Mercury Retrograde 2022: ಶೀಘ್ರದಲ್ಲಿಯೇ ಕನ್ಯಾ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ, ಯಾರಿಗೆ ಏನು ಲಾಭ-ನಷ್ಟ?

Budh Vakri 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ.  

Written by - Nitin Tabib | Last Updated : Sep 3, 2022, 12:49 PM IST
  • ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ.
  • ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ.
  • ಇನ್ನೊಂದೆಡೆ ಒಂದು ವೇಳೆ ಆತ ಅಶುಭನಾಗಿದ್ದರೆ, ವ್ಯಕ್ತಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ.
Mercury Retrograde 2022: ಶೀಘ್ರದಲ್ಲಿಯೇ ಕನ್ಯಾ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ, ಯಾರಿಗೆ ಏನು ಲಾಭ-ನಷ್ಟ? title=
Budh Vakri 2022

Budh Gochar 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ. ಇನ್ನೊಂದೆಡೆ ಒಂದು ವೇಳೆ ಆತ ಅಶುಭನಾಗಿದ್ದರೆ, ವ್ಯಕ್ತಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಸೆಪ್ಟೆಂಬರ್ 10ರಂದು ಬುಧ ಕನ್ಯಾ ರಾಶಿಯಲ್ಲಿ ವಕ್ರನಡೆ ಅನುಸರಿಸಲಿದ್ದಾನೆ. ಗ್ರಹಗಳು ವಕ್ರ ನಡೆ ಅನುಸರಿಸುವುದಕ್ಕೆ ಜೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಗ್ರಹಗಳ ಈ ವಕ್ರನಡೆಗಳು ಎಲ್ಲಾ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳನ್ನು ಬೀರುತ್ತವೆ. ಬುಧ ಕನ್ಯಾ ರಾಶಿಯಲ್ಲಿ ವಕ್ರನಡೆ ಅನುಸರಿಸುವುದರಿಂದ ಒಂದೆಡೆ ಕೆಲ ರಾಶಿಗಳ ಒಳ್ಳೆಯ ದಿನಗಳು ಆರಂಭಗೊಂಡರೆ, ಇನ್ನೊಂದೆಡೆ ಕೆಲ ರಾಶಿಗಳ ಜನರು ಎಚ್ಚರಿಕೆಯಿಂದ ಇರಬೇಕಾಗಲಿದೆ. ಬನ್ನಿ ತಿಳಿದುಕೊಳ್ಳೋಣ,

ಮೇಷ ರಾಶಿ - ಆತ್ಮ ವಿಶ್ವಾಸದಲ್ಲಿ ಹೆಚ್ಚಳ, ಮಾತಿನಲ್ಲಿ ಮಧುರತೆ ಹೆಚ್ಚಾಗಲಿದೆ.ಆದರೂ ಕೂಡ ಕುಟುಂಬದಲ್ಲಿ ಸದ್ಭಾವನೆ ಕಾಪಾಡಿ. ನೌಕರಿಯಲ್ಲಿ ಪರಿವರ್ತನೆಯ ಯೋಗ ನಿರ್ಮಾಣಗೊಳ್ಳುತ್ತಿದೆ. ಆದಾಯ ಹೆಚ್ಚಾಗಲಿದೆ. ಅತಿರೇಕದ ಕೋಪದಿಂದ ದೂರವಿರಿ. ಕುಟುಂಬದ ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ಯಶಸ್ಸು ಮತ್ತು ಬಡ್ತಿಯ ಮಾರ್ಗಗಳು ತೆರೆದುಕೊಳ್ಳಲಿದೆ. ಯಾತ್ರೆ ಕೈಗೊಳ್ಳಬೇಕಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಂಬಂಧಗಳಲ್ಲಿ ಮಧುರತೆ ಇರಲಿದೆ.

ವೃಷಭ ರಾಶಿ - ನಿಮ್ಮ ಸಂಗಾತಿಯ ಆರೋಗ್ಯದ ಕಾರಣ ನೀವು ತೊಂದರೆಗೊಳಗಾಗಬಹುದು. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗಲಿದೆ. ಉಡುಪಿನ ರೂಪದಲ್ಲಿ ಉಡುಗೊರೆಯನ್ನು ಪಡೆಯುವಿರಿ. ಮನಸ್ಸಿನಲ್ಲಿ ಸಕಾರಾತ್ಮಕತೆಯ ಪರಿಣಾಮ ಉಂಟಾಗಬಹುದು. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಗೆಳೆಯನ ಆಗಮನ. ವಾಹನ ನಿಮ್ಮ ಸಂತಸವನ್ನು ಹೆಚ್ಚಿಸಬಹುದು. ತಾಯಿಯ ಬೆಂಬಲವನ್ನು ಪಡೆಯುವಿರಿ. ಸ್ವಾವಲಂಬಿಯಾಗಿರಿ. ನಿಮಗೆ ಸ್ನೇಹಿತರ ಬೆಂಬಲ ಸಿಗಲಿದೆ.

ಮಿಥುನ ರಾಶಿ – ಮನಸ್ಸು ಚಂಚಲವಾಗಿರುತ್ತದೆ. ತಾಳ್ಮೆಯ ಕೊರತೆ ಕಾಡಲಿದೆ. ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು. ಉತ್ತಮ ಸ್ಥಿತಿಯಲ್ಲಿರಿ. ವಾಹನ ನಿರ್ವಹಣೆಗೆ ಖರ್ಚು ಹೆಚ್ಚಾಗಬಹುದು. ನಿಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿ. ಕೆಲಸದ ಸ್ಥಳದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ತಾಯಿಯಿಂದ ಹಣ ಪಡೆಯುವಿರಿ. ಮಿತ್ರರ ಸಹಕಾರದಿಂದ ವ್ಯಾಪಾರ-ವ್ಯವಹಾರದ ಬೆಳವಣಿಗೆಗೆ ಹಾದಿ ಸುಗಮವಾಗಲಿದೆ. ತಾಳ್ಮೆಯಿಂದಿರಿ.

ಕರ್ಕ ರಾಶಿ - ಭರವಸೆ ಮತ್ತು ಹತಾಶೆಯ ಭಾವನೆಗಳು ಮನಸ್ಸಿನಲ್ಲಿರಬಹುದು. ಉದ್ಯೋಗ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಆಡಳಿತದಲ್ಲಿ ನೆರವು ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೋಪದ ಕ್ಷಣಗಳು ಮತ್ತು ತೃಪ್ತಿಯ ಭಾವನೆಗಳು ಇರಲಿವೆ. ನೀವು ಮತ್ತೆ ಕೆಲವು ಹಳೆಯ ಸ್ನೇಹಿತರನ್ನು ಸಂಪರ್ಕಿಸಬಹುದು. ರುಚಿಕರವಾದ ಆಹಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದಲ್ಲಿ ತೊಂದರೆಗಳಿರಬಹುದು. ಖರ್ಚು ಜಾಸ್ತಿ ಇರಲಿದೆ.

ಸಿಂಹ ರಾಶಿ - ಸಂತೋಷ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಹಿರಿಯ ವ್ಯಕ್ತಿಯಿಂದ ಹಣವನ್ನು ಪಡೆಯುವಿರಿ. ಓಡಾಟ ಹೆಚ್ಚಗಿರಲಿದೆ. ಶಿಕ್ಷಣದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಆತ್ಮವಿಶ್ವಾಸದಿಂದಿರಿ, ಆದರೆ ಅತಿಯಾದ ಉತ್ಸಾಹದಿಂದ ದೂರವಿರಿ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರುತ್ತಿವೆ. ತಾಯಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು.

ಕನ್ಯಾ ರಾಶಿ - ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಸರ್ಕಾರದ ಬೆಂಬಲ ಸಿಗಲಿದೆ. ಕೆಲಸ ಒತ್ತಡ ಹೆಚ್ಚಾಗಲಿದೆ. ಸ್ವಾವಲಂಬಿಯಾಗಿರಿ. ಅತಿಯಾದ ಕೋಪವನ್ನು ತಪ್ಪಿಸಿ. ನಕಾರಾತ್ಮಕ ಆಲೋಚನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಕೋಪದ ಕ್ಷಣಗಳು ಒಂದು ಕ್ಷಣ ಮನಸ್ಸಿನಲ್ಲಿ ಉಳಿದು ಹೋಗುತ್ತವೆ. ನೀವು ಪೋಷಕರಿಂದ ಹಣಕಾಸಿನ ನೆರವು ಪಡೆಯಬಹುದು. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ.

ತುಲಾ ರಾಶಿ - ಮನಸ್ಸು ಚಂಚಲವಾಗಿರುತ್ತದೆ. ಸಮಚಿತ್ತದಿಂದಿರಿ. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಸ್ನೇಹಿತರ ಸಹಾಯವನ್ನು ಪಡೆಯಬಹುದು. ಲಾಭದ ಅವಕಾಶಗಳಿರುತ್ತವೆ. ತಾಳ್ಮೆಯ ಕೊರತೆ ಕಾಡಲಿದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ನೀವು ವ್ಯವಹಾರದಲ್ಲಿ ಪ್ರತಿಕೂಲತೆಯನ್ನು ಎದುರಿಸಬೇಕಾಗಬಹುದು. ವಿಪರೀತ ಕೋಪ ಇರುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಬಟ್ಟೆಯತ್ತ ಒಲವು ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ - ಆರೋಗ್ಯದ ಬಗ್ಗೆ ಎಚ್ಚರವಿರಲಿ. ಮಕ್ಕಳ ಸಂತಸ ಹೆಚ್ಚಾಗಲಿದೆ. ನೀವು ಮತ್ತೆ ಹಳೆಯ ಸ್ನೇಹಿತರನ್ನು ಸಂಪರ್ಕಿಸಬಹುದು. ಬಟ್ಟೆಯ ಮೇಲಿನ ಖರ್ಚು ಹೆಚ್ಚಾಗುತ್ತದೆ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿ ಉಳಿಯಲಿವೆ. ತಂದೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ನಕಾರಾತ್ಮಕ ಆಲೋಚನೆಗಳು ಪರಿಣಾಮ ಬೀರುತ್ತವೆ. ಸ್ನೇಹಿತರ ಸಹಾಯದಿಂದ ವ್ಯಾಪಾರವನ್ನು ವಿಸ್ತರಿಸಬಹುದು. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಇರಬಹುದು.

ಧನು ರಾಶಿ - ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಲಿವೆ. ಆದಾಯ ಹೆಚ್ಚಾಗಲಿದೆ. ಖರ್ಚು ಕೂಡ ಹೆಚ್ಚಾಗಲಿದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳ ಪ್ರಭಾವ ಇರುತ್ತದೆ. ಆತ್ಮವಿಶ್ವಾಸ ಕಡಿಮೆಯಾಗಲಿದೆ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ದೈನಂದಿನ ಚಟುವಟಿಕೆಗಳಲ್ಲಿ ತೊಂದರೆಗಳಿರಬಹುದು. ಸಹೋದರರ ಬೆಂಬಲ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ ರಾಶಿ - ವ್ಯಾಪಾರಕ್ಕಾಗಿ ವಿದೇಶ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಪ್ರಯಾಣದಿಂದ ಲಾಭದಾಯಕವಾಗಲಿದೆ. ನೀವು ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ಪಡೆಯುವಿರಿ. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ, ಆದರೆ ಮನಸ್ಸಿನಲ್ಲಿ ನಕಾರಾತ್ಮಕತೆ ಇರಬಹುದು. ಮನಸ್ಸು ಚಂಚಲವಾಗಿರುತ್ತದೆ. ವಿಪರೀತ ಕೋಪ ಇರುತ್ತದೆ. ಆಸ್ತಿ ಅಥವಾ ಕಟ್ಟಡದಿಂದ ಆದಾಯದ  ಬೆಳೆಯಬಹುದು. ಸಂಗಾತಿಯ ಬೆಂಬಲ ಸಿಗಲಿದೆ. ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.

ಕುಂಭ ರಾಶಿ - ಆತ್ಮವಿಶ್ವಾಸದಿಂದ ಇರುವಿರಿ, ಆದರೆ ಮನಸ್ಸು ವಿಚಲಿತವಾಗಬಹುದು. ಮನಸ್ಸಿನ ಶಾಂತಿಗಾಗಿ ಪ್ರಯತ್ನಿಸಿ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಕಡಿಮೆ ಆದಾಯ ಮತ್ತು ಹೆಚ್ಚಿನ ವೆಚ್ಚದ ಪರಿಸ್ಥಿತಿಯಿಂದ ನೀವು ತೊಂದರೆಗೊಳಗಾಗುವಿರಿ. ಸ್ವಭಾವದಲ್ಲಿ ಕಿರಿಕಿರಿ ಇರಲಿದೆ. ಅನಗತ್ಯ ಜಗಳಗಳು ಮತ್ತು ವಿವಾದಗಳನ್ನು ತಪ್ಪಿಸಿ. ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿರಬಹುದು.

ಇದನ್ನೂ ಓದಿ -Daily Horoscope 03 September 2022: ಇಂದು ಈ ರಾಶಿಗಳ ಜನರಿಗೆ ಸಿಗಲಿದೆ ಭಾಗ್ಯದ ಸಾಥ್, ನಿಮ್ಮ ರಾಶಿ ಫಲ ಓದಿ

ಮೀನ ರಾಶಿ - ಓದುವ ಆಸಕ್ತಿ ಹೆಚ್ಚಾಗುತ್ತದೆ. ಶೈಕ್ಷಣಿಕ ಕೆಲಸದ ಆಹ್ಲಾದಕರ ಫಲಿತಾಂಶಗಳು ಕಂಡುಬರುತ್ತವೆ. ನೀವು ಪೂರ್ವಜರ ಯಾವುದಾದರೊಂದು ಆಸ್ತಿಯಿಂದ ಹಣವನ್ನು ಪಡೆಯಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಖರ್ಚು ಜಾಸ್ತಿ ಇರುತ್ತದೆ. ಆತ್ಮವಿಶ್ವಾಸ ಕಡಿಮೆಯಾಗಲಿದೆ. ಕೆಲಸದ ಪರಿಸ್ಥಿತಿಗಳು ಸುಧಾರಿಸುತ್ತವೆ. ಕೆಲಸ ಹೆಚ್ಚಾಗಲಿದೆ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಮನಃಶಾಂತಿ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುವಿರಿ.

ಇದನ್ನೂ ಓದಿ-Astro Tips: ಮಕ್ಕಳಲ್ಲಿ ಹಲ್ಲುಗಳ ಬರುವಿಕೆಯೂ ಕೂಡ ಶುಭ-ಅಶುಭ ಸಂಕೇತಗಳನ್ನು ನೀಡುತ್ತವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News