ಹಿಮ್ಮುಖ ಚಲನೆಯಲ್ಲಿದ್ದರೂ ಇನ್ನು 139 ದಿನಗಳವರೆಗೆ ಈ ರಾಶಿಯವರ ಮೇಲೆ ಶನಿಯ ಕೃಪಾ ದೃಷ್ಟಿ ! ಕೆಲಸ ಕಾರ್ಯಗಳಲ್ಲಿ ನೀಡುತ್ತಾನೆ ಅದೃಷ್ಟ

ಜೂನ್ 17, 2023 ರಂದು,  ಹಿಮ್ಮುಖ ಚಲನೆ  ಆರಂಭಿಸುವ ಶನಿ,ಮುಂದಿನ ನವೆಂಬರ್ ವರೆಗೆ ಹಿಮ್ಮುಖ ಚಲನೆಯಲ್ಲಿಯೆ ಇರಲಿದ್ದಾನೆ. ಈ ಸಂದರ್ಬದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟವಾದರೆ,ಇನ್ನು ಕೆಲವರಿಗೆ ಸಮಸ್ಯೆ ತಂದೊಡ್ಡುತ್ತಾನೆ.

Written by - Ranjitha R K | Last Updated : Apr 21, 2023, 09:31 AM IST
  • ಮುಂದಿನ ನವೆಂಬರ್ 4, ರವರೆಗೆ ಶನಿಯ ಚಲನೆ
  • ಶನಿ ದೇವನ ಕೃಪೆಗೆ ಪಾತ್ರರಾಗುವ ರಾಶಿಗಳು
  • ಕುಂಭ ರಾಶಿಯಲ್ಲಿ ಶನಿಯಾ ಹಿಮ್ಮುಖ ಚಲನೆಯಿಂದ ಇವರಿಗೆ ಕಷ್ಟ
ಹಿಮ್ಮುಖ ಚಲನೆಯಲ್ಲಿದ್ದರೂ ಇನ್ನು 139 ದಿನಗಳವರೆಗೆ ಈ ರಾಶಿಯವರ ಮೇಲೆ ಶನಿಯ ಕೃಪಾ ದೃಷ್ಟಿ ! ಕೆಲಸ ಕಾರ್ಯಗಳಲ್ಲಿ ನೀಡುತ್ತಾನೆ ಅದೃಷ್ಟ  title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಶನಿ ಜೂನ್ 17, 2023 ರಂದು, ತನ್ನ ಚಲನೆಯನ್ನು ಬದಲಿಸಲಿದ್ದಾನೆ.  ಕುಂಭ ರಾಶಿಯಲ್ಲಿಯೇ ಶನಿ ದೇವ  ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಮುಂದಿನ ನವೆಂಬರ್ 4, ರವರೆಗೆ ಶನಿಯ ಚಲನೆ ಹಿಮ್ಮುಖವಾಗಿಯೇ ಇರಲಿದೆ. ಕುಂಭದಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಿರುವ ಫಲವಾಗಿ ಕೆಲವು ರಾಶಿಯವರ ಭಾಗ್ಯ ಬೆಳಗಲಿದೆ. ಇಲ್ಲಿಯವರೆಗೆ ಕೈ ಕೊಟ್ಟಿದ್ದ ಅದೃಷ್ಟ ಕೈ ಹಿಡಿಯಲಿದೆ. ಹಾಗಿದ್ದರೆ ಯಾವ ರಾಶಿಯವರಿಗೆ ಶನಿ ಮಹಾತ್ಮ ಹರಸಲಿದ್ದಾನೆ ನೋಡೋಣ. 

ಶನಿ ದೇವನ ಕೃಪೆಗೆ ಪಾತ್ರರಾಗುವ ರಾಶಿಗಳು : 
ಮೀನ ರಾಶಿ : ಮೀನರಾಶಿಯವರಿಗೆ ಉತ್ತಮ ಉದ್ಯೋಗಾವಕಾಶ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು . ಉದ್ಯೋಗ ಬದಲಾವಣೆ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿರುವವರಿಗೆ ಈ ಸಮಯ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ.

ಇದನ್ನೂ ಓದಿ Wednesday Remedies: ವೃತ್ತಿ-ವ್ಯವಹಾರದಲ್ಲಿ ಯಶಸ್ಸಿಗಾಗಿ ಇಂದೇ ಈ ಕ್ರಮ ಕೈಗೊಳ್ಳಿ

ಸಿಂಹ ರಾಶಿ : ಸಿಂಹ ರಾಶಿಯವರ ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಅವಕಾಶ ಸಿಗಲಿದೆ. ರಾಜಕೀಯಕ್ಕೆ ಸಂಬಂಧಿಸಿದ ಜನರು ದೊಡ್ಡ ಸ್ಥಾನಕ್ಕೆ ಏರಬಹುದು. 

ವೃಷಭ ರಾಶಿ :  ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ   ವೃಷಭ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ವ್ಯಾಪಾರ ವೃದ್ಧಿಯಾಗಿ, ಲಾಭವೂ ಹೆಚ್ಚಾಗುವುದು. ಉದ್ಯೋಗದಲ್ಲಿರುವವರ ವೇತನ ಹೆಚ್ಚಾಗುವುದು. ಬಡ್ತಿಯೊಂದಿಗೆ ವರ್ಗಾವಣೆಯೂ ಸಾಧ್ಯ.

ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆಯಿಂದ ಇವರಿಗೆ ಕಷ್ಟ :  
ಕುಂಭ ರಾಶಿ : ಈ ರಾಶಿಯವರ ಜಾತಕದಲ್ಲಿ ಶನಿಯ ಸಾಡೇಸಾತಿಯ ಎರಡನೇ ಘಟ್ಟ ಆರಂಭವಾಗಿದೆ . ಸಾಡೆಸಾತಿಯ ಎರಡನೇ ಹಂತವು ಅತ್ಯಂತ ತೊಂದರೆದಾಯಕವಾಗಿರುತ್ತದೆ. ಈ ಕಾರಣದಿಂದ ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೀಲುಗಳಲ್ಲಿ, ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ನೋವು ತೊಂದರೆ ನೀಡಬಹುದು.

ಇದನ್ನೂ ಓದಿ :Akshaya Tritiya 2023: ತಾಯಿ ಮಹಾಲಕ್ಷ್ಮೀ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ

ಮಕರ ರಾಶಿ : ಮಕರ ರಾಶಿಯಂದು ಶನಿಯ ಸಾಡೇಸಾತಿಯ ಮೂರನೇ ಘಟ್ಟ ಆರಂಭವಾಗಿದೆ. ಇದು ಸಾಡೇಸಾತಿಯ ಕೊನೆಯ ಹಂತ. ಈ ಸಮಯವು ಕೂಡಾ ಕಷ್ಟಗಳಿಂದ ತುಂಬಿರುತ್ತದೆ. ಮಾನಸಿಕ, ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಹೊಂದಿರಬಹುದು.

ಕರ್ಕ ರಾಶಿ : ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ . ಕೌಟುಂಬಿಕ ಸಮಸ್ಯೆಗಳಿಂದ ಟೆನ್ಷನ್ ಕೂಡಾ ಇರುತ್ತದೆ. ಕೆಲಸದ ಸ್ಥಳದಲ್ಲೂ ಅಡೆತಡೆಗಳು ಉಂಟಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ಸಮಸ್ಯೆಗಳಿರಬಹುದು.

ವೃಶ್ಚಿಕ ರಾಶಿ : ಶನಿಯ ಪ್ರಭಾವದಿಂದಾಗಿ ಜೀವನದಲ್ಲಿ ಎಲ್ಲವೂ  ಏರುಪೇರಾಗುತ್ತದೆ. ಕೌಟುಂಬಿಕ ಸಮಸ್ಯೆಯಿಂದ ಮಾನಸಿಕ ಶಾಂತಿ ಕಡಿಮೆಯಾಗಬಹುದು. ವೈಷಮ್ಯ ಮತ್ತು ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News