Bruhaspati Uday 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ಅವಧಿಯವರೆಗೆ ಒಂದೇ  ಸ್ಥಿತಿಯಲ್ಲಿ ಉಳಿದುಕೊಂಡ ನಂತರ, ಅದು ತನ್ನ ಸ್ಥಾನವನ್ನು ಪರಿವರ್ತಿಸುತ್ತದೆ. ಇನ್ನೊಂದೆಡೆ ಗ್ರಹಗಳು ಅಸ್ತಮಿಸುವುದು ಮತ್ತು ಉದಯಿಸುವುದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಪಂಚಾಂಗದ ಪ್ರಕಾರ, ದೇವಗುರು ಬೃಹಸ್ಪತಿ 22 ಏಪ್ರಿಲ್ 2023 ರಂದು ಬೆಳಗ್ಗೆ 05.46 ಕ್ಕೆ ಮೀನ ರಾಶಿಯಲ್ಲಿ ಉದಯಿಸಲಿದೆ. ಗುರುವು ಉದಯಿಸಿದಾಗ ಅಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ರೂಪುಗೊಳ್ಳಲಿದೆ. ಇದು ಮೂರು ರಾಶಿಗಳ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಅವರು ಅಪಾರ ಆರ್ಥಿಕ ಲಾಭವನ್ನು ಪಡೆಯುವ ನಿರೀಕ್ಷೆ ಇದ್ದು, ಜೀವನದಲ್ಲಿ ಪ್ರಗತಿಯ ಲಕ್ಷಣಗಳು ಗೋಚರಿಸುತ್ತಿವೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ
ಮಿಥುನ ರಾಶಿಯವರಿಗೆ ತ್ರಿಕೋನ ರಾಜಯೋಗದಿಂದ ಸಾಕಷ್ಟು ಲಾಭ ಸಿಗಲ್ಲಿದೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಲಾಭವಾಗುವ ಲಕ್ಷಣಗಳಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಮಾತಿನಲ್ಲಿ ಮಧುರತೆ ಇರಲಿದೆ. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಕಾಣಬಹುದು. ಆತ್ಮವಿಶ್ವಾಸ ಹೆಚ್ಚಾಗಲಿದೆ.


ಇದನ್ನೂ ಓದಿ-Mahashivratri 2023 ದಿನ ವಿಶೇಷ ಕಾಕತಾಳೀಯ ನಿರ್ಮಾಣ, ಹೊಳೆಯಲಿದೆ ಈ ಜನರ ಭಾಗ್ಯ!


ಕರ್ಕ ರಾಶಿ
ಕರ್ಕ ರಾಶಿಯವರ ಮೇಲೆ  ಗುರುಗ್ರಹದ ಉದಯ ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ. ನಿಮ್ಮ ಸ್ಥಗಿತಗೊಂಡ ಕಾಮಗಾರಿಗಳು ಈ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಅದೃಷ್ಟದ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಕ್ಕಾಗಿ ಪ್ರವಾಸಕ್ಕೆ ಹೋಗಬಹುದು. ವಿದೇಶದಲ್ಲಿ ಶಿಕ್ಷಣಕ್ಕೆ ಹೊಸ ಅವಕಾಶಗಳನ್ನು ನೀವು ಪಡೆಯಬಹುದು.


ಇದನ್ನೂ ಓದಿ-12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!


ಕುಂಭ ರಾಶಿ
ತ್ರಿಕೋನ ರಾಜಯೋಗ ಕುಂಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಫಲದಾಯಿ ಸಾಬೀತಾಗಲಿದೆ. ಹೊಸ ಉದ್ಯೋಗಾವಕಾಶಗಳು ಲಭಿಸಬಹುದು. ಬಡ್ತಿಯ ಅವಕಾಶಗಳು ಸೃಷ್ಟಿಯಾಗುತ್ತಿವೆ. ಹೂಡಿಕೆ ಲಾಭ ಸಿಗಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.


ಇದನ್ನೂ ಓದಿ-February 27 ರಿಂದ ಗ್ರಹಗಳ ರಾಜಕುಮಾರನ ವಿಶೇಷ ಕೃಪೆಯಿಂದ ಈ 3 ರಾಶಿಗಳ ಭಾಗ್ಯೋದಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್