Guruvara Tulsi Upay: ಆರ್ಥಿಕ ಸಂಕಷ್ಟದಿಂದ ಪರಿಹಾರಕ್ಕಾಗಿ ಗುರುವಾರದ ತುಳಸಿ ಉಪಾಯಗಳು
Guruvara Tulsi Upay: ಹಿಂದೂ ಧರ್ಮದಲ್ಲಿ ವಾರದ ಏಳೂ ದಿನಗಳಿಗೂ ಅದರದೇ ಆದ ಮಹತ್ವವಿದೆ. ಅಂತೆಯೇ, ಗುರುವಾರದಂದು ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಉತ್ತಮ ದಿನ ಎಂದು ಪರಿಗಣಿಸಲಾಗಿದೆ.
Guruvara Tulsi Upay: ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಅತ್ಯಂತ ಪವಿತ್ರ, ಪೂಜನೀಯ ಸಸ್ಯ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ನೆಲೆಸಿದ್ದಾಳೆ. ಹಿಂದೂ ಧರ್ಮದಲ್ಲಿ ವಾರದ ಏಳೂ ದಿನಗಳಿಗೂ ಅದರದೇ ಆದ ಮಹತ್ವವಿದೆ. ಅಂತೆಯೇ, ಗುರುವಾರದಂದು ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು ಉತ್ತಮ ದಿನ ಎಂದು ಪರಿಗಣಿಸಲಾಗಿದೆ. ಗುರುವಾರದ ದಿನ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಕೆಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡಕ್ಕೆ (Tulsi Plant) ನೀರು ಹಾಕಿ ದೀಪ ಬೆಳಗಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ, ಸುಖ-ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಗುರುವಾರದ ದಿನ ತುಳಸಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳನ್ನು ಕೈಗೊಳ್ಳುವುದರಿಂದ ತಾಯಿ ಲಕ್ಷ್ಮಿ (Goddess Lakshmi) ಪ್ರಸನ್ನಳಾಗಿ, ಮನೆಯವರ ಮೇಲೆ ಆಶೀರ್ವಾದವನ್ನು ಸುರಿಸುತ್ತಾಳೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Guru Gochar 2024: 20 ದಿನಗಳ ಬಳಿಕ ತೆರೆಯಲಿದೆ ಈ ರಾಶಿಯವರ ಭಾಗ್ಯದ ಬಾಗಿಲು, ಮುಂದಿನ 1 ವರ್ಷ ಇವರಿಗೆ ಸೋಲೆಂಬುದೇ ಇಲ್ಲ
ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಮುಕ್ತಿಗಾಗಿ ಗುರುವಾರದ ತುಳಸಿ ಪರಿಹಾರಗಳು:
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಗುರುವಾರದ ದಿನ ತುಳಸಿಗೆ ನೀರು ಹಾಕಿ ಪೂಜಿಸುವುದರ ಜೊತೆಗೆ ಸಂಜೆ ವೇಳೆ ತುಳಸಿ ಮಾತೆಗೆ ತುಪ್ಪದ ಆರತಿ ಮಾಡುವುದರಿಂದ ಸಂಪತ್ತಿನ ಅಧಿದೇವತೆ ಮನೆಗೆ ಪ್ರವೇಶಿಸುತ್ತಾಳೆ. ಮಾತ್ರವಲ್ಲ, ಆ ಮನೆಯಲ್ಲಿ ಆರ್ಥಿಕ ಮುಗ್ಗಟ್ಟುಗಳಿಂದ ಮುಕ್ತಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಗುರುವಾರದ ದಿನ ಧಾರ್ಮಿಕ ನಿಯಮಗಳ ಪ್ರಕಾರ ತುಳಸಿಯನ್ನು ಪೂಜಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಗುರುವಾರ ಮುಸ್ಸಂಜೆ ವೇಳೆಯಲ್ಲಿ ತುಳಸಿಗೆ ತುಪ್ಪದ ಆರತಿ ಬೆಳಗುವುದರಿಂದ ಅಂತಹ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶವಾಗಿ, ಸುಖ-ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- Ugadi Horoscope 2024: ಯುಗಾದಿ ವರ್ಷ ಭವಿಷ್ಯ, ದ್ವಾದಶ ರಾಶಿಗಳ ಫಲಾಫಲ
ಧಾರ್ಮಿಕ ನಂಬಿಕೆಗಳ ಪ್ರಕಾರ, ಗುರುವಾರದ ದಿನ ಬೆಳಿಗ್ಗೆ ಮತ್ತು ಸಂಜೆ ತುಳಸಿ ಮುಂದೆ ದೀಪ ಬೆಳಗಿಸಿ ಆರತಿ ಮಾಡುವುದರಿಂದ ಮನೆಯಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ. ಅಲ್ಲದೆ, ಜಾತಕದಲ್ಲಿ ಗುರು ದೋಷವೂ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.