Friday Remedies: ಹಿಂದೂ ಧರ್ಮದಲ್ಲಿ ವಾರದ ಏಳು ದಿನಗಳನ್ನೂ ಕೂಡ ಒಂದೊಂದು ದೇವ ದೇವತೆಗಳಿಗೆ ಸಮರ್ಪಿಸಲಾಗಿದೆ. ಅಂತೆಯೇ ಶುಕ್ರವಾರದ ದಿನವನ್ನು ತಾಯಿ ಲಕ್ಷ್ಮಿಗೆ ಸಮರ್ಪಿಸಲಾಗಿದೆ. ಹಾಗಾಗಿಯೇ, ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ಶುಕ್ರವಾರದ ದಿನ ಕೈಗೊಳ್ಳುವ ಕೆಲವು ಪರಿಹಾರಗಳು ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. 


COMMERCIAL BREAK
SCROLL TO CONTINUE READING

ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದಂದು ವಿಶೇಷ ಪೂಜೆಯ ಮೂಲಕ ಲಕ್ಷ್ಮೀದೇವಿಯನ್ನು ಮೆಚ್ಚಿಸಬಹುದು. ಇದರಿಂದ ಮನೆಯಲ್ಲಿ ಸಂಪತ್ತಿಗೆ ಕೊರತೆಯೇ ಇರುವುದಿಲ್ಲ. ಮಾತ್ರವಲ್ಲ, ಜೀವನದಲ್ಲಿ ಸಾಕಷ್ಟು ಸುಖ, ಸಮೃದ್ಧಿಯೂ ಇರುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತಿನ ಕೊರತೆಯಿದ್ದರೆ ಮತ್ತು ನೀವು ಶ್ರೀಮಂತರಾಗಲು ಬಯಸಿದರೆ,  ಈ ಕೆಳಗೆ ನೀಡಲಾದ ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಪ್ರಯೋಜನವನ್ನು ನೀಡಬಹುದು. 


ಇದನ್ನೂ ಓದಿ- Budha Asta: ವೃಷಭ ರಾಶಿಯಲ್ಲಿ ಅಸ್ತಮಿಸಲಿರುವ ಬುಧ ಈ ರಾಶಿಯವರ ವೃತ್ತಿ ಬದುಕಿನಲ್ಲಿ ಭಾರೀ ನಷ್ಟ


ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇಂದೇ ಈ ಕೆಲಸ ಮಾಡಿ: 
* ಶುಕ್ರವಾರದ ವ್ರತ, ಉಪವಾಸ: 

ಶುಕ್ರವಾರದ ವ್ರತ, ಉಪವಾಸಕ್ಕೆ ತುಂಬಾ ಮಹತ್ವವಿದೆ. ಶುಕ್ರವಾರದ ದಿನ ಉಪವಾಸ ವ್ರತವನ್ನು ಆಚರಿಸಿ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಮುಸ್ಸಂಜೆ ಪೂಜೆ ವೇಳೆಗೆ ಹಾಲಿನ ಪಾಯಸ ಮಾಡಿ ಲಕ್ಷ್ಮಿಗೆ ನೇವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು 7 ಚಿಕ್ಕ ಹೆಚ್ಚು ಮಕ್ಕಳಿಗೆ ವಿತರಿಸಿ. 21 ಶುಕ್ರವಾರದವರೆಗೆ ಈ ರೀತಿ ಮಾಡುವುದರಿಂದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ದೊರೆಯಲಿದೆ. 


* ತುಳಸಿ ಪೂಜೆ: 
ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎಂಬುದು ನಂಬಿಕೆ. ಹಾಗಾಗಿ, ಪ್ರತಿದಿನ ಸಂಜೆ ತುಳಸಿ ಬಳಿ ತುಪ್ಪದ ದೀಪವನ್ನು ಹಚ್ಚಿ. ಇದರಿಂದ ತಾಯಿ  ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ. 


ಇದನ್ನೂ ಓದಿ- Shukra Gochar 2023: ವಾರದ ಬಳಿಕ ಈ 3 ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾನೆ ಶುಕ್ರ


* ಮನೆಯ ಮುಖ್ಯ ಬಾಗಿಲಿನಲ್ಲಿ ಅರಿಶಿನ-ಕುಂಕುಮ:
ಶುಕ್ರವಾರ ಸಂಜೆ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ಶುಚಿಗೊಳಿಸಿ, ಬಾಗಿಲಿನ ಎರಡೂ ಬಡಿಗಳಲ್ಲಿ ಅರಿಶಿನ ಕುಂಕುಮದಿಂದ ಸ್ವಸ್ತಿಕವನ್ನು ಮಾಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಗೆ ತಾಯಿ  ಲಕ್ಷ್ಮಿ ಪ್ರವೇಶದಿಂದ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.