ಬೆಂಗಳೂರು :ಸಂತೋಷದ ಜೀವನಕ್ಕೆ ಆರ್ಥಿಕ ಸ್ಥಿತಿಯ ಬಲವಾಗಿರುವುದು ಬಹಳ  ಅವಶ್ಯಕವಾಗಿದೆ.ಅದಕ್ಕಾಗಿಯೇ ಎಲ್ಲರೂ ಸಂಪತ್ತಿನ ದೇವತೆಯಾದ ಲಕ್ಷ್ಮೀ  ದೇವಿಯನ್ನು ಮೆಚ್ಚಿಸುವ ಪ್ರಯತ್ನ  ನಡೆಸುತ್ತಲೇ ಇರುತ್ತಾರೆ.ಲಕ್ಷ್ಮೀಯ ಕೃಪಾ ದೃಷ್ಟಿಗೆ ಪಾತ್ರರಾಗಲು ಶುಕ್ರವಾರ ಅತ್ಯದ್ಭುತ ದಿನ ಎಂದು ಹೇಳಲಾಗುತ್ತದೆ.ಈ ದಿನವು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ.ಆರ್ಥಿಕ ಬಿಕ್ಕಟ್ಟಿನಿಂದ ಪರಿಹಾರ ಪಡೆಯಲು,ಶುಕ್ರವಾರ ಲಕ್ಷ್ಮೀದೇವಿಯನ್ನು ಪೂಜಿಸಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದು.


COMMERCIAL BREAK
SCROLL TO CONTINUE READING

ಆರ್ಥಿಕ ಸ್ಥಿತಿ ಸುಧಾರಿಸಲು ಶುಕ್ರವಾರ ಹೀಗೆ ಮಾಡಿ : 
ಸಿರಿತನ ಒಲಿದು ಬರಬೇಕಾದರೆ ಶುಕ್ರವಾರ ಮಧ್ಯರಾತ್ರಿ ಅಷ್ಟ ಲಕ್ಷ್ಮಿಯರನ್ನು ಪೂಜಿಸಬೇಕು. ಕನಕಧಾರಾ ಸ್ತೋತ್ರವನ್ನೂ ಪಠಿಸಬೇಕು. ಪೂಜೆಯ ಸಮಯದಲ್ಲಿ ಲಕ್ಷ್ಮೀದೇವಿಗೆ ಗುಲಾಬಿ ಹೂಗಳನ್ನು ಅರ್ಪಿಸಬೇಕು. ಈ ಪೂಜೆಯನ್ನು ರಾತ್ರಿ ಶಾಂತಿ ಮತ್ತು ಏಕಾಂತದಲ್ಲಿ ಮಾಡಿದರೆ ಹೆಚ್ಚು ಫಲ ನೀಡುತ್ತದೆ. ಆದ್ದರಿಂದ, ಪೂಜೆಯ ಸಮಯದಲ್ಲಿ ಯಾರೂ ಅಡ್ಡಿಪಡಿಸದಂತೆ ಮುಂಚಿತವಾಗಿ ಕುಟುಂಬ ಸದಸ್ಯರಿಗೆ ತಿಳಿಸಿ ಬಿಡುವುದು ಸರಿಯಾದ ಮಾರ್ಗ. 


ಇದನ್ನೂ ಓದಿ: ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು !


ಶುಕ್ರವಾರದ ಮಂತ್ರ : 
ಶುಕ್ರವಾರದಂದು ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸಬೇಕು. ಇದಕ್ಕಾಗಿ ಶುಕ್ರವಾರ ರಾತ್ರಿ ಸ್ನಾನ ಮಾಡಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಲಕ್ಷ್ಮೀ ದೇವಿಯ  ಫೋಟೋವನ್ನು ಇಟ್ಟು ತುಪ್ಪದ ದೀಪವನ್ನು ಹಚ್ಚಿ ಪೂರ್ಣ ಭಕ್ತಿಯಿಂದ ಲಕ್ಷ್ಮಿ ದೇವಿಯ ಮಂತ್ರವನ್ನು ಜಪಿಸಿ - 'ಐಂ ಹ್ರೀಂ ಶ್ರೀ ಅಷ್ಟಲಕ್ಷ್ಮಿಯ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ'ಮಂತ್ರವನ್ನು  108 ಬಾರಿ ಜಪಿಸಬೇಕು. . ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುತ್ತಾ ಬಂದಲ್ಲಿ ಕೆಲವೇ ವಾರಗಳಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಪರಿಹಾರ  ಸಿಗುತ್ತದೆಯಂತೆ. 


ಶ್ರೀಯಂತ್ರವನ್ನು ಸ್ಥಾಪಿಸಿ  :
ಮನೆಯು ಯಾವಾಗಲೂ ಸಿರಿ ಸಂಪತ್ತಿನಿಂದ ತುಂಬಿರಬೇಕಾದರೆ ಶುಕ್ರವಾರದಂದು ಮನೆಯ ದೇವರ ಕೋಣೆಯಲ್ಲಿ ಧಾರ್ಮಿಕ ವಿಧಿಗಳ ಪ್ರಕಾರ ಶ್ರೀ ಯಂತ್ರವನ್ನು ಸ್ಥಾಪಿಸಬೇಕು. ನಂತರ ಪ್ರತಿದಿನ ಅದಕ್ಕೆ ಪೂಜೆ ಸಲ್ಲಿಸಬೇಕು. ಹೀಗೆ ಮಾಡಿದರೆ  ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಎಂದಿಗೂ ಕಡಿಮೆಯಾಗುವುದಿಲ್ಲ. ಬದಲಿಗೆ, ಸಂಪತ್ತು ಮತ್ತು ಸಮೃದ್ಧಿ ಹೆಚ್ಚುತ್ತಲೇ ಇರುತ್ತದೆ. 


ಇದನ್ನೂ ಓದಿ: 99 ವರ್ಷಗಳ ಬಳಿಕ ಗುರು, ಸೂರ್ಯ, ಮಂಗಳರಿಂದ ಅದ್ಭುತ ಯೋಗ, ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.