ಕೀರ್ತಿ, ಪ್ರಗತಿಯನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ನಾಳೆ ಧನು ರಾಶಿಗೆ ಬುಧನ ಸಂಚಾರದಿಂದ ಯಾವ ನಾಲ್ಕು ರಾಶಿಗಳು ಮಂಗಳಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಡಿಸೆಂಬರ್ ಮಾಸದಲ್ಲಿ ಬುಧ ಗೋಚಾರವು ಯಾವ ರಾಶಿಯವರಿಗೆ ಅದೃಷ್ಟ ಎಂದು ಸಾಬೀತುಪಡಿಸಲಿದೆ ತಿಳಿಯಿರಿ...


ನಾಳೆಯಿಂದ ಈ 4 ರಾಶಿಯವರಿಗೆ ಅಪಾರ ಹಣ, ಯಶಸ್ಸನ್ನು ನೀಡಲಿದ್ದಾನೆ ಬುಧ: 
ವೃಷಭ ರಾಶಿ: 

ಈ ರಾಶಿಯ ಎಂಟನೇ ಮನೆಯಲ್ಲಿ ಬುಧ ರಾಶಿ ಪರಿವರ್ತನೆ ಹೊಂದಲಿದ್ದು ಈ ಸಮಯದಲ್ಲಿ, ಬುಧನು ವೃಷಭ ರಾಶಿಯವರಿಗೆ ಆರ್ಥಿಕವಾಗಿ ಬಹಳಷ್ಟು ಪ್ರಯೋಜನವನ್ನು ನೀಡುವನು. ಹೊಸ ಆರ್ಥಿಕ ಮೂಲಗಳು ಗೋಚರಿಸಲಿದ್ದು  ಹಠಾತ್ ಧನಲಾಭದಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ. ನಿಮ್ಮ ವಾಕ್ಚಾತುರ್ಯದಿಂದ ಎಂತಹದ್ದೇ ಸನ್ನಿವೇಶವನ್ನು ಸುಲಭವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಲಿದೆ.   


ಇದನ್ನೂ ಓದಿ- ಗುರು ಮಾರ್ಗಿ ಪ್ರಭಾವ: ಇಂದಿನಿಂದ ಮುಂದಿನ 5 ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಹಣ- ಪ್ರಗತಿ ಸಾಧ್ಯತೆ


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯ ಆರನೇ ಮನೆಯಲ್ಲಿ ಬುಧ ಸಂಚರಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಆರನೇ ಮನೆಯಲ್ಲಿ ಬುಧನ ಸಂಚಾರವು ಕರ್ಕಾಟಕ ರಾಶಿಯವರಿಗೆ ತುಂಬಾ ಫಲಪ್ರದವಾಗಿರುತ್ತದೆ. ಈ ಸಮಯವು ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸನ್ನು ನೀಡಬಹುದು. ವೃತ್ತಿ ರಂಗದಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಹಣವು  ಪ್ರಯೋಜನಕಾರಿಯಾಗಲಿದೆ. ಪ್ರೇಮವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ಸಮಯದಲ್ಲಿ ನಿಮ್ಮ ಆಸೆ ನೆರವೇರಲಿದೆ. ಆದರೆ, ನೆನೆಪಿಡಿ ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. 


ತುಲಾ ರಾಶಿ: 
ತುಲಾ ರಾಶಿಯವರ ಮೂರನೇ ಮನೆಯಲ್ಲಿ ಬುಧನು ಸಂಚರಿಸಲಿದ್ದಾನೆ. ವೈದಿಕ ಜ್ಯೋತಿಷ್ಯದಲ್ಲಿ ಮೂರನೇ ಮನೆಯಲ್ಲೂ ಶಕ್ತಿಯ ಮನೆ ಎಂದು ಪರಿಗಣಿಸಲಾಗುತ್ತದೆ. ಶಕ್ತಿ ಮನೆಯಲ್ಲಿ ಬುಧನ ರಾಶಿ ಪರಿವರ್ತನೆಯು ತುಲಾ ರಾಶಿಯವರಿಗೆ ಅತ್ಯುತ್ತಮವಾಗಿರುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟ ಕೈ ಹಿಡಿಯಲಿದೆ. ಹೊಸ ಜನರೊಂದಿಗೆ ಸಂವಹನವು ಹೆಚ್ಚಾಗುತ್ತದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅನಿರೀಕ್ಷಿತ ಹಣಕಾಸಿನ ಲಾಭವಾಗಲಿದೆ. ಆಸ್ತಿ ವ್ಯವಹಾರಗಳು ನಿಮ್ಮ ಪರವಾಗಿರಲಿವೆ. ಈ ಸಮಯದಲ್ಲಿ ನಿಮ್ಮ ಬಹುದಿನದ ಕನಸು ನನಸಾಗುವುದು. ವಾಹನ ಖರೀದಿ ಯೋಗವೂ ಇದೆ.


ಇದನ್ನೂ ಓದಿ- Remedies For Mercury: ಜಾತಕದಲ್ಲಿ ಬುಧ ಗ್ರಹವನ್ನು ಬಲಪಡಿಸಲು ಸರಳ ಸಲಹೆಗಳು


ಮಕರ ರಾಶಿ:
ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಬುಧನು ಈ ರಾಶಿಯವರ ಹನ್ನೆರಡನೇ ಮನೆಯಲ್ಲಿ ಸಂಕ್ರಮಿಸುವುದರಿಂದ  ಮಕರ ರಾಶಿಯವರಿಗೆ ಹಲವು ವಿಷಯಗಳಲ್ಲಿ ಲಾಭವಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆದಾಯ ಹೆಚ್ಚಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪ್ರೇಮ ಸಂಬಂಧಗಳು ಬಲವಾಗಿರುತ್ತವೆ. ಸರ್ಕಾರಿ ಕೆಲಸಗಳಲ್ಲಿ ಲಾಭವಾಗಲಿದೆ. ನಿಮ್ಮ ಬಹುದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ.  ನ್ಯಾಯಾಲಯ ಮತ್ತು ವ್ಯಾಜ್ಯಗಳಲ್ಲಿ ಹಣ ಹೆಚ್ಚು ಖರ್ಚಾದರೂ ಕೊನೆಗೆ ಅದು ನಿಮ್ಮ ಪರವಾಗಿಯೇ ಆಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.