Rameswaram Cafe Bomb Blast: ಆರೋಪಿಯ ಸುಳಿವು ಸಿಕ್ಕಿದೆ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಸಚಿವ ಜಿ ಪರಮೇಶ್ವರ್ ಹೇಳಿಕೆ

Rameswaram Cafe Bomb Blast: ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದ್ದು, ವಿಶೇಷ ಪೊಲೀಸ್ ತಂಡಗಳು ತನಿಖೆಯನ್ನು ತೀವ್ರಗೊಳಿಸಿವೆ. ಜೊತೆಗೆ NIA ಮತ್ತು NSG ತಂಡದವರೂ ತನಿಖೆ ನಡೆಸುತ್ತಿದ್ದಾರೆ. FSL​​ ಅಧಿಕಾರಿಗಳು ಈಗಾಗಲೇ ಸ್ಫೋಟದ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ.

Written by - Prashobh Devanahalli | Edited by - Bhavishya Shetty | Last Updated : Mar 3, 2024, 02:36 PM IST
    • ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ
    • ವಿಶೇಷ ಪೊಲೀಸ್ ತಂಡಗಳು ತನಿಖೆಯನ್ನು ತೀವ್ರಗೊಳಿಸಿವೆ
    • ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದ ಗೃಹ ಸಚಿವ ಜಿ ಪರಮೇಶ್ವರ್
Rameswaram Cafe Bomb Blast: ಆರೋಪಿಯ ಸುಳಿವು ಸಿಕ್ಕಿದೆ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಸಚಿವ ಜಿ ಪರಮೇಶ್ವರ್ ಹೇಳಿಕೆ title=
Rameshwaram Cafe Bomb Blast Case

ಬೆಂಗಳೂರು: ವೈಟ್‌ಫೀಲ್ಡ್‌’ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದ್ದು, ವಿಶೇಷ ಪೊಲೀಸ್ ತಂಡಗಳು ತನಿಖೆಯನ್ನು ತೀವ್ರಗೊಳಿಸಿವೆ. ಜೊತೆಗೆ NIA ಮತ್ತು NSG ತಂಡದವರೂ ತನಿಖೆ ನಡೆಸುತ್ತಿದ್ದಾರೆ. FSL​​ ಅಧಿಕಾರಿಗಳು ಈಗಾಗಲೇ ಸ್ಫೋಟದ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ಫೋಟಿಸಿದ ವ್ಯಕ್ತಿಯ ಮಾಹಿತಿ ಸಿಕ್ಕಿದೆ. ವ್ಯಕ್ತಿಯನ್ನು ಆದಷ್ಟು ಬೇಗ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:  IPL ಆರಂಭಕ್ಕೂ ಮುನ್ನ SRHನಲ್ಲಿ ಬದಲಾವಣೆ! ನೂತನ ನಾಯಕನಾಗಿ ವಿಶ್ವಕಪ್ ಗೆದ್ದ ವೀರನಿಗೆ ‘ಪಟ್ಟ'

ಸಂಭವಿಸಿದ ದಿನ ನಾನು ಸ್ಥಳಕ್ಕೆ ಹೋಗಿದ್ದೆ. ರಾಮೇಶ್ವರಂ ಕೆಫೆ​ಯವರು 12 ಕಡೆ ಹೊಟೇಲ್ ಪ್ರಾರಂಭ ಮಾಡಿದ್ದಾರೆ. ಉದ್ಯಮದಲ್ಲಿನ ಬೆಳವಣಿಗೆಯನ್ನು ಸಹಿಸಲಾಗದವರು ಈ ರೀತಿ ಮಾಡಿರಬಹುದು ಎಂದು ಅಲ್ಲಿನ ಜನ ಹೇಳ್ಳುತ್ತಿದ್ದರು. ಇದಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನು ಅಸುರಕ್ಷಿತ ನಗರ ಮಾಡಬೇಕು ಎನ್ನುವ ಸಂಚು ಇದೆ. ನಗರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಈ ಸಮಯದಲ್ಲಿ ಆತಂಕ ಸೃಷ್ಟಿಸಿದರೆ ಬಂಡವಾಳ ಹಾಕುವವರು ಬರುವುದಿಲ್ಲ ಅಂತ ಹೀಗೆ ಮಾಡಿರಬಹುದು. ಅಥವಾ ಬೇರೆ ಯಾವುದೋ ಕಾರಣ ಇರಬಹುದು. ಒಟ್ಟಿನಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ಪ್ರಕರಣ ಬೇಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರು ಕುಕ್ಕರ್ ಸ್ಫೋಟಕ್ಕೂ ಮತ್ತು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಟೆಕ್ನಿಕಲ್ ಸಾಮ್ಯತೆ ಇದೆ. ಹಾಗಂತ ಅವರೇ ಮಾಡಿದ್ದಾರೆ ಅಂಥ ಅರ್ಥ ಅಲ್ಲ. ಬ್ಯಾಟರಿ, ಮೊಳೆ, ಟೈಮರ್ ಎಲ್ಲವನ್ನು ನೋಡಿದರೆ ಸಾಮ್ಯತೆ ಇದೆ. ಈ ಬಗ್ಗೆ ಇನ್ನೂ ತನಿಖೆ ಮಾಡಬೇಕು ಎಂದರು.

ಬಾಂಬ್ ತೀವ್ರತೆ ಬಹಳ ಕಡಿಮೆ ಇದೆ. ಹೀಗಾಗಿ‌ ದೊಡ್ಡ ಅನಾಹುತ ಆಗಿಲ್ಲ. ಸಾಮರ್ಥ್ಯ ಕಡಿಮೆ ಇರಬಹುದು. ಹೆಚ್ಚು ಶಕ್ತಿಯುತವಾದ ಸ್ಫೋಟಕ ಉಪಯೋಗಿಸಿದ್ದರೇ ಪರಿಣಾಮ ಹೆಚ್ಚಾಗುತ್ತಿತ್ತು. ಬಾಂಬ್ ಸಿಡಿದಾಗ ಮೊಳೆಗಳು, ನಟ್’​​ಗಳು ಎಲ್ಲವೂ ಮೇಲೆ ಹೋಗಿವೆ. ಅದು ಮೇಲೆ ಹೋಗದೆ ಪಕ್ಕಕ್ಕೆ ಸಿಡಿದಿದ್ದರೆ ಬಹಳ‌ ಜನರ ಪ್ರಾಣಾಪಾಯ ಆಗುತ್ತಿತ್ತು ಎಂದು ಹೇಳಿದರು ‌

ಪಾಕಿಸ್ತಾನ ಪರ ಘೋಷಣೆ ಎಂಬ ಪ್ರಕರಣದಲ್ಲಿ FSL​​ ವರದಿ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವತ್ತೂ 48 ಗಂಟೆಯಲ್ಲಿ ವರದಿ ಬರುತ್ತೆ ಅಂತಾ ಹೇಳಿಲ್ಲ. 5-6 ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕಾಗುತ್ತದೆ, FSL ​​ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕೆಲಸ ಬಿಟ್ಟು ಇದನ್ನೇ ಮೊದಲು ಮಾಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಪೋಲಿಯೋ ನಿರ್ಮೂಲನೆ ಸ್ಥಿತಿಯನ್ನು ಕಾಯ್ದುಕೊಳ್ಳುವುದು ಮುಖ್ಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಇನ್ನು ಶರಣಪ್ರಕಾಶ ಪಾಟೀಲ್​ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಹೆಚ್ಚು ಮಾಹಿತಿ ಇರುವುದಿಲ್ಲ. ನೀವೆಲ್ಲ ಹೋಗಿ ಕೇಳಿದಾಗ ಹೇಳಿರುತ್ತಾರೆ. ಅದು ಅಧಿಕೃತ ಎಂದು ಅನ್ನಿಸುವುದಿಲ್ಲ. ಅವರ ದೃಷ್ಟಿಕೋನದಲ್ಲಿ ಅವರು ಹೇಳಿರುತ್ತಾರೆ. ನಾವು ಅನೇಕ ಮಾಹಿತಿಯನ್ನು ಇಟ್ಟುಕೊಂಡು ಹೇಳಿರುತ್ತೇವೆ. ನಾನು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದಾಗ ಜವಾಬ್ದಾರಿಯಿಂದ ಹೇಳಿರುತ್ತೇವೆ‌. ಎಲ್ಲರಿಗೂ ವಿನಂತಿ ಮಾಡಿಕೊಳ್ಳುತ್ತೇನೆ, ಮುಖ್ಯಮಂತ್ರಿ, ನಾನು ಅಥವಾ ಗೃಹ ಇಲಾಖೆ ಹೇಳಿದರೇ ಮಾತ್ರ ಅಧಿಕೃತ ಹೇಳಿಕೆ ಎಂದು ಪರಿಗಣಸಿಬೇಕು ಎಂದು ತಿಳಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News