ಬೆಂಗಳೂರು : ಜನರು ತಮ್ಮ ಮನೆಯನ್ನು ಸುಂದರವಾಗಿ ಮತ್ತು ಹಸಿರಾಗಿ ಕಾಣುವಂತೆ ಮಾಡಲು ಮನೆಯ ಸುತ್ತಲೂ ಹಲವಾರು ರೀತಿಯ ಮರ ಗಿಡಗಳನ್ನು ನೆಡುತ್ತಾರೆ. ಹೀಗೆ ಮಾಡುವುದರಿಂದ ಪರಿಸರವು ಶುದ್ಧವಾಗುವುದಲ್ಲದೆ, ಸುತ್ತಲಿನ ಪರಿಸರ ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಆದರೆ ಕೆಲವು ಮರಗಳು ಮತ್ತು ಸಸ್ಯಗಳನ್ನು ತಪ್ಪಿಯೂ ಮನೆಯ ಸುತ್ತ ಮುತ್ತ ನೆಡಬಾರದು. ಇದನ್ನು ಅಶುಭ ಎಂದು  ಪರಿಗಣಿಸಲಾಗುತ್ತದೆ. ಒಂದು ವೇಳೆ ಈ ಮರಗಳು ಮನೆಯ ಸುತ್ತ ಇದ್ದರೆ, ಕುಟುಂಬದ ಸದಸ್ಯರು ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.  


COMMERCIAL BREAK
SCROLL TO CONTINUE READING

ಮನೆಯ ಸುತ್ತ ಈ ಮರಗಳನ್ನು ನೆಡಬೇಡಿ  :
ಅಶ್ವತ ಮರ : 
ಅಶ್ವತ ಮರವನ್ನು ಸನಾತನ ಧರ್ಮದಲ್ಲಿ ಬಹಳ ಮಂಗಳಕರವೆಂದು  ಹೇಳಲಾಗುತ್ತದೆ. ಆದರೆ ಅದನ್ನು ಮನೆಯ ಬಳಿ ನೆಡುವುದು ಶುಭವಲ್ಲ. ಎಲ್ಲಿಯವರೆಗೆ ಈ ಮರದ ನೆರಳು ಬೀಳುವುದೋ ಅಲ್ಲಿಯವರೆಗೆ ಬರೀ ನಾಶವನ್ನೇ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಅದನ್ನು ನಿಮ್ಮ ಮನೆಯ ಸುತ್ತಲೂ ನೆಡಬೇಡಿ.


ಇದನ್ನೂ ಓದಿ : Mangal Gochar 2023 : ಮುಂದಿನ 69 ದಿನಗಳವರೆಗೆ ಈ 5 ರಾಶಿಯವರಿಗೆ ಒಲಿಯಲಿದೆ ಶ್ರೀಮಂತಿಕೆ!


ಹಲಸಿನ ಮರ : 
ಮನೆಯ ಸುತ್ತ ಹಲಸಿನ ಮರವನ್ನು ನೆಡುವುದು ಕೂಡಾ ಅಶುಭ ಫಲಿತಾಂಶಗಳನ್ನೇ ನೀಡುತ್ತದೆ. ಹಲಸಿನ ಮರ ಮನೆಯ ಸುತ್ತ ಇದ್ದರೆ,  ಕುಟುಂಬ ಸದಸ್ಯರಲ್ಲಿ ಬಿರುಕು ಮೂಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಪ್ಪಿತಪ್ಪಿಯೂ ಮನೆಯ ಸುತ್ತ ಹಲಸಿನ ಮರವನ್ನು ನೆಡಬಾರದು.  


ಅತ್ತಿ ಮರ : 
ಮನೆಯ ಸಮೀಪ ಅತ್ತಿ ಮರವಿದ್ದರೂ ಅದು ಅಶುಭವಂತೆ. ಈ ಮರವನ್ನು ನೆಡುವುದರಿಂದ ಮನೆಯಲ್ಲಿ ಬಡತನ ನೆಲೆಸುತ್ತದೆ ಮತ್ತು ಅನೇಕ ರೋಗಗಳು ವ್ಯಕ್ತಿಯನ್ನು ಸುತ್ತುವರಿಯುತ್ತವೆ ಎಂದು ಹೇಳಲಾಗುತ್ತದೆ. ಅತ್ತಿ ಮರ ಮನೆಯ ಉತ್ತರ ದಿಕ್ಕಿನಲ್ಲಿದ್ದರೆ, ಕಣ್ಣುಗಳಿಗೆ ಸಂಬಂಧಿಸಿದ ರೋಗಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. 


ಬುಗರಿ ಮರ : 
ಬುಗರಿ ಮರವನ್ನು ಕೂಡಾ ಮನೆಯ ಹತ್ತಿರ ನೆಡಬಾರದು. ಈ ಮರದಲ್ಲಿ ಮುಳ್ಳುಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಇದು ಸಂಬಂಧಗಳಲ್ಲಿ  ಬಿರುಕು ಮೂಡಿಸಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಮರವನ್ನು ಮನೆಯ ಬಳಿ ನೆಡುವುದರಿಂದ ಮನೆಯಲ್ಲಿ ಅಪಶ್ರುತಿ ಉಂಟಾಗುತ್ತದೆ. ಅಲ್ಲದೆ ಇದು ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು ಮೂಡಲು ಕಾರಣವಾಗುತ್ತದೆ.  


ಇದನ್ನೂ ಓದಿ : Chanakya Niti : ಹಣಕಾಸಿನ ಬಿಕ್ಕಟ್ಟಿನ ಮೊದಲು ಕಾಣಿಸಿಕೊಳ್ಳುತ್ತವೆ ಈ ಸಂಕೇತಗಳು : ಎಚ್ಚರ..!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.