ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ರೀತಿಯಾಗಿ ಇದೀಗ 30 ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಶನಿಯು ಜನವರಿ 17 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇನ್ನು ಶನಿ ಸಂಕ್ರಮಣದ 13 ದಿನಗಳ ನಂತರ, ಶನಿ ಅಸ್ತವಾಗುತ್ತಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಶನಿಯು ಜನವರಿ 30, 2023 ರಂದು ಮಧ್ಯಾಹ್ನ 12.06 ರಿಂದ ಮಾರ್ಚ್ 6 ರವರೆಗೆ ರಾತ್ರಿ 11.36 ರವರೆಗೆ ಅಸ್ತವಾಗಿರುತ್ತಾನೆ. ಜೂನ್ 17, 2023 ರಂದು ರಾತ್ರಿ 10.48 ಕ್ಕೆ ಶನಿ ಗ್ರಹವು ಹಿಮ್ಮುಖ ಚಲನೆ ಆರಂಭಿಸಲಿದೆ. ನಂತರ ಜನವರಿ 30 ರಂದು ಶನಿಗ್ರಹವು ಅಸ್ತವ್ಯಸ್ತವಾಗುವುದರಿಂದ ಅನೇಕ ರಾಶಿಯವರ ಮೇಲೆ ಇದು ಪರಿಣಾಮ ಬೀರಲಿದೆ.


ಇದನ್ನೂ ಓದಿ : ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ .! ತಿರುಪತಿ ವಸತಿ ಗೃಹದ ಬಾಡಿಗೆಯಲ್ಲಿ 10 ಪಟ್ಟು ಹೆಚ್ಚಳ.!


ಈ ರಾಶಿಯವರ ಜಾತಕದಲ್ಲಿ ಏಳೂವರೆ ಶನಿ ದೆಸೆ : 
ಶನಿಯ ಅಸ್ತವಾಗುವುದರೊಂದಿಗೆ ಧನು ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ. ಇದೇ ವೇಳೆ ಮಕರ ರಾಶಿಯವರ ಜಾತಕದಲ್ಲಿ  ಮೂರನೇ ಹಂತದ ಸಾಡೇಸಾತಿ ಆರಂಭವಾಗಲಿದೆ. ಕುಂಭ ರಾಶಿಯವರ ಜೀವನದಲ್ಲಿ ಎರಡನೇ ಹಂತ ಹಾಗೂ ಮೀನ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. 


ಇವರಿಗೆ  ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ : 
ತುಲಾ ಮತ್ತು ಮಿಥುನ ರಾಶಿಯವರಿಗೆ ಶನಿ ಧೈಯ್ಯಾದಿಂದ ಮುಕ್ತಿ ದೊರೆಯುತ್ತದೆ. ಮತ್ತೊಂದೆಡೆ, ವೃಶ್ಚಿಕ ರಾಶಿ ಮತ್ತು ಕಟಕ ರಾಶಿಯವರ ಜಾತಕದಲ್ಲಿ ಶನಿ ಧೈಯ್ಯಾ ಪ್ರಾರಂಭವಾಗಲಿದೆ.  


ಇದನ್ನೂ ಓದಿ : Chanakya Niti: ಈ ಒಂದು ಕೆಲಸ ಮಾಡಿದರೆ ಸಾಕು ವರ್ಷಪೂರ್ತಿ ಆರ್ಥಿಕ ಸಮಸ್ಯೆ ಎದುರಾಗೋದೇ ಇಲ್ಲ


ಶನಿ ಸಾಡೇಸಾತಿಯಿಂದ ಪರಿಹಾರ ಪಡೆಯುವ ಮಾರ್ಗಗಳು :  
- ಶನಿಯ  ಸಾಡೆಸಾತಿ ಮತ್ತು ವಕ್ರ ದೃಷ್ಟಿಯ ಪರಿಣಾಮವನ್ನು ತಪ್ಪಿಸಲು ಶನಿ ದೇವರನ್ನು ಆರಾಧಿಸಿ ಮತ್ತು ಶನಿ ವಾರ ಉಪವಾಸ ಮಾಡಿ. 
- ಶನಿವಾರದಂದು ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ. 
- ಶನಿವಾರದಂದು ಕಪ್ಪು ಎಳ್ಳು ಮತ್ತು ಕಪ್ಪು ವಸ್ತುಗಳನ್ನು ದಾನ ಮಾಡಬೇಕು.   ಇಷ್ಟೇ ಅಲ್ಲ, ಈ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಿಂದ ವಿಶೇಷ ಪ್ರಯೋಜನವಾಗುವುದು. 
- ಶನಿವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಶನಿದೇವನ ಕೆಟ್ಟ ದೃಷ್ಟಿ ಬೀಳುವುದಿಲ್ಲ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.