Vastu TIps: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆ ಮಾಡುವಾಗ ಆಕಸ್ಮಿಕವಾಗಿ ಸಂಭವಿಸುವ ಕೆಲವು ಘಟನೆಗಳು ಮುಂದೆ ಆಗಬಹುದಾದ ದೊಡ್ಡ ಅನಾಹುತಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ, ಕೆಲವು ಬಾರಿ ಆಕಸ್ಮಾತ್ ಆಗಿ ಪೂಜೆ ತಟ್ಟೆ ಕೆಳಗೆ ಬೀಳುತ್ತದೆ. ಇನ್ನೂ ಕೆಲವು ಬಾರಿ ದೀಪ ಇದ್ದಕ್ಕಿದ್ದಂತೆ ಆರಿ ಹೋಗುತ್ತದೆ. ಆದರೆ, ಇಂತಹ ಘಟನೆಗಳಿಗೂ ಭವಿಷ್ಯಕ್ಕೂ ಸಂಬಂಧವಿದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಘಟನೆಗಳು ಹಾಗೂ ಅದರ ಸೂಚನೆಗಳ ಬಗ್ಗೆ ಬಣ್ಣಿಸಲಾಗಿದೆ. ಮಾತ್ರವಲ್ಲ, ಇಂತಹ ಘಟನೆಗಳು ಸಂಭವಿಸಿದಾಗ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಜ್ಯೋತಿಷ್ಯದ ಪ್ರಕಾರ, ಪೂಜೆ ಮಾಡುವಾಗ ಸಂಭವಿಸುವ ಯಾವ ತಪ್ಪುಗಳು ಯಾವ ಘಟನೆಯ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ತಿಳಿಯೋಣ...
ಪೂಜೆಯ ಸಮಯದಲ್ಲಿ ಈ ವಸ್ತುಗಳು ಕೆಳಗೆ ಬೀಳುವುದು ಅಮಂಗಳಕರ:
ವಿಗ್ರಹ ಇದ್ದಕ್ಕಿದ್ದಂತೆ ಬೀಳುವುದು:
ಹಲವು ಬಾರಿ ನಮಗರಿವಿಲ್ಲದೆಯೇ ಕೈ ಜಾರಿಯೋ ಅಥವಾ ನಮ್ಮ ಕೈ ತಾಕಿಯೋ ದೇವರ ವಿಗ್ರಹ ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತದೆ. ಕೆಲವು ಬಾರಿ ಕೆಳಗೆ ಬಿದ್ದಾಗ ವಿಗ್ರಹಗಳು ಮುಕ್ಕಾಗುವುದೂ ಉಂಟು. ಜ್ಯೋತಿಷ್ಯದ ಪ್ರಕಾರ, ಈ ಘಟನೆಯನ್ನು ಅಮಂಗಳಕರ ಎಂದು ಬಣ್ಣಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಲು ಮುರಿದ ವಿಗ್ರಹವನ್ನು ಹರಿಯುವ ನೀರಿನಲ್ಲಿ ಬಿಟ್ಟು ನಿಮ್ಮಿಂದಾದ ತಪ್ಪಿಗೆ ಕ್ಷಮೆ ಯಾಚಿಸಿ.
ಇದನ್ನೂ ಓದಿ- Vastu Tips For Money: ಮನೆಯಲ್ಲಿ ಇಂತಹ ವಿಗ್ರಹಗಳಿದ್ದರೆ ಎಂದಿಗೂ ಎದುರಾಗಲ್ಲ ಹಣದ ಕೊರತೆ
ಪ್ರಾರ್ಥಿಸುವಾದ ದೀಪ ಆರಿ ಹೋಗುವುದು:
ಪೂಜೆ ಮಾಡುವಾಗ ದೀಪವು ಇದ್ದಕ್ಕಿದ್ದಂತೆ ಬಿದ್ದರೆ ಅಥವಾ ಪ್ರಾರ್ಥಿಸುವಾದ ದೀಪವು ಆರಿ ಹೋಗುವುದನ್ನು ಅಶುಭ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಪ್ರಕಾರ, ಇದು ಮುಂದಾಗಬಹುದಾದ ಭಾರೀ ಅನಾಹುತದ ಬಗ್ಗೆ ಸೂಚನೆ ನೀಡುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆ ದೇವರನ್ನು ನೆನೆದು ಕ್ಷಮೆಯಾಚಿಸಿ, ಮತ್ತೆ ತುಪ್ಪದ ದೀಪ ಬೆಳಗಿಸಿ.
ಪ್ರಸಾದ ಬಿದ್ದರೆ:
ಜ್ಯೋತಿಷ್ಯದ ಪ್ರಕಾರ, ಪೂಜೆ ನಂತರ ವಿತರಿಸಲಾಗುವ ಪ್ರಸಾದವು ಇದ್ದಕ್ಕಿದ್ದಂತೆ ಮಣ್ಣು ಪಾಲಾದರೆ ಅದು ಕೂಡ ಕೆಟ್ಟ ಶಕುನದ ಸಂಕೇತವಾಗಿದೆ. ಇದು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗುವುದನ್ನು ಸೂಚಿಸುತ್ತದೆ. ಇಂತಹ ಸಂದರ್ಭದಲ್ಲಿ ಪ್ರಸಾದದ ಮೇಲ್ಬಾಗವನ್ನಾದರೂ ತೆಗೆದು ಕಣ್ಣಿಗೆ ಹೊತ್ತಿ ಸೇವಿಸಿ. ಮಿಕ್ಕ ಪ್ರಸಾದವನ್ನು ಬೇರೆಯವರು ತುಳಿಯದಂತೆ ತೆಗೆದು ಪಾತ್ರೆಯಲ್ಲಿ ಹಾಕಿ.
ಇದನ್ನೂ ಓದಿ- Vastu Tips : ತುಳಸಿಯ ಬಳಿ ಈ ವಸ್ತುಗಳನ್ನು ಇಟ್ಟರೆ ದುರಾದೃಷ್ಟ ಮನೆ ಮಾಡುವುದು.!
ಅರಿಶಿನ- ಕುಂಕುಮ ಬೀಳುವುದು:
ಹಿಂದೂ ಧರ್ಮದಲ್ಲಿ ಅರಿಶಿನ-ಕುಂಕುಮಕ್ಕೆ ಬಹಳ ಮಹತ್ವದ ಸ್ಥಾನಮಾನವಿದೆ. ಪೂಜೆಯಲ್ಲಿ ಇಟ್ಟ ಅರಿಶಿನ-ಕುಂಕುಮವು ಕೆಳಗೆ ಬೀಳುವುದನ್ನು ಅಮಂಗಳಕರ ಎಂದು ಹೇಳಲಾಗುತ್ತದೆ. ಪೂಜೆಯಲ್ಲಿ ಅರಿಶಿನ-ಕುಂಕುಮದ ಬಟ್ಟಲು ಕೆಳಗೆ ಬೀಳುವುದು ಎಂದರೆ ನಿಮ್ಮ ಜೀವನದಲ್ಲಿ ದೊಡ್ಡ ಅನಾಹುತವೇ ಸಂಭವಿಸಲಿದೆ ಎಂಬುದರ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಮೊದಲು ಕೆಳಗೆ ಬಿದ್ದ ಅರಿಶಿನ ಕುಂಕುಮವನ್ನು ಶುದ್ಧ ಬಟ್ಟೆಯಲ್ಲಿ ಒರೆಸಿ ಬಟ್ಟೆಯಲ್ಲಿಯೇ ತೆಗೆದುಕೊಂಡು ಅದನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದಾಗಬಹುದಾದ ಅನಾಹುತವನ್ನು ತಪ್ಪಿಸಲು ತಾಯಿ ಸರ್ವಮಂಗಳೆಯನ್ನು ಮನಸಾರೆ ಪ್ರಾರ್ಥಿಸಿ ಐದು ಜನ ಮುತ್ತೈದೆಯರಿಗೆ ಅರಿಶಿನ-ಕುಂಕುಮವನ್ನು ನೀಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.