Astro Tips: ಹಣಕಾಸಿನ ಅಗತ್ಯ ಮತ್ತು ಬಯಕೆ ಯಾರಿಗೆ ತಾನೇ ಇರಲ್ಲ. ಧನ ಪ್ರಾಪ್ತಿ ಹಾಗೂ ಅದರ ಸಂಗ್ರಹಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಹಲವು  ಸಲಹೆಗಳನ್ನು ನೀಡಲಾಗಿದೆ. ಈ ಸಲಹೆ ಅಥವಾ ನಿಯಮಗಳನ್ನು ಅನುಸರಿಸಿದರೆ, ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುವುದಿಲ್ಲ. ಜೋತಿಷ್ಯ ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ಮುನ್ನ ಓರ್ವ ವ್ಯಕ್ತಿ ಕೆಲ ವಿಷಯಗಳನ್ನು ಗಮನಿಸಿಕೊಳ್ಳಬೇಕು. ಈ ನಿಯಮಗಳನ್ನು ಅನುಸರಿಸದೆ ಹೋದಲ್ಲಿ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಬರಲಾರಂಭಿಸುತ್ತವೆ.

COMMERCIAL BREAK
SCROLL TO CONTINUE READING

1. ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ನಂತರ ಅವುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಮತ್ತು ಮಲಗಲು ಹೋಗಿ. ಕೊಳೆಯಾದ ಪಾದಗಳು ಮತ್ತು ಒದ್ದೆಯಾದ ಪಾದಗಳೊಂದಿಗೆ ಮಲಗಲು ಹೋಗುವುದು ಜೀವನದಲ್ಲಿ  ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು

2. ರಾತ್ರಿ ಮಲಗುವಾಗ ಸ್ವಚ್ಚವಾದ ಬಟ್ಟೆ ಧರಿಸಿ. ಏಕೆಂದರೆ ಹಗಲಿನಲ್ಲಿ ಧರಿಸುವ ಬಟ್ಟೆ ಧರಿಸಿ ಎಂದಿಗೂ ಮಲಗಬಾರದು. ಇದಲ್ಲದೆ, ಬಟ್ಟೆ ಇಲ್ಲದೆ ಅಥವಾ ಬೆತ್ತಲೆಯಾಗಿ ಮಲಗಬೇಡಿ ಎಂಬುದನ್ನು ಸಹ ನೆನಪಿನಲ್ಲಿಡಿ. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.

3. ಜನರು ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆಫ್ ಮಾಡಿ ಮಲಗುತ್ತಾರೆ. ರಾತ್ರಿ ವೇಳೆ ಮನೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದರೆ ತಾಯಿ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಮಲಗುವ ಮೊದಲು ಎಲ್ಲಾ ದೀಪಗಳನ್ನು ಎಂದಿಗೂ ಆಫ್ ಮಾಡಿ. ಆದರೆ ಸಾಧ್ಯವಾದರೆ ಬೆಡ್ ಲ್ಯಾಂಪ್ ಆನ್ ಮಾಡಿ ಇಡಿ.

4. ರಾತ್ರಿ ಮಲಗುವ ಮುನ್ನ ಹಣವನ್ನು ಎಣಿಸಬಾರದು ಅಥವಾ ಲೆಕ್ಕ ಹಾಕಬಾರದು. ರಾತ್ರಿಯಲ್ಲಿ ಹಣವನ್ನು ಎಣಿಸುವುದು ಹಣದ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ತಾಯಿ ಲಕ್ಷ್ಮಿ ಕೂಡ ಮುನಿಸಿಕೊಂಡು ಮನೆಯಿಂದ ಹೊರ ಹೋಗುತ್ತಾಳೆ.

5. ಶಾಸ್ತ್ರಗಳಲ್ಲಿ ಹಾಲನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹೀಗಿರುವಾಗ ರಾತ್ರಿ ಮಲಗುವ ಮೊದಲು, ಹಾಲಿನ ಪಾತ್ರೆಯನ್ನು ಎಂದಿಗೂ ತೆರೆದಿಡಬೇಡಿ ಎಂಬುದನ್ನು ನೆನಪಿನಲ್ಲಿಡಿ. ಹಾಲಿನ ಪಾತ್ರೆಯನ್ನು ಯಾವಾಗಲೂ ಮುಚ್ಚಿಡಬೇಕು. ಹಾಗೆ ಮಾಡಲು ವಿಫಲವಾದರೆ ಅದು ಹಣದ ನಷ್ಟಕ್ಕೆ ಕಾರಣವಾಗುತ್ತದೆ.


ಇದನ್ನೂ ಓದಿ-Vastu Tips: ಊಟ ಮಾಡುವಾಗ ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ಮರೆಯಬೇಡಿ!

6. ವಿವಿಧ ರೀತಿಯ ಗ್ಯಾಜೆಟ್ ಗಳ ಯುಗವಾಗಿರುವ ಇಂದಿನ ಕಾಲದಲ್ಲಿ. ಜನರು ಯಾವಾಗಲೂ ಮೊಬೈಲ್ ಫೋನ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದಾಗ್ಯೂ, ಮಲಗುವ ಮೊದಲು, ದಿಂಬಿನ ಸುತ್ತಲೂ ಯಾವುದೇ ರೀತಿಯ ಗ್ಯಾಜೆಟ್ ಅಥವಾ ಯಾವುದೇ ಚೂಪಾದ ವಸ್ತು ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಇದರೊಂದಿಗೆ ಯಾವುದೇ ವಿದ್ಯುತ್ ಉಪಕರಣಗಳು ಕೂಡ ಇರಬಾರದು. ಈ ಕಾರಣದಿಂದಾಗಿ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.


ಇದನ್ನೂ ಓದಿ-Marriage Tips: ಕಂಕಣ ಬಲ ಕೂಡಿಬರುತ್ತಿಲ್ಲವೇ, ಈ ಉಪಾಯ ಟ್ರೈ ಮಾಡಿ ನೋಡಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.