ಬೆಂಗಳೂರು : ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕ ಆಚಾರ್ಯ ಚಾಣಕ್ಯ, ತಮ್ಮ ನೀತಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಜೀವನದಲ್ಲಿ ಅನುಸರಿಸಬೇಕಾದ ಅನೇಕ ನಿಯಮಗಳ ಬಗ್ಗೆ ತಿಳಿಸಿದ್ದಾರೆ.  ಆ ನಿಯಮಗಳನ್ನು ಅನುಸರಿಸಿದರೆ ವೈವಾಹಿಕ ಜೀವನ ಸುಖದ ಸುಪ್ಪತ್ತಿಗೆಯಲ್ಲಿ ತೇಲುವುದು ಎನ್ನಲಾಗಿದೆ.  ಹೌದು ಸುಖಕರ ದಾಂಪತ್ಯಕ್ಕೆ ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಚಾಣಾಕ್ಯ ಗುರುಗಳು ಮೂರು ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಮೂರು  ವಿಷಯಗಳಿಗಾಗಿ ಪತಿ ಬೇಡಿಕೆ ಇಟ್ಟರೆ ಪತ್ನಿ ಅದನ್ನು ಈಡೆರಿಸಲೇಬೇಕು ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಪತಿಯ ಮನಸ್ಸಿಗೆ ಶಾಂತಿ ನೀಡಿ :  
ಕಷ್ಟದ ಸಂದರ್ಭದಲ್ಲಿ ವ್ಯಕ್ತಿ ಬಯಸುವುದು ತನ್ನ ಸಂಗಾತಿಯ ಬೆಂಬಲವನ್ನು. ಯಾರು ಏನೇ ಹೇಳಿದರೂ ತನ್ನ ಸಂಗಾತಿ ಜೊತೆಗಿದ್ದರೆ ಪ್ರಪಂಚವನ್ನೇ ಗೆಲ್ಲುವ ವಿಶ್ವಾಸ ವ್ಯಕ್ತಿಯಲ್ಲಿ ಮೂಡುತ್ತದೆ. ಚಾಣಕ್ಯ ನೀತಿಯಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಗಂಡನ ಸುಖ ದುಃಖಗಳ ಬಗ್ಗೆ ಕಾಳಜಿ ವಹಿಸುವುದು ಹೆಂಡತಿಯ ಕರ್ತವ್ಯ.  ಪತಿ ದುಃಖಿತನಾಗಿದ್ದಾಗ ಅವನ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸುವುದು ಪತ್ನಿಯ ಕರ್ತವ್ಯ. ಪತಿಯನ್ನು ಯಾವುದಾದರರೂ ವಿಷಯ ಕಾಡುತ್ತಿದ್ದರೆ, ಆತನ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಂಡು ಆತನ ಜೊತೆ ನಿಲ್ಲಬೇಕು. 


ಇದನ್ನೂ ಓದಿ : ಪ್ರಜ್ಞೆ ತಪ್ಪಿಸುತ್ತದೆ ಈ ಹೂವಿನ ವಾಸನೆ.! ಬಾಯಿಗಿಟ್ಟರೆ ಪ್ರಾಣವೇ ಹೋಗುತ್ತದೆ.! ಯಾವುದು ಗೊತ್ತಾ ಈ ಹೂವು ?


ಪ್ರೀತಿಯಲ್ಲಿ ಕೊರತೆಯಾಗಲೇ ಬಾರದು : 
ಆಚಾರ್ಯ ಚಾಣಕ್ಯನ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವು ಯಶಸ್ವಿಯಾಗಬೇಕಾದರೆ ಪರಸ್ಪರರ ಸುಖ-ದುಃಖಗಳನ್ನುಅರಿತುಕೊಂಡಾಗ ಮಾತ್ರ. ಗಂಡನ ಪ್ರೀತಿಯ ಬಯಕೆಯನ್ನು ಈಡೇರಿಸುವುದು ಹೆಂಡತಿಯ ಕರ್ತವ್ಯ. ಹಾಗಾಗಿ ತನ್ನ ಪ್ರೀತಿಯಿಂದ ಯಾವಾಗಲೂ ಪತಿಯನ್ನು ಸಂತೃಪ್ತಿಗೊಳಿಸಬೇಕಾದದ್ದು ಪತ್ನಿಯ  ಮೊದಲ ಆದ್ಯತೆಯಾಗಿರಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಅದೇ ರೀತಿ ಪತ್ನಿಯ ಇಷ್ಟಾರ್ಥಗಳನ್ನು ಈಡೇರಿಸುವುದು ಗಂಡನ ಕರ್ತವ್ಯವೂ ಹೌದು.


ವೈವಾಹಿಕ ಜೀವನದಲ್ಲಿ ಬಿರುಕು  ಸಲ್ಲದು :
ಸಂತೋಷದ ದಾಂಪತ್ಯ ಜೀವನಕ್ಕಾಗಿ, ಪತಿ-ಪತ್ನಿ ಎಂದಿಗೂ ಪರಸ್ಪರರ ನಡುವೆ ಅಂತರ ಬರಲು ಬಿಡಬಾರದು. ಚಾಣಕ್ಯ ನೀತಿ ಪ್ರಕಾರ, ವೈವಾಹಿಕ ಜೀವನದಲ್ಲಿ ಎಂದಿಗೂ ಬಿರುಕು ಮೂಡಲು ಬಿಡಬಾರದು. ಪತಿ ಪತ್ನಿಯ ಸಂಬಂಧದಲ್ಲಿ ಮೂಡುವ ಸಣ್ಣ ಬಿರುಕು ಕೂಡಾ ಹೆಮ್ಮರವಾಗಿ ಯಾವಾಗ ಬೆಳೆಯುತ್ತದೆ ಎನ್ನುವುದು ಅರ್ಥವಾಗುವುದಿಲ್ಲ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಈ ಬಗ್ಗೆ ಪತಿ ಪತ್ನಿಯರಿಗೆ ಕಿವಿ ಮಾತು ಹೇಳಿದ್ದಾರೆ. 


ಇದನ್ನೂ ಓದಿ : ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ .! ತಿರುಪತಿ ವಸತಿ ಗೃಹದ ಬಾಡಿಗೆಯಲ್ಲಿ 10 ಪಟ್ಟು ಹೆಚ್ಚಳ.!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.