Astro Tips: ಪೊರಕೆಯ ಈ ಪರಿಣಾಮಕಾರಿ ಟ್ರಿಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ..!

ಸನಾತನ ಧರ್ಮದಲ್ಲಿ ಪೊರಕೆಯು ತಾಯಿ ಲಕ್ಷ್ಮಿದೇವಿಯೊಂದಿಗೆ ಸಂಬಂಧ ಹೊಂದಿದೆ. ಪೊರಕೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳನ್ನು ಸರಿಯಾಗಿ ಅನುಸರಿಸುವುದರಿಂದ ಹಣದ ಲಾಭದ ಜೊತೆಗೆ ಎಲ್ಲಾ ರೀತಿಯ ವಾಸ್ತು ದೋಷಗಳಿಂದ ಮುಕ್ತಿ ಪಡೆಯಬಹುದು.

Written by - Puttaraj K Alur | Last Updated : Jan 8, 2023, 07:13 PM IST
  • ಶನಿಯ ಸಾಡೇ ಸಾತಿ & ಧೈಯ್ಯಾ ಅಥವಾ ಮಹಾದಶಾ ನಡೆಯುತ್ತಿದ್ದರೆ ಶನಿವಾರ ಹೊಸ ಪೊರಕೆ ಖರೀದಿಸಬೇಡಿ
  • ಮಂಗಳವಾರ, ಶನಿವಾರ ಮತ್ತು ಭಾನುವಾರದಂದು ಪೊರಕೆಯನ್ನು ಖರೀದಿಸುವುದು ಮಂಗಳಕರ
  • ಪೊರಕೆಯನ್ನು ಯಾವಾಗಲೂ ಗೌರವಿಸಬೇಕು, ಹೀಗಾಗಿ ಅಪ್ಪಿತಪ್ಪಿಯೂ ಅದನ್ನು ತುಳಿಯಬಾರದು
Astro Tips: ಪೊರಕೆಯ ಈ ಪರಿಣಾಮಕಾರಿ ಟ್ರಿಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ..! title=
ಶನಿವಾರ ಹೊಸ ಪೊರಕೆ ಖರೀದಿಸಬೇಡಿ

ನವದೆಹಲಿ: ಹಿಂದೂ ಧರ್ಮದಲ್ಲಿ ಪೊರಕೆಯನ್ನು ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಪೊರಕೆಗೆ ಸಂಬಂಧಿಸಿದಂತೆ ಹಲವು ನಿಯಮಗಳ ಬಗ್ಗೆ ಹೇಳಲಾಗಿದೆ. ಇದರ ಪ್ರಕಾರ ಮನೆಯಲ್ಲಿ ಪೊರಕೆಯನ್ನು ಸರಿಯಾಗಿ ಬಳಸದಿದ್ದರೆ ಹಲವಾರು ರೀತಿಯ ವಾಸ್ತು ದೋಷಗಳು ಉದ್ಭವಿಸಬಹುದು.

ಈ ಕಾರಣದಿಂದ ಮನೆಯಲ್ಲಿ ನಕಾರಾತ್ಮಕತೆ ನೆಲೆಸಲು ಪ್ರಾರಂಭಿಸುತ್ತದೆ. ಜೊತೆಗೆ ಮನೆಯ ಸಂತೋಷ ಮತ್ತು ಶಾಂತಿ ದೂರವಾಗುತ್ತದೆ. ಹೀಗಾಗಿ ನೀವು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಬಯಸಿದರೆ, ಸಂಪತ್ತಿನ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯಲು ಬಯಸಿದರೆ, ಪೊರಕೆಗೆ ಸಂಬಂಧಿಸಿದ ಕೆಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Budh Gochar 2023 : ಬುಧ ಗೋಚರದಿಂದ ತ್ರಿಕೋನ ರಾಜಯೋಗ : ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಹಣದ ಮಳೆ

ಶನಿವಾರ ಹೊಸ ಪೊರಕೆ ಖರೀದಿಸಬೇಡಿ

ಯಾವುದೇ ವ್ಯಕ್ತಿಗೆ ಶನಿಯ ಸಾಡೇ ಸಾತಿ ಮತ್ತು ಧೈಯ್ಯಾ ಅಥವಾ ಮಹಾದಶಾ ನಡೆಯುತ್ತಿದ್ದರೆ ಶನಿವಾರದಂದು ಹೊಸ ಪೊರಕೆಯನ್ನು ಖರೀದಿಸಬೇಡಿ. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರಬಹುದು.

ಪೊರಕೆಗೆ ಬಿಳಿ ದಾರ ಕಟ್ಟಿ

ನೀವು ಪೊರಕೆ ಖರೀದಿಸಲು ಯೋಚಿಸುತ್ತಿದ್ದರೆ ಇದಕ್ಕೂ ಸಹ ನಿಯಮಗಳನ್ನು ಅನುಸರಿಸಬೇಕು. ಯಾವುದೇ ಪೊರಕೆಯನ್ನು ಖರೀದಿಸುವುದು ಸಮಸ್ಯೆಗಳನ್ನು ಉಂಟುಮಾಡಬಹುದು. ಮಂಗಳವಾರ, ಶನಿವಾರ, ಭಾನುವಾರದಂದು ಪೊರಕೆಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೇ  ರೀತಿ ಹೊಸ ಪೊರಕೆಯನ್ನು ತಂದ ಮೇಲೆ, ಅದರ ಮೇಲಿನ ಭಾಗದಲ್ಲಿ ಬಿಳಿ ಬಣ್ಣದ ದಾರವನ್ನು ಕಟ್ಟಿಬೇಕು. ನೀವು ಹೀಗೆ ಮಾಡಿದ್ರೆ ಲಕ್ಷ್ಮಿದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಲಿದ್ದಾಳೆ.

ಇದನ್ನೂ ಓದಿ: Weekly Numerology: ನೀವು ಈ ದಿನಾಂಕಗಳಲ್ಲಿ ಜನಿಸಿದ್ರೆ ಆಗರ್ಭ ಶ್ರೀಮಂತರಾಗೋದು ಗ್ಯಾರಂಟಿ!

ಪೊರಕೆ ತುಳಿಯಬೇಡಿ

ಪೊರಕೆಯನ್ನು ಯಾವಾಗಲೂ ಗೌರವಿಸಬೇಕು. ಹೀಗಾಗಿ ಅಪ್ಪಿತಪ್ಪಿಯೂ ಅದನ್ನು ತುಳಿಯಬೇಡಿ. ಪೊರಕೆಯನ್ನು ಗೌರವಿಸಿದರೆ ತಾಯಿ ಲಕ್ಷ್ಮಿದೇವಿ ಸಂತುಷ್ಟಳಾಗುತ್ತಾಳೆ ಮತ್ತು ತನ್ನ ಕೃಪೆಯ ಮೂಳಕ ನಿಮ್ಮನ್ನು ಕಾಪಾಡುತ್ತಾಳೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಪೊರಕೆಯಿಂದ ಕಸ ಗುಡಿಸುವ ಮೂಲಕ ಮನೆಯಿಂದ ಬಡತನವನ್ನು ಹೋಗಲಾಡಿಸಬಹುದು.

ಪೊರಕೆಯನ್ನು ಎಸೆಯಬೇಡಿ

ಯಾವುದೇ ದಿನ ಹಳೆಯ ಪೊರಕೆಯನ್ನು ಎಸೆಯಬೇಡಿ. ಶನಿವಾರ ಮಾತ್ರ ಪೊರಕೆಯನ್ನು ಮನೆಯಿಂದ ಹೊರಗೆ ತೆಗೆಯಬೇಕು. ಹೀಗೆ ಮಾಡುವುದರಿಂದ ಬಡತನ ದೂರವಾಗುತ್ತದೆ ಮತ್ತು ಸಂಪತ್ತಿನ ಆಗಮನಕ್ಕೆ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ಶುಕ್ರವಾರವನ್ನು ತಾಯಿ ಲಕ್ಷ್ಮಿದೇವಿಯ ದಿನವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿನ ಅಪ್ಪಿತಪ್ಪಿಯೂ ಮನೆಯಿಂದ ಪೊರಕೆ ಎಸೆಯಬೇಡಿ. ಇದರಿಂದ ತಾಯಿ ಲಕ್ಷ್ಮಿದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News