Budha Gochara Lakshmi Narayana Rajayoga: ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ವ್ಯವಹಾರ, ಬುದ್ದಿ, ತರ್ಕದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಬುಧ ಗ್ರಹವು ಇತ್ತೀಚೆಗಷ್ಟೇ ಎಂದರೆ ಜುಲೈ 25, 2023 ರಂದು, ಸಿಂಹ ರಾಶಿಗೆ ಪ್ರವೇಶಿಸಿದೆ. ಸೂರ್ಯನ ರಾಶಿಯಲ್ಲಿ ಗ್ರಹಗಳ ರಾಜಕುಮಾರ ಬುಧನ ಪ್ರವೇಶದೊಂದಿಗೆ ಶುಭಕರ ಲಕ್ಷ್ಮೀನಾರಾಯಣ ಯೋಗವೂ ನಿರ್ಮಾಣವಾಗಿದೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಲಕ್ಷ್ಮೀನಾರಾಯಣ ಯೋಗದ ಪ್ರಭಾವದಿಂದಾಗಿ ಸಂಪತ್ತಿನ ದೇವತೆಯಾದ  ತಾಯಿ ಲಕ್ಷ್ಮಿ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಧನ-ಸಂಪತ್ತು, ರಾಜಯೋಗ ಕರುಣಿಸಲಿದ್ದಾಳೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಬುಧ ಸಂಚಾರದಿಂದ ಲಕ್ಷ್ಮಿನಾರಾಯಣ ರಾಜಯೋಗ: ಐದು ರಾಶಿಯವರಿಗೆ ಸುಖ-ಸಮೃದ್ಧಿ, ಧನ ಸಂಪತ್ತು ಪ್ರಾಪ್ತಿ: 
ಮೇಷ ರಾಶಿ: 

ಬುಧ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಿರುವ ಲಕ್ಷ್ಮೀನಾರಾಯಣ ಯೋಗದ ಶುಭ ಪರಿಣಾಮವು ಮೇಷ ರಾಶಿಯವರ ಜೀವನದಲ್ಲಿಯೂ ಕಂಡು ಬರುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ನಿಮ್ಮ ಮಾತೇ ಬಂಡವಾಳವಾಗಿದ್ದು ವಾಕ್ಚಾತುರ್ಯದಿಂದ ಪ್ರಗತಿಯನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವೂ ಇದೆ. 


ಮಿಥುನ ರಾಶಿ: 
ಬುಧ ರಾಶಿ ಬದಲಾವಣೆಯಿಂದ ರೂಪುಗೊಂಡಿರುವ ಶುಭಕರ ಲಕ್ಷ್ಮೀನಾರಾಯಣ ಯೋಗದ ಪರಿಣಾಮವಾಗಿ ಮಿಥುನ ರಾಶಿಯವರ ಅದೃಷ್ಟ ಹೊಳೆಯಲಿದೆ. ಈ ಸಮಯದಲ್ಲಿ ರಾಶಿಯಾಧಿಪತಿಯಾದ ಬುಧನ ಆಶೀರ್ವಾಡದೊಂದಿಗೆ ಲಕ್ಷ್ಮಿನಾರಾಯಣರ ಕೃಪೆಯೂ ನಿಮ್ಮ ಮೇಲಿರಲಿದ್ದು ನೀವು ಕೈಗೊಳ್ಳುವ ಕೆಲಸದಲ್ಲೆಲ್ಲಾ ಯಶಸ್ಸು ಪ್ರಾಪ್ತಿಯಾಗಲಿದೆ. ಅಷ್ಟೇ ಅಲ್ಲ, ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆಯೂ ಹೆಚ್ಚಾಗಲಿದೆ. 


ಇದನ್ನೂ ಓದಿ- Shani Gochar 2023: ಮೂರು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಮಾರ್ಗಿ ಶನಿ


ಸಿಂಹ ರಾಶಿ: 
ಸ್ವ ರಾಶಿಯಲ್ಲಿ ಬುಧ ಸಂಚಾರದಿಂದ ನಿರ್ಮಾಣವಾಗಿರುವ ರಾಜಯೋಗವು ಈ ರಾಶಿಯವರ ಜೀವನದಲ್ಲಿ ಧನ-ಸಂಪತ್ತನ್ನು ಕರುಣಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅಷ್ಟೇ ಅಲ್ಲ, ಬಹುದಿನದ ನಿಮ್ಮ ಕನಸುಗಳು ನನಸಾಗುವ ಸಮಯ ಇದಾಗಿದೆ. 


ತುಲಾ ರಾಶಿ: 
ಬುಧ ರಾಶಿ ಬದಲಾವಣೆಯಿಂದ ರೂಪುಗೊಂಡ ಲಕ್ಷ್ಮಿನಾರಾಯಣ ಯೋಗವು ತುಲಾ ರಾಶಿಯವರಿಗೆ ಧನಾತ್ಮಕ ಪರಿಣಾಮಗಳನ್ನು ತರಲಿದೆ. ಈ ಸಮಯದಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಇದರಿಂದಾಗಿ ಉದ್ಯೋಗ ವ್ಯವಹಾರದಲ್ಲಿ ಬಂಪರ್ ಪ್ರಗತಿ ಕಂಡು ಬರಲಿದೆ. ಅದರಲ್ಲೂ ವಿಶೇಷವಾಗಿ ಸೃಜನಶೀಲ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ವಿಶೇಷ ಪ್ರಯೋಜನವಾಗಲಿದೆ. 


ಇದನ್ನೂ ಓದಿ- Gajalakshmi Raja Yoga: ಗಜಲಕ್ಷ್ಮಿ ರಾಜಯೋಗದಿಂದ ಈ 4 ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!


ಕುಂಭ ರಾಶಿ: 
ಬುಧ ಸಂಕ್ರಮನದಿಂದ ನಿರ್ಮಾಣವಾದ ಲಕ್ಷ್ಮೀನಾರಾಯಣ ಯೋಗದ ಶುಭ ಪರಿಣಾಮದಿಂದಾಗಿ ತಾಯಿ ಮಹಾಲಕ್ಷ್ಮಿ ಕುಂಭ ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಸಲಿದ್ದಾಳೆ. ಹೊಸ ವ್ಯವಹಾರ ಆರಂಭಿಸಲು ಒಳ್ಳೆಯ ಸಮಯ ಇದಾಗಿದ್ದು ಕೈ ಹಾಕುವ ಕೆಲಸಗಳಲ್ಲಿ ವಿಜಯಲಕ್ಷ್ಮಿಯ ಆಶೀರ್ವಾದ ಇರಲಿದೆ. ಆರ್ಥಿಕ ಸ್ಥಿತಿಯೂ ಸುಧಾರಿಸಲಿದ್ದು ನಿಮ್ಮ ಬಹಳ ದಿನಗಳ ಮನೆ, ವಾಹನ ಖರೀದಿಯ ಕನಸು ನನಸಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ