Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಪ್ರತಿಪದಾ ನಕ್ಷತ್ರ, ಮಂಗಳವಾರದ ಈ ದಿನ ಪೂ.ಷಾ. ನಕ್ಷತ್ರ, ಧ್ರುವ ಯೋಗ, ಕಿಂಸ್ತುಘ್ನ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ದಿನ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ವ್ಯವಹಾರದಲ್ಲಿ ಹಣಕಾಸಿನ ಸ್ಥಿರತೆಗಾಗಿ ಇಂದು ಹೆಚ್ಚು ಪ್ರಯತ್ನ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಿ ಸಂತಸದ ವಾತಾವರಣ ನೀರ್ಮಾನವಾಗಲಿದೆ. ಆಸ್ತಿ ಸಂಬಂಧಿಸಿದಂತೆ ಶುಭ ಸುದ್ದಿಯೊಂದನ್ನು ಕೇಳುವಿರಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ದೈನಂದಿನ ವೆಚ್ಚಗಳ ವಿಶ್ಲೇಷಣೆಯು ಬಜೆಟ್ ಅನ್ನು ಪುನರ್ನಿರ್ಮಾಣ ಮಾಡಲು ಸಹಾಯಕವಾಗಿದೆ. ಕೆಲಸದಲ್ಲಿ ನಿಮ್ಮ ಬದ್ದತೆಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಪ್ರಯಾಣದಿಂದ ಸರಾಸರಿ ಫಲಿತಾಂಶವನ್ನು ಮಾತ್ರ ನಿರೀಕ್ಷಿಸಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹಣಕಾಸು ಲಾಭಗಳು ನಿಮ್ಮ ವಿತ್ತೀಯ ಪರಿಸ್ಥಿತಿಯನ್ನು ಬಳಪಡಿಸುತ್ತದೆ. ಇಂದು ಕುಟುಂಬದಲ್ಲಿ ಸಂತೋಷ ತುಂಬಿರಲಿದೆ. ನಿಮ್ಮ ಕಾರ್ಯಯೋಜನೆಗಳ ಬಗ್ಗೆ ಸೂಕ್ಷ್ಮವಾಗಿರಿ, ಪ್ರಯಾಣದಿಂದ ಉತ್ತಮ ಫಲಗಳು ದೊರೆಯಲಿವೆ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಉತ್ತಮ ಆದಾಯದ ಭರವಸೆ ನೀಡುವ ಹೂಡಿಕೆಗಳಲ್ಲಿ ಹಣ ಹಾಕುವುದನ್ನು ಪರಿಗಣಿಸಿ. ನಿಮ್ಮ ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಯುವಕರಿದ್ದರೆ ಅವರೊಂದಿಗೆ ಸ್ವಲ್ಪ ತಾಳ್ಮೆಯನ್ನು ಕಾಪಾಡಿಕೊಳ್ಳಿ. 


ಇದನ್ನೂ ಓದಿ- ಹೊಸ ವರ್ಷದಲ್ಲಿ ಲಕ್ಷ್ಮಿ ನಾರಾಯಣ ಯೋಗದಿಂದ 5 ರಾಶಿಯವರಿಗೆ ಜಾಕ್ ಪಾಟ್, ಹೆಜ್ಜೆ ಹೆಜ್ಜೆಗೂ ಯಶಸ್ಸು, ಹಣದ ಸುರಿಮಳೆ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಷ್ಕ್ರಿಯ ಆದಾಯ ಮೂಲಗಳು ನಿಮ್ಮ ಗಳಿಕೆಯನ್ನು ಹೆಚ್ಚಿಸಲಿದೆ. ಮನೆಯಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಪ್ರಯಾಣವು ನಿಮಗೆ ಶಾಶ್ವತವಾದ ಸಿಹಿ ನೆನಪನ್ನು ನೀಡಬಹುದು. ಮಾನಸಿಕ ಶಾಂತಿಗಾಗಿ ಕೆಲ ಸಮಯ ಧ್ಯಾನ ಮಾಡುವುದನ್ನು ಪರಿಗಣಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಬಾಡಿಗೆಯಿಂದ ನಿಮ್ಮ ಸಂಪತ್ತು ಹೆಚ್ಚಾಗಬಹುದು. ಸಂಬಂಧಗಳನ್ನು ಬಲಪಡಿಸಲು ಕುಟುಂಬದೊಂದಿಗೆ ಸಮಯ ಕಳೆಯಿರಿ. ಅಗತ್ಯವಿದ್ದರೆ ನಿಮ್ಮ ಹಿರಿಯರ ಸಹಾಯವನ್ನು ಪಡೆಯಿರಿ. ಹೊಸ ಆಸ್ತಿ ವ್ಯವಹಾರಗಳಲ್ಲಿ ಆಕರ್ಷಕ ಕೊಡುಗೆಗಳನ್ನು ನಿರೀಕ್ಷಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನೀವಿಂದು ಉದ್ವೇಗದ ವರ್ತನೆಯನ್ನು ತಪ್ಪಿಸಿ. ಕುಟುಂಬದ ಸದಸ್ಯರು ನಿಮ್ಮಿಂದ ಹೆಚ್ಚು ತಿಳುವಳಿಕೆಯನ್ನು ಬಯಸಬಹುದು. ಮೇಲ್ವಿಚಾರಕರು ನಿಮ್ಮ ಕೆಲಸದ ಕಾರ್ಯಕ್ಷಮತೆಯನ್ನು ಹೊಗಳುವರು. ಕುಟುಂಬದೊಂದಿಗೆ ಪ್ರವಾಸವು ಆಹ್ಲಾದಕರವಾಗಿರುತ್ತದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಗೆ ನೆಟ್ವರ್ಕಿಂಗ್ ಅಗತ್ಯವೈರುತ್ತದೆ. ಮನೆಯಲ್ಲಿ ಸೂಕ್ಷ್ಮ ಸಮಸ್ಯೆಗಳು ಸುಲಭವಾಗಿ ಬಗೆಹರಿಯಲ್ಪಡುತ್ತವೆ. ಪ್ರಯಾಣವು ಆನಂದ ಮತ್ತು ಲಾಭದಾಯಕವಾಗಿರುತ್ತದೆ. 


ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ನಿಮ್ಮ ಲವ್ ಲೈಫ್ ಹೇಗಿರುತ್ತೆ ಗೊತ್ತಾ...! 


ಧನು ರಾಶಿಯವರ ಭವಿಷ್ಯ (Sagittarius Horoscope):  
ವೃತ್ತಿಪರವಾಗಿ ಹೊಸ ಕಲ್ಪನೆಗಳನ್ನು ಕಾರ್ಯಗತಗೊಳಿಸುವುದನ್ನು ಪರಿಗಣಿಸಿ. ಮಕ್ಕಳಿಗಾಗಿ ಹೆಚ್ಚು ಖರ್ಚಾಗಬಹುದು. ಮನೆಯಲ್ಲಿ ಶಾಂತಿ ವಾತಾವರಣವು ಆರೋಗ್ಯವನ್ನು ಸುಧಾರಿಸುತ್ತದೆ. ಪ್ರಯಾಣವು ನಿಮಗೆ ಇಂದು ತೃಪ್ತಿಕರವಾಗಿರುತ್ತದೆ. ಸಂಪತ್ತು ಹೆಚ್ಚಾಗಲಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಅನಿರೀಕ್ಷಿತ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಹಾಳುಮಾಡಬಹುದು. ಉದ್ಯೋಗ ಸ್ಥಳದಲ್ಲಿ ಕೆಲಸವನ್ನು ಸಮವಾಗಿ ವಿಭಜಿಸುವುದರಿಂದ ಶಾಂತಿಯನ್ನು ಕಾಣಬಹುದು. ಆಸ್ತಿ ವ್ಯವಹಾರಗಳಲ್ಲಿ ಹೆಚ್ಚುವರಿ ಪ್ರಯತ್ನದ ಅಗತ್ಯವಿರುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಹಣಕಾಸಿನ ಬೆಳವಣಿಗೆಗಾಗಿ ಸ್ಮಾರ್ಟ್ ವರ್ಕ್ ಮಾಡುವುದನ್ನು ಪರಿಗಣಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗಬಹುದು. ಸ್ವಲ್ಪ ಬುದ್ದಿವಂತಿಕೆಯಿಂದ ಇವುಗಳನ್ನು ನಿಭಾಯಿಸಿದರೆ ಯಶಸ್ಸು. ಪೂರ್ವಿಕರಿಂದ ಆಸ್ತಿ ಪಡೆಯಬಹುದು. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಯಾವುದೇ ಹಣಕಾಸಿನ ನಿರ್ಧಾರ ಕೈಗೊಳ್ಳುವಾಗ ಭದ್ರತೆಯ ಬಗ್ಗೆ ಎರಡು ಬಾರಿ ಯೋಚಿಸಿ. ಕೌಟುಂಬಿಕ ತಪ್ಪು ತಿಳುವಳಿಕೆಗಳು ಒತ್ತಡಕ್ಕೆ ಕಾರಣವಾಗಬಹುದು. ಹೊಸ ಸಹೋದ್ಯೋಗಿಗಳೊಂದಿಗೆ ಸ್ಪರ್ಧೆ ಹೆಚ್ಚಾಗಬಹುದು.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.