Mahashivaratri: ಮಹಾಶಿವರಾತ್ರಿ ಯಾವಾಗ? ಮಾರ್ಚ್ 8 ಅಥವಾ 9…! ಪೂಜಾ ಸಮಯ ಸೇರಿ ಸ್ಪಷ್ಟ ಮಾಹಿತಿ ಇಲ್ಲಿದೆ
Mahashivaratri 2024 Date and time: ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ದಶಿ ತಿಥಿಯ ದಿನದಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷ ಮಹಾಶಿವರಾತ್ರಿ ಯಾವ ದಿನ ಬರುತ್ತದೆ? ಮಾರ್ಚ್ 8 ಅಥವಾ 9? ಈ ವರದಿಯಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.
Mahashivaratri 2024 Date and time: ಮಹಾಶಿವರಾತ್ರಿಯು ಮಹಾದೇವನಿಗೆ ಸಮರ್ಪಿತವಾದ ದಿನ. ಅಂದಹಾಗೆ ಈ ದಿನವನ್ನು ಶಿವ ಪಾರ್ವತಿಯ ಮದುವೆಯ ದಿನ ಎಂದೂ ಕರೆಯಲಾಗುತ್ತದೆ. ಶಿವರಾತ್ರಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಬ್ಬವಾಗಿದ್ದು, ದೇಶದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಚತುರ್ದಶಿ ತಿಥಿಯ ದಿನದಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ವರ್ಷ ಮಹಾಶಿವರಾತ್ರಿ ಯಾವ ದಿನ ಬರುತ್ತದೆ? ಮಾರ್ಚ್ 8 ಅಥವಾ 9? ಈ ವರದಿಯಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ.
ಇದನ್ನೂ ಓದಿ: ಆರೋಪಿಯ ಸುಳಿವು ಸಿಕ್ಕಿದೆ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಸಚಿವ ಜಿ ಪರಮೇಶ್ವರ್ ಹೇಳಿಕೆ
ಮಹಾಶಿವರಾತ್ರಿ 2024 ಶುಭ ಸಮಯ:
ಮಾರ್ಚ್ 8 ರಂದು ರಾತ್ರಿ 09:57 ಕ್ಕೆ ಮಹಾಶಿವರಾತ್ರಿ ಪ್ರಾರಂಭವಾಗುತ್ತದೆ. ಚತುರ್ದಶಿ ತಿಥಿ ಮರುದಿನ ಅಂದರೆ 9 ರಂದು ಸಂಜೆ 6:17 ಕ್ಕೆ ಕೊನೆಗೊಳ್ಳುತ್ತದೆ. ಸಂಜೆ ಶಿವರಾತ್ರಿ ಪೂಜೆ ನಡೆಯುವುದು ವಿಶೇಷ. ಮಾರ್ಚ್ 8 ರಂದು ಸಂಜೆ 6:25 ರಿಂದ 9:28 ರವರೆಗೆ ಶಿವನ ಆರಾಧನೆಗೆ ಬಹಳ ಶುಭ ಸಮಯವಾಗಿದೆ.
ಇಂದು ಶಿವಭಕ್ತರು ಆತನಿಗಾಗಿ ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಶಿವನಿಗೆ ಅಭಿಷೇಕ ಮತ್ತು ರುದ್ರಾಭಿಷೇಕವನ್ನು ಮಾಡಲಾಗುತ್ತದೆ, ಜೊತೆಗೆ ಶಿವಮಂತ್ರವನ್ನು ಪಠಿಸಲಾಗುತ್ತದೆ. ಹೀಗೆ ಮಾಡುವುದರಿಂದ ದೇವರ ಕೃಪೆ ಅವರ ಮೇಲಿರುತ್ತದೆ ಎಂಬ ನಂಬಿಕೆ ಇದೆ.
ಶಿವರಾತ್ರಿ ಪೂಜಾ ವಿಧಾನ
ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ. ಪೂಜಾ ಮಂದಿರದಲ್ಲಿ ಶಿವನಿಗಾಗಿ ದೀಪ ಬೆಳಗಿಸಿ ಪೂಜಿಸಿ. ಮೇಲಾಗಿ ಸಮೀಪದ ಶೈವಾಲಯಗಳಿಗೆ ತೆರಳಿ ಜಲಾಭಿಷೇಕ ಮಾಡಿ ಶಿವನಿಗೆ ಪಂಚಾಮೃತ ಅರ್ಪಿಸಿ. ಪಂಚಾಮೃತದಲ್ಲಿ ಹಾಲು, ಮೊಸರು, ಜೇನುತುಪ್ಪ, ಸಕ್ಕರೆ ಮತ್ತು ತುಪ್ಪವಿರಬೇಕು. ಈ ಪಂಚ ಅಮೃತಗಳನ್ನು ಶಿವನಿಗೆ ಅರ್ಪಿಸಿ.
ಶಿವನ ಮಂತ್ರಗಳು
ಓಂ ನಮಃ ಶಿವಾಯ
ಓಂ ತ್ರ್ಯಯಂಬಕಂ ಯಜಾಮಹೇ ಸುಗನ್ಧಿಂ ಪುಷ್ಟಿ
ವರ್ಧನಂ ಉರ್ವರುಕ್ಮಿವ್ ಬನ್ಧನಂ ಮೃತ್ಯಯೋರ್ ಮುಕ್ಷೀಯ ಮಾಮೃತಾತ್
ಇದನ್ನೂ ಓದಿ: IPL ಆರಂಭಕ್ಕೂ ಮುನ್ನ SRHನಲ್ಲಿ ಬದಲಾವಣೆ! ನೂತನ ನಾಯಕನಾಗಿ ವಿಶ್ವಕಪ್ ಗೆದ್ದ ವೀರನಿಗೆ ‘ಪಟ್ಟ'
ಮಹಾಶಿವರಾತ್ರಿಯ ಈ ದಿನದಂದು ಉಪವಾಸ ಮತ್ತು ಜಾಗರಣೆಯಿಂದ ಮನಸ್ಸನ್ನು ಶಾಂತವಾಗಿರಿಸಿ. ಶಿವರಾತ್ರಿ ಆಚರಣೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ, ನೇಪಾಳದಂತಹ ದಕ್ಷಿಣ ಏಷ್ಯಾದ ಇತರ ದೇಶಗಳಲ್ಲಿಯೂ ಆಚರಿಸಲಾಗುತ್ತದೆ. ಶೈವ ಕ್ಷೇತ್ರಗಳಾದ ಕೋನಾರ್ಕ್, ಖಜುರಾಹೊ, ಚಿದಂಬರಂ, ಶ್ರೀಶೈಲಂಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಪರಿಶೀಲಿಸಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ