Guru Gochar 2023: ಇನ್ನು 24ಗಂಟೆಗಳಲ್ಲಿ ದೇವಗುರು ಬೃಹಸ್ಪತಿಯು ಮೇಷ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 22 ಏಪ್ರಿಲ್ 2023ರಂದು ಮೇಷ ರಾಶಿಯನ್ನು ಪ್ರವೇಶಿಸಲಿರುವ ಗುರು ಈ ರಾಶಿಯಲ್ಲಿ ಸೂರ್ಯ, ಬುಧ, ರಾಹು ಗ್ರಹಗಳೊಂದಿಗೆ ಸಂಯೋಜನೆ ಹೊಂದಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಜೀವನವೇ ಬದಲಾಗಲಿದೆ. ಅವರ ಜೀವನದಲ್ಲಿ ಅಪಾರ ಹಣ, ಸಂಪತ್ತು, ಕೀರ್ತಿಯನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ನಾಳೆಯಿಂದ ಈ ರಾಶಿಯವರಿಗೆ ಅಪಾರ ಹಣ, ಸಂಪತ್ತು ಕರುಣಿಸಲಿದ್ದಾನೆ ಗುರು: 
ಮೇಷ ರಾಶಿ: 

ನಾಳೆ ಮೇಷ ರಾಶಿಯಲ್ಲಿಯೇ ಗುರು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರು ವೃತ್ತಿ ರಂಗದಲ್ಲಿ ಉನ್ನತ ಹುದ್ದೆಗೇರುವರು. ಮಾತ್ರವಲ್ಲ, ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಸಮಯ ಅತ್ಯುತ್ತಮವಾಗಿದ್. 


ಸಿಂಹ ರಾಶಿ: 
ಗುರು ರಾಶಿ ಪರಿವರ್ತನೆಯು ಸಿಂಹ ರಾಶಿಯವರ ಜೀವನಲ್ಲಿಯೂ ಉತ್ತಮ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭ ಗಳಿಸುವ ಸಾಧ್ಯತೆ ಇದೆ. ಮಾತ್ರವಲ್ಲ, ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯುವ ಸಾಧ್ಯತೆಯೂ ಇದೆ. 


ಇದನ್ನೂ ಓದಿ- ಚಂದ್ರನ ರಾಶಿಯಲ್ಲಿ ಮಂಗಳನ ಸಂಚಾರ: ಬೆಳಗಲಿದೆ ಈ ರಾಶಿಯವರ ಅದೃಷ್ಟ


ಕನ್ಯಾ ರಾಶಿ: 
ಗುರು ಸಂಚಾರವು ಕನ್ಯಾ ರಾಶಿಯವರ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯನ್ನು ತರಲಿದೆ. ಈ ಸಮಯದಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಮಾತ್ರವಲ್ಲ, ಇಷ್ಟು ದಿನಗಳ ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರವನ್ನು ಪಡೆಯುವಿರಿ. 


ತುಲಾ ರಾಶಿ: 
ಗುರು ರಾಶಿ ಪರಿವರ್ತನೆಯ ಪರಿಣಾಮವಾಗಿ ದೀರ್ಘಕಾಲದ ನಿಮ್ಮ ಸಮಸ್ಯೆಗಳು ಕೊನೆಗೊಳ್ಳಲಿವೆ. ಈ ಸಮಯದಲ್ಲಿ ಕೌಟುಂಬಿಕ ಸುಖ ವೃದ್ಧಿಯಾಗಲಿದ್ದು, ಭೂಮಿ, ವಾಹನ ಖರೀದಿ ಯೋಗವೂ ಇದೆ. 


ಇದನ್ನೂ ಓದಿ- Lucky Zodiac Sign: ಮಾತೆ ಲಕ್ಷ್ಮಿಗೆ ತುಂಬಾ ಪ್ರಿಯವಂತೆ ಈ ರಾಶಿಯವರು


ಮೀನ ರಾಶಿ: 
ಗುರು ಸಂಚಾರವು ಮೀನ ರಾಶಿಯವರ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದೆ. ಈ ಸಮಯದಲ್ಲಿ ಮೀನ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ ಇದ್ದು, ಆರ್ಥಿಕವಾಗಿಯೂ ಬಲಿಷ್ಠರಾಗುವಿರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.