Rahu Dosha Upay: ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ನವ ಗ್ರಹಗಳಲ್ಲಿ ರಾಹು ಗ್ರಹವೂ ಒಂದು. ವೈದಿಕ ಜ್ಯೋತಿಷ್ಯದ ಪ್ರಕಾರ, ಸದಾ ಹಿಮ್ಮುಖವಾಗಿ ಚಲಿಸುವ ರಾಹು ಗ್ರಹವನ್ನು ಪಾಪ ಗ್ರಹ ಎಂದು ಪರಿಗಣಿಸಲಾಗಿದೆ. ರಾಹು ಹೆಸರು ಕೇಳಿದೊಡನೆಯೇ ಒಂದು ರೀತಿಯ ಆತಂಕ ಮನದಲ್ಲಿ ಮನೆಮಾಡುತ್ತದೆ. ಇದಕ್ಕೆ ಪ್ರಮುಖ ಕಾರಣ, ಯಾವ ವ್ಯಕ್ತಿಯ ಜಾತಕದಲ್ಲಿ ರಾಹು ದೋಷವಿರುತ್ತದೆಯೋ ಅವರನ್ನು ರಾಹು ಬೆಂಬಿಡದೆ ಕಾಡುತ್ತಾನೆ. ಅವರ ಜೀವನದಲ್ಲಿ ನಾನಾ ರೀತಿಯ ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುತ್ತಾನೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ದೋಷಕ್ಕೂ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಆದರೆ, ಆ ದೋಷವನ್ನು ಕಂಡು ಹಿಡಿಯುವುದು ಬಹಳ ಮುಖ್ಯ. ಹಾಗಿದ್ದರೆ, ಜಾತಕದಲ್ಲಿ ರಾಹು ದೋಷವಿದೆ ಎಂಬುದನ್ನು ಹೇಗೆ ಪತ್ತೆ ಹಚ್ಚುವುದು. ರಾಹು ದೋಷದ ಅಡ್ಡಪರಿಣಾಮಗಳನ್ನು ತಪ್ಪಿಸುವುದು ಹೇಗೆ? ರಾಹು ದೋಷಕ್ಕೆ ಪರಿಹಾರಗಳೇನು ಎಂದು ತಿಳಿಯೋಣ...


ಇದನ್ನೂ ಓದಿ- ಕೊಳ್ಳೇಗಾಲ: ತಟ್ಟೆ ಕಾಸಿಗಾಗಿ ಅರ್ಚಕರ ಹೊಡೆದಾಟ- CCTVಯಲ್ಲಿ ದೃಶ್ಯ ಸೆರೆ


ಇವು ರಾಹು ದೋಷದ ಸಂಕೇತವೂ ಆಗಿರಬಹುದು:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಒಂದು ನೆರಳು ಗ್ರಹ. ಈ ಗ್ರಹವು ಯಾವುದೇ ಒಂದು ರಾಶಿ ಚಕ್ರದಲ್ಲಿ ಸುಮಾರು ಒಂದೂವರೆ ವರ್ಷ ಅಂದರೆ 18 ತಿಂಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ. 
ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಸ್ಥಳೀಯರ ಮೇಲೆ ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ರಾಹು ದೋಷದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ- 
* ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೆಲಸ ಕೈಗೂಡದೇ ಇರುವುದು.
* ಪ್ರತಿ ಕೆಲಸದಲ್ಲಿಯೂ ತೊಂದರೆ.
* ಹಠಾತ್ ನಷ್ಟ ಉಂಟಾಗುವುದು.
* ಕುಟುಂಬದಿಂದ ದೂರವಾಗುವುದು.
* ಮಾದಕ ವ್ಯಸನಕ್ಕೆ ತುತ್ತಾಗುವುದು.
* ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು.
* ಮನಃ ಶಾಂತಿಯ ಕೊರತೆ.
* ಸದಾ ಒಂದಿಲ್ಲೊಂದು ಚಿಂತೆ ಬಾಧಿಸುವುದು.
* ಅನಗತ್ಯ ತಿರುಗಾಟ, ಅಧಿಕ ವೆಚ್ಚ. 
* ಮನೆಯಲ್ಲಿ ಇದ್ದಕ್ಕಿದ್ದಂತೆ ಗಾಜು ಅಥವಾ ಪಿಂಗಾಣಿ ವಸ್ತುಗಳು ಒಡೆಯುವುದು.
* ಆಗಾಗ್ಗೆ ಮನೆಯಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು.


ಇದನ್ನೂ ಓದಿ- ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಯವರ ಎಲ್ಲಾ ಕಷ್ಟಗಳಿಗೆ ತೆರೆ.! ಕೈ  ಹಿಡಿಯುವುದು ಅದೃಷ್ಟ.! 


ರಾಹುವಿನ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಪರಿಹಾರಗಳು:
* ರಾಹು ದೋಷವನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ನಾಯಿಗೆ ಆಹಾರವನ್ನು ನೀಡಿ.
* ಪ್ರತಿ ಶನಿವಾರ ಉಪವಾಸ ಮಾಡಿ.
* ಮನೆಯ ಮುಖ್ಯ ದ್ವಾರ ಸದಾ ಸ್ವಚ್ಚವಾಗಿರುವಂತೆ ನೋಡಿಕೊಳ್ಳಿ.
* ನಿಮ್ಮ ಮನೆಯಲ್ಲಿ ನೀವು ಬಳಸದ ಅಥವಾ ಹಾಳಾಗಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿದ್ದರೆ ಅದನ್ನು ಎಸೆಯಿರಿ.
* ನಿಮ್ಮ ಕೈ ಮತ್ತು ಪಾದಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
* ಅಗತ್ಯವಿರುವವರಿಗೆ ಕಪ್ಪು ವಸ್ತ್ರವನ್ನು ದಾನ ಮಾಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.