Vastu Tips For Money: ಮನೆಯಲ್ಲಿ ಇಂತಹ ವಿಗ್ರಹಗಳಿದ್ದರೆ ಎಂದಿಗೂ ಎದುರಾಗಲ್ಲ ಹಣದ ಕೊರತೆ

Vastu Tips For Money: ಕೆಲವರು ತಮ್ಮ ಮನೆಯನ್ನು ಕೆಲವು ಅಪರೂಪದ ವಿಗ್ರಹಗಳಿಂದ ಅಲಂಕರಿಸುತ್ತಾರೆ. ಕೆಲವು ಮನೆಗಳಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ವಿಗ್ರಹಗಳು ಕಂಡು ಬಂದರೆ, ಇನ್ನೂ ಕೆಲವು ಮನೆಯ ಅಂಗಳದಲ್ಲಿ ಇಂತಹ ವಿಗ್ರಹಗಳನ್ನು ಕಾಣಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಿಗ್ರಹಗಳು ಧನ-ಸಂಪತ್ತನ್ನು ತರುತ್ತವೆ ಎಂದು ಹೇಳಲಾಗುತ್ತದೆ. ಯಾವ ರೀತಿಯ ವಿಗ್ರಹಗಳು ಮನೆಯ ಏಳ್ಗೆಗೆ ಸಹಕಾರಿ ಎಂದು ತಿಳಿಯೋಣ... 

Written by - Yashaswini V | Last Updated : Jan 16, 2023, 12:11 PM IST
  • ವಾಸ್ತು ಶಾಸ್ತ್ರದ ಪ್ರಕಾರ, ವಿಘ್ನ ವಿನಾಶಕ ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದು ತುಂಬಾ ಶುಭ.
  • ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ಬಾಗಿಲಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆ ಆಗುತ್ತದೆ.
  • ಆ ಮನೆಯ ಯಜಮಾನ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅವರಿಗೆ ಯಶಸ್ಸು ಶತ ಸಿದ್ಧ ಎನ್ನಲಾಗುತ್ತದೆ.
Vastu Tips For Money: ಮನೆಯಲ್ಲಿ ಇಂತಹ ವಿಗ್ರಹಗಳಿದ್ದರೆ ಎಂದಿಗೂ ಎದುರಾಗಲ್ಲ ಹಣದ ಕೊರತೆ  title=
Vastu Tips For Money

Vastu Tips For Money: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆಯೇ ವಾಸ್ತು ಶಾಸ್ತ್ರಕ್ಕೂ ಬಹಳ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರ ಪ್ರಕಾರ, ಮನೆಯನ್ನು ನಿರ್ಮಿಸಿದರೆ, ವಾಸ್ತುಗೆ ಅನುಗುಣವಾಗಿ ಮನೆಯಲ್ಲಿ ವಸ್ತುಗಳನ್ನು ಸ್ಥಾಪಿಸಿದರೆ ಅಂತಹ ಮನೆಯಲ್ಲಿ ಸುಖ-ಸಂಪತ್ತಿಗೆ ಎಂದಿಗೂ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಿಗ್ರಹಗಳನ್ನು ಇಡುವುದರಿಂದ ಅಂತಹ ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಹರಿದಾಡುತ್ತದೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕಾಸಿನ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಈ ವಿಗ್ರಹಗಳು ಮನೆಯಲ್ಲಿದ್ದರೆ ತುಂಬಾ ಶುಭ:
ಗಣೇಶನ ವಿಗ್ರಹ:

ವಾಸ್ತು ಶಾಸ್ತ್ರದ ಪ್ರಕಾರ, ವಿಘ್ನ ವಿನಾಶಕ ಗಣೇಶನ ವಿಗ್ರಹವನ್ನು ಮನೆಯಲ್ಲಿ ಇಡುವುದು ತುಂಬಾ ಶುಭ. ವಾಸ್ತುವಿನ ಪ್ರಕಾರ, ಮನೆಯ ಮುಖ್ಯ ಬಾಗಿಲಿನಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸುವುದರಿಂದ ಮನೆಯಲ್ಲಿ ವಾಸ್ತು ದೋಷ ನಿವಾರಣೆ ಆಗುತ್ತದೆ. ಆ ಮನೆಯ ಯಜಮಾನ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅವರಿಗೆ ಯಶಸ್ಸು ಶತ ಸಿದ್ಧ ಎನ್ನಲಾಗುತ್ತದೆ.

ಆಮೆಯ ಪ್ರತಿಮೆ:
ವಾಸ್ತು ಶಾಸ್ತ್ರದಲ್ಲಿ ಆಮೆಯ ಪ್ರತಿಮೆಗೆ ಬಹಳ ಮಹತ್ವವಿದೆ. ಯಾವ ಮನೆಯಲ್ಲಿ ಆಮೆಯ ಪ್ರತಿಮೆ ಇರುತ್ತದೆಯೋ ಅಂತಹ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Good Luck Tips: ಅದೃಷ್ಟದ ಬೆಂಬಲ ಪಡೆಯಲು ಜೀವನದಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

ಹಸು ಕರುವಿನ ಪ್ರತಿಮೆ:
ಹಸು ಮತ್ತು ಕರುವಿನ ವಿಗ್ರಹವನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಯಾವ ಮನೆಯಲ್ಲಿ ಕರುವಿಗೆ ಹಾಲುಣಿಸುವ ಹಸುವಿನ ವಿಗ್ರಹವಿರುತ್ತದೆಯೋ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ ಆಗಿದೆ.

ಕುದುರೆಯ ಪ್ರತಿಮೆ:
ಓಡುವ ಕುದುರೆಯು ಪ್ರಗತಿಯ ಸೂಚಕವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಓಡುವ ಕುದುರೆಯ ವಿಗ್ರಹವು ಮನುಷ್ಯನ ಪ್ರಗತಿಯನ್ನು ಸೂಚಿಸುತ್ತದೆ. ಇದು ವ್ಯಕ್ತಿಯ ಯಶಸ್ಸಿನ ಮೇಲೆ ಬಹಳ ಮಹತ್ವದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Mercury Transit 2023: ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ, ನಾಲ್ಕು ರಾಶಿಯವರಿಗೆ ತುಂಬಾ ಶುಭ

ಆನೆಯ ವಿಗ್ರಹ:
ಮನೆಯಲ್ಲಿ ಆನೆಯ ವಿಗ್ರಹವನ್ನು ಸಾಕ್ಷಾತ್ ತಾಯಿ ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗಿದೆ. ಸೊಂಡಿಲು ಎತ್ತಿರುವ ಆನೆಯ ವಿಗ್ರಹವಿರುವ ಮನೆಯಲ್ಲಿ ಹಣಕ್ಕೆ ಎಂದಿಗೂ ಕೊರತೆ ಇರುವುದಿಲ್ಲ ಎಂಬುದು ನಂಬಿಕೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News