ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ .! ತಿರುಪತಿ ವಸತಿ ಗೃಹದ ಬಾಡಿಗೆಯಲ್ಲಿ 10 ಪಟ್ಟು ಹೆಚ್ಚಳ.!

ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರದಲ್ಲಿನ ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಹುಟ್ಟಿಕೊಂಡಿದೆ.  ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರವನ್ನು  10 ಪಟ್ಟು ಹೆಚ್ಚಿಸಲಾಗಿದೆ. 

Written by - Ranjitha R K | Last Updated : Jan 9, 2023, 01:21 PM IST
  • ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರ ಹೆಚ್ಚಳ
  • ಬಾಡಿಗೆ ದರ 150 ರೂಪಾಯಿಯಿಂದ 1,700 ರೂಪಾಯಿಗೆ ಏರಿಕೆ
  • ದರ ಏರಿಕೆಗೆ ಬಿಜೆಪಿ ಮುಖಂಡನ ಖಂಡನೆ
ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ .! ತಿರುಪತಿ ವಸತಿ ಗೃಹದ ಬಾಡಿಗೆಯಲ್ಲಿ 10 ಪಟ್ಟು ಹೆಚ್ಚಳ.!  title=

ತಿರುಪತಿ : ತಿರುಮಲದಲ್ಲಿ ಇತ್ತೀಚಿಗೆ ಆಧುನೀಕರಿಸಿದ ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರವನ್ನು  10 ಪಟ್ಟು ಹೆಚ್ಚಿಸಲಾಗಿದೆ. ಇದರ ದರವನ್ನು 150 ರೂಪಾಯಿಯಿಂದ 1,700 ರೂಪಾಯಿಗೆ ಏರಿಸಲಾಗಿದೆ. ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರದಲ್ಲಿನ ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಹುಟ್ಟಿಕೊಂಡಿದೆ. ದರ ಏರಿಕೆ ಕುರಿತಂತೆ ಬಿಜೆಪಿ ಮುಖಂಡ ಸೋಮು ವೀರರಾಜು ಟಿಟಿಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾರಾಯಣಗಿರಿ ಅತಿಥಿಗೃಹದಲ್ಲಿ 750 ರೂಪಾಯಿ ಇದ್ದ ಕೊಠಡಿ ಬಾಡಿಗೆಯನ್ನು ಇದೀಗ  1,700 ರೂಪಾಯಿಗೆ ಏರಿಸಲಾಗಿದೆ ಎಂದು ಸೋಮು ವೀರರಾಜು ತಿಳಿಸಿದ್ದಾರೆ. ವಿಶೇಷ ಮಾದರಿಯ ಕಾಟೇಜ್ ಬಾಡಿಗೆಯನ್ನು 750 ರೂ.ನಿಂದ 2200 ರೂ.ಗೆ ಏರಿಸಲಾಗಿದೆ. 

ಸಾಮಾನ್ಯ ಜನರಿಗೆ ಕೈಗೆಟುಕುವ ರೀತಿಯಲ್ಲಿ ಅತಿಥಿ ಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ದರ ನಿಗದಿ ಮಾಡುವಂತೆ ಬಿಜೆಪಿ ಟಿಟಿಡಿ ಟ್ರಸ್ಟ್‌ ಅನ್ನು ಒತ್ತಾಯಿಸಿದೆ. ಈ ಮಧ್ಯೆ, ತಿರುಮಲದಲ್ಲಿ ಇತ್ತೀಚೆಗೆ ನವೀಕರಿಸಿದ ಅತಿಥಿಗೃಹಗಳು ಮತ್ತು ಕಾಟೇಜ್‌ಗಳ ಬಾಡಿಗೆ ಹೆಚ್ಚಿಸಿರುವ ಕ್ರಮವನ್ನು ಟಿಟಿಡಿ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ : Chanakya Niti: ಈ ಒಂದು ಕೆಲಸ ಮಾಡಿದರೆ ಸಾಕು ವರ್ಷಪೂರ್ತಿ ಆರ್ಥಿಕ ಸಮಸ್ಯೆ ಎದುರಾಗೋದೇ ಇಲ್ಲ

ಟಿಟಿಡಿ ನೀಡಿರುವ ವಿವರಣೆ ಹೀಗಿದೆ : 
ಎಸ್ ವಿ ರೆಸ್ಟ್ ಹೌಸ್ ಮತ್ತು ನಾರಾಯಣಗಿರಿ ರೆಸ್ಟ್ ಹೌಸ್ ಅನ್ನು ಆಧುನೀಕರಣಗೊಳಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ದರವನ್ನು ಪರಿಷ್ಕರಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಸುಮಾರು ಮೂರು ದಶಕಗಳಿಂದ ಈ ವಿಶ್ರಾಂತಿ ಗೃಹಗಳ ಬಾಡಿಗೆಯನ್ನು ಹೆಚ್ಚಿಸಿರಲಿಲ್ಲ ಎನ್ನಲಾಗಿದೆ. ಇನ್ನು ಭಕ್ತರು ನೀಡಿದ ಸಲಹೆಗಳ ಆಧಾರದ ಮೇಲೆ ಹೊಸ ಹವಾನಿಯಂತ್ರಣ, ಗೀಸರ್‌ಗಳು, ಮರದ ಕಾಟ್‌ಗಳು ಮತ್ತು ಆಧುನಿಕ ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಈ ಸೌಲಭ್ಯಗಳಿಗನುಗುಣವಾಗಿ ದರವನ್ನು ನಿಗದಿಪಡಿಸಲಾಗಿದೆ ಎನ್ನುವುದು ಟಿಟಿಡಿ  ವಾದ.  

ಆರಂಭವಾಗಿದೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ :
ಜನವರಿ ಮತ್ತು ಫೆಬ್ರವರಿ ತಿಂಗಳಿಗೆ ತಿರುಮಲ ವೆಂಕಟೇಶ್ವರ ಸ್ವಾಮಿಯ ಭಕ್ತರಿಗೆ ಆನ್‌ಲೈನ್ ಮೂಲಕ ವಿಶೇಷ ದರ್ಶನ ಟಿಕೆಟ್‌ಗಳನ್ನು ನೀಡುವುದಾಗಿ ಟಿಟಿಡಿ ತಿಳಿಸಿದೆ. ಈ ಟಿಕೆಟ್ ಬೆಲೆ 300 ರೂ. ಜನವರಿ 9 ರಂದು ಅಂದರೆ ಇಂದು ಬೆಳಿಗ್ಗೆ ಬೆಳಗ್ಗೆ 10 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಇದನ್ನೂ ಓದಿ : Numerology: ಈ ದಿನಾಂಕದಂದು ಜನಿಸಿದವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗುತ್ತದೆ!

ಪ್ರತಿದಿನ 50000 ಭಕ್ತರ ಭೇಟಿ :
ತಿರುಮಲದಲ್ಲಿ ಇದೀಗ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ. ವೈಕುಂಠ ಏಕಾದಶಿಯ 10 ದಿನಗಳ ಅವಧಿಯನ್ನು ಜನವರಿ 2 ರಿಂದ ಜನವರಿ 11 ರವರೆಗೆ ಈ ದರ್ಶನ ಇರಲಿದೆ.  ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ 50,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News