Shukra Dosh: ಜಾತಕದ ಶುಕ್ರ ದೋಷದಿಂದ ನಿರಂತರ ಧನಹಾನಿ! ತಡೆಗಟ್ಟುವ ಕ್ರಮ ತಿಳಿಯಿರಿ

Shukra Dosh: ಜಾತಕದಲ್ಲಿ ಶುಕ್ರ ದೋಷವಿದ್ದರೆ ಆ ವ್ಯಕ್ತಿ ದರಿದ್ರನಾಗುತ್ತಾನೆ. ಶುಕ್ರ ದೋಷವು ನಿರಂತರವಾಗಿ ಹಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ, ಜೀವನದಲ್ಲಿ ಹಣದ ಕೊರತೆ ಮತ್ತು ಬಡತವನ್ನು ನೀಡುತ್ತದೆ. ಹೀಗಾಗಿ ಶುಕ್ರ ದೋಷದ ಲಕ್ಷಣಗಳನ್ನು ಗುರುತಿಸಿದ ನಂತರ ಅದನ್ನು ತಪ್ಪಿಸಲು ಕ್ರಮ  ತೆಗೆದುಕೊಳ್ಳಬೇಕು.

Written by - Puttaraj K Alur | Last Updated : Mar 5, 2023, 12:48 PM IST
  • ಜಾತಕದಲ್ಲಿ ಶುಕ್ರಗ್ರಹ ಬಲಶಾಲಿಯಾಗಿದ್ದರೆ ಬಹಳಷ್ಟು ಸಂಪತ್ತನ್ನು ಪಡೆಯುತ್ತಾರೆ
  • ಶುಕ್ರನಲ್ಲಿ ದೋಷವಿದ್ದರೆ ವ್ಯಕ್ತಿಗೆ ಬಡತನ & ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುತ್ತವೆ
  • ಶುಕ್ರವು ದೋಷಪೂರಿತವಾಗಿದ್ದರೆ ವ್ಯಕ್ತಿಯು ಯಾವಾಗಲೂ ಆರ್ಥಿಕ ಸಂಕಷ್ಟದಲ್ಲಿರುತ್ತಾನೆ
Shukra Dosh: ಜಾತಕದ ಶುಕ್ರ ದೋಷದಿಂದ ನಿರಂತರ ಧನಹಾನಿ! ತಡೆಗಟ್ಟುವ ಕ್ರಮ ತಿಳಿಯಿರಿ title=
ಶುಕ್ರ ದೋಷಕ್ಕೆ ಪರಿಹಾರಗಳು

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವಾಗಿದೆ. ಜಾತಕದಲ್ಲಿ ಶುಕ್ರಗ್ರಹ ಬಲಶಾಲಿಯಾಗಿದ್ದರೆ, ಅವರು ಬಹಳಷ್ಟು ಸಂಪತ್ತನ್ನು ಪಡೆಯುತ್ತಾರೆ. ಐಷಾರಾಮಿ ಜೀವನ ನಡೆಸುವ ಇವರ ಬದುಕಿನಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಇವರು ಪ್ರೇಮದ ವಿಚಾರದಲ್ಲಿಯೂ ಅದೃಷ್ಟವಂತರಾಗಿರುತ್ತಾರೆ. ಜೀವನದಲ್ಲಿ ಸಾಕಷ್ಟು ಪ್ರೀತಿ ಮತ್ತು ಪ್ರಣಯವಿರುತ್ತದೆ.

ಶುಕ್ರನಲ್ಲಿ ದೋಷವಿದ್ದರೆ ವ್ಯಕ್ತಿಗೆ ಬಡತನ ಕಾಡುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು, ಕೌಟುಂಬಿಕ ಜೀವನದಲ್ಲಿ ಅಡಚಣೆ, ಲೈಂಗಿಕ ಅಂಗಗಳ ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಕ್ರ ದೋಷವನ್ನು ಕಡಿಮೆ ಮಾಡಲು ಜ್ಯೋತಿಷ್ಯವು ಕೆಲವು ಪರಿಣಾಮಕಾರಿ ಮಾರ್ಗಗಳನ್ನು ನೀಡಿದೆ.

ಇದನ್ನೂ ಓದಿ: Budh Asta 2023 : ಕುಂಭ ರಾಶಿಯಲ್ಲಿ ಬುಧ ಅಸ್ತ.. ಈ ರಾಶಿಗಳ ಜನರ ಪಾಲಿಗೆ ಭಾರಿ ಧನವೃದ್ಧಿಯ ಯೋಗ

ಶುಕ್ರ ದೋಷದ ಲಕ್ಷಣಗಳು

ಶುಕ್ರವು ದೋಷಪೂರಿತವಾಗಿದ್ದರೆ ವ್ಯಕ್ತಿಯು ಯಾವಾಗಲೂ ಆರ್ಥಿಕ ಸಂಕಷ್ಟದಲ್ಲಿರುತ್ತಾನೆ. ಮತ್ತೆ ಮತ್ತೆ ಹಣದ ನಷ್ಟ ಎದುರಿಸಬೇಕಾಗುತ್ತದೆ. ಪ್ರೀತಿ ಮತ್ತು ಪ್ರಣಯದ ಕೊರತೆಯಿರುತ್ತದೆ. ಮದುವೆ ತಡವಾಗುತ್ತದೆ ಅಥವಾ ಅಡೆತಡೆಗಳು ಬರುತ್ತವೆ. ವೈವಾಹಿಕ ಜೀವನ, ಪ್ರೇಮ ಜೀವನದಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಅವರ ಜೀವನದಲ್ಲಿ ಬಡತನ ಕೊನೆವರೆಗೂ ಕಾಡುತ್ತದೆ.

ಶುಕ್ರ ದೋಷ ಪರಿಹಾರಗಳು

- ಶುಕ್ರ ದೋಷದಿಂದ ವ್ಯಕ್ತಿಯ ದಾಂಪತ್ಯದಲ್ಲಿ ತೊಂದರೆಯಾಗಿದ್ದರೆ ಪ್ರತಿ ಶುಕ್ರವಾರ ಅಥವಾ ಪ್ರತಿದಿನ ಬಿಳಿ ಬಟ್ಟೆಯನ್ನು ಧರಿಸಿ ‘ಓಂ ಶುಕ್ರಾಯೈ ನಮಃ ಓಂ ಹ್ರೀಂ ಶ್ರೀಂ ಶ್ರೀ ಶುಕ್ರಾಯ ನಮಃ’ ಮಂತ್ರವನ್ನು ಜಪಿಸಿ. ಕನಿಷ್ಠ 5, 11 ಅಥವಾ 21 ಸುತ್ತುಗಳ ಕಾಲ ಈ ಮಂತ್ರವನ್ನು ಪಠಿಸಿ.

- ಜಾತಕದಲ್ಲಿ ಶುಕ್ರನು ಅಶುಭ ಅಥವಾ ಶುಕ್ರನು ದುರ್ಬಲನಾಗಿದ್ದರೆ ಪ್ರತಿ ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಯನ್ನು ಆರಾಧಿಸಿರಿ. ಖೀರ್ ಅಥವಾ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಿ. ಇದರ ನಂತರ ಶ್ರೀ ಸೂಕ್ತ ಮತ್ತು ಕನಕಧಾರಾ ಸ್ತೋತ್ರವನ್ನು ಪಠಿಸಿ. ಇದರಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಿ ಧನಲಾಭದ ಸಾಧ್ಯತೆಗಳಿವೆ.

ಇದನ್ನೂ ಓದಿ: Weekly Horoscope: ಈ ರಾಶಿಯವರಿಗೆ ಭಾರೀ ಲಾಭ, ಹೋಳಿ ಹಬ್ಬದಂದು ಹಣದ ಸುರಿಮಳೆ!

- ಶುಕ್ರವಾರದಂದು ಶುಕ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ. ಬಿಳಿ ಸಿಹಿತಿಂಡಿ, ಹಾಲು, ಸಕ್ಕರೆ, ಅಕ್ಕಿ ಇತ್ಯಾದಿಗಳನ್ನು ದಾನ ಮಾಡಿ.

- ಶುಕ್ರದೇವನ ಆಶೀರ್ವಾದ ಪಡೆಯಲು ನೀವು 6 ಮುಖಿ ಅಥವಾ 13 ಮುಖಿ ರುದ್ರಾಕ್ಷಿಯನ್ನು ಧರಿಸಬಹುದು. ಇದು ಶುಕ್ರನನ್ನು ಬಲಪಡಿಸುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News