Budh Vakri 2022: ಕನ್ಯಾರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ- ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
Budh Vakri 2022: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುದ್ಧಿವಂತಿಕೆ, ಸಂಪತ್ತು ಮತ್ತು ವ್ಯಾಪಾರ ಕಾರಕ ಗ್ರಹ ಬುಧ ಗ್ರಹವು ಸೆಪ್ಟೆಂಬರ್ 10 ರಿಂದ ಕನ್ಯಾರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ವಕ್ರಿ ಬುಧನು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತು, ಯಶಸ್ಸನ್ನು ಕರುಣಿಸಲಿದ್ದಾನೆ. ಅಂತಹ ರಾಶಿಗಳು ಯಾವುವು ತಿಳಿಯೋಣ...
ಬುಧ ವಕ್ರಿ ಪರಿಣಾಮ: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುದ್ಧಿವಂತಿಕೆ, ಸಂಪತ್ತು ಮತ್ತು ವ್ಯಾಪಾರ ಕಾರಕ ಗ್ರಹ ಬುಧ ಗ್ರಹ. ಜ್ಯೋತಿಷ್ಯದ ಪ್ರಕಾರ, ಮುಂಬರುವ ಸೆಪ್ಟೆಂಬರ್ 10 ರಿಂದ ಬುಧ ಗ್ರಹವು ಹಿಮ್ಮುಖವಾಗಲಿದೆ. ಬುಧ 2 ಅಕ್ಟೋಬರ್ 2022 ರವರೆಗೆ ಕನ್ಯಾ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ಸಮಯದಲ್ಲಿ ಬುಧ ಗ್ರಹವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಕ್ರಿ ಬುಧನು ದ್ವಾದಶ ರಾಶಿಗಳಲ್ಲಿ 5 ರಾಶಿಯ ಜನರಿಗೆ ಅಪಾರ ಸಂತೋಷ- ಸಮೃದ್ಧಿಯನ್ನು ಮತ್ತು ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಈ ಐದು ರಾಶಿಯವರಿಗೆ ವಕ್ರಿ ಬುಧ ನೀಡಲಿದ್ದಾನೆ ಅಪಾರ ಕೀರ್ತಿ ಸಂಪತ್ತು :
ಮಿಥುನ ರಾಶಿ:
ಬುಧಗ್ರಹದ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಬಹಳ ಒಳ್ಳೆಯ ಸಮಯ. ಈ ಸಮಯದಲ್ಲಿ ಈ ರಾಶಿಯವರಿಗೆ ಹಠಾತ್ ಹಣ ಲಾಭವಾಗುತ್ತದೆ. ಜೊತೆಗೆ ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯುತ್ತಾರೆ. ಸಮಾಜದಲ್ಲಿ ಉತ್ತಮ ಚಿತ್ರಣ ನಿರ್ಮಾಣವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಯಾವುದೇ ಕಾನೂನು ವಿಷಯಗಳಿದ್ದರೆ ಅದರಲ್ಲಿ ಪರಿಹಾರ ದೊರೆಯಲಿದೆ.
ಇದನ್ನೂ ಓದಿ- Astro Tips for Money: ಸ್ನಾನ ಮಾಡುವ ಮುನ್ನ ಮಹಿಳೆಯರು ಈ ಕೆಲಸಗಳನ್ನು ಮಾಡಲೇಬಾರದು
ಕನ್ಯಾ ರಾಶಿ:
ಸೆಪ್ಟೆಂಬರ್ 10 ರಿಂದ ಬುಧ ಗ್ರಹವು ಕನ್ಯಾ ರಾಶಿಯಲ್ಲಿಯೇ ಹಿಮ್ಮುಖ ಚಲನೆ ಆರಂಭಿಸಲಿದೆ. ಆದ್ದರಿಂದ ಇದು ಈ ರಾಶಿಚಕ್ರದ ಚಿಹ್ನೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಈ ಜನರು ವೃತ್ತಿಯಲ್ಲಿ ಲಾಭವನ್ನು ಪಡೆಯುತ್ತಾರೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಮಾತು ಸಮಾಜದಲ್ಲಿ ನಿಮಗೆ ಕೀರ್ತಿ-ಗೌರವವನ್ನು ತರಲಿದೆ.
ವೃಶ್ಚಿಕ ರಾಶಿ:
ಹಿಮ್ಮುಖ ಬುಧವು ವೃಶ್ಚಿಕ ರಾಶಿಯವರಿಗೆ ಎಲ್ಲಾ ಕ್ಷೇತ್ರದಲ್ಲೂ ಅಪಾರ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಕೆಲಸದ ಒತ್ತಡಗಳಿಂದ ಮುಕ್ತರಾಗುವಿರಿ. ಉದ್ಯೋಗಸ್ಥರಿಗೆ ಉನ್ನತ ಸ್ಥಾನ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ನಿಮ್ಮದಾಗಲಿದೆ. ಅಕ್ಟೋಬರ್ 2ರವರೆಗೆ ನಿಮ್ಮ ಸಮಾಜದಲ್ಲಿ ಸ್ಥಾನಮಾನ, ಹಣ, ಪ್ರತಿಷ್ಠೆ ಎಲ್ಲವೂ ಪ್ರಾಪ್ತಿಯಾಗಲಿದ್ದು, ಈ ಸಮಯ ನೀವು ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಇರಲಿದೆ.
ಇದನ್ನೂ ಓದಿ- Durga Ashtami 2022: ದಾರಿದ್ರ್ಯ ತೊಲಗಿಸಿ, ಸಂಪತ್ತನ್ನು ದ್ವಿಗುಣಗೊಳಿಸುತ್ತದೆ ತಾಯಿ ಲಕ್ಷ್ಮಿಗೆ ಸಮರ್ಪಿತ ಈ ವ್ರತ
ಧನು ರಾಶಿ:
ಹಿಮ್ಮೆಟ್ಟುವ ಬುಧ ಗ್ರಹವು ಧನು ರಾಶಿಯವರ ಮಾತಿಗೆ ಮಾಧುರ್ಯವನ್ನು ನೀಡುತ್ತದೆ. ಈ ಕಾರಣದಿಂದಾಗಿ, ಸಂಬಂಧವು ಉತ್ತಮವಾಗಿರುತ್ತದೆ. ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ, ಅದು ಭವಿಷ್ಯದಲ್ಲಿ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಆರ್ಥಿಕ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ.
ಮಕರ ರಾಶಿ:
ವಕ್ರಿ ಬುಧ ಮಕರ ರಾಶಿಯವರಿಗೆ ಕೆಲವು ಕೆಲಸಗಳಲ್ಲಿ ಜಯವನ್ನು ನೀಡುತ್ತದೆ. ಜಟಿಲವಾದ ವಿಷಯಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಉತ್ತಮ ಆರೋಗ್ಯವೂ ನಿಮ್ಮದಾಗಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.