Daily Horoscope (ದಿನಭವಿಷ್ಯ 19-04-2022) :   ಇಂದು ಸಿಂಹ ರಾಶಿಯ ಜನರಿಗೆ ಒಡಹುಟ್ಟಿದವರೊಂದಿಗಿನ ವಿವಾದಗಳಿಂದ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ತುಲಾ ರಾಶಿಯ ಜನರು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸರಿಯಾಗಿ ಯೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವುದು ಉತ್ತಮ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಮಂಗಳವಾರದಂದು ಮೇಷ ರಾಶಿಯವರು ವ್ಯಾಪಾರ-ವ್ಯವಹಾರದಲ್ಲಿ ಹೊಸ ಉತ್ಸಾಹ ಹೊಂದಿರುತ್ತೀರಿ. ಇದು ನಿಮಗೆ ಮುಂದಿನ ದಿನಗಳಲ್ಲಿ ಉತ್ತಮ ಯಶಸ್ಸನ್ನು ಒದಗಿಸುತ್ತದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಗೆಲುವು ನಿಮ್ಮದಾಗಲಿದೆ. 


ವೃಷಭ ರಾಶಿ: ಈ ರಾಶಿಯ ಜನರಿಗೆ ಇಂದಿನ ದಿನವು ಸಾಕಷ್ಟು ವಿವಾದಾತ್ಮಕವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲಧಿಕಾರಿಗಳ ನಿರ್ಲಕ್ಷ್ಯವನ್ನು ನೀವು ಎದುರಿಸಬೇಕಾಗುತ್ತದೆ. ನಿಮ್ಮ ಒಡನಾಡಿಗಳು ನಿಮ್ಮ ದೌರ್ಬಲ್ಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು.


ಮಿಥುನ ರಾಶಿ: ಇಂದು ಮಿಥುನ ರಾಶಿಯ ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.  ಯೋಚಿಸಿ ಕೆಲಸ ಮಾಡುವುದರಿಂದ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದರಿಂದ ವೃತ್ತಿಪರ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.


ಕರ್ಕ ರಾಶಿ: ಕರ್ಕ ರಾಶಿಯ ಜನರಿಗೆ ಇಂದಿನ ದಿನ ಆತ್ಮವಿಶ್ವಾಸ ಉತ್ತುಂಗದಲ್ಲಿರಲಿದೆ. ರಾಜಕೀಯ ಅಥವಾ ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿದ ಜನರು ಅನೇಕ ಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ ಸಮಾಜದಲ್ಲಿ ಗೌರವವನ್ನು ಪಡೆಯುತ್ತೀರಿ. ಇದಲ್ಲದೆ ಕೆಲವು ಹೊಸ ಜವಾಬ್ದಾರಿಗಳನ್ನು ಸಹ ಪಡೆಯಬಹುದು. 


ಇದನ್ನೂ ಓದಿ- Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ


ಸಿಂಹ ರಾಶಿ: ಮಂಗಳವಾರ ನಿಮಗೆ ಅಷ್ಟಾಗಿ ಚೆನ್ನಾಗಿಲ್ಲ. ಒಡಹುಟ್ಟಿದವರೊಂದಿಗಿನ ವಿವಾದಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ಆದಾಗ್ಯೂ, ಪ್ರೀತಿ-ಪ್ರೇಮ ವಿಷಯದಲ್ಲಿ ದಿನವು ಚೆನ್ನಾಗಿದೆ. ಕಠಿಣ ಪರಿಶ್ರಮದಿಂದ ಆರ್ಥಿಕ ಲಾಭವನ್ನೂ ಪಡೆಯಬಹುದು. 


ಕನ್ಯಾ ರಾಶಿ: ಇಂದು ಕೆಲಸದ ಸ್ಥಳದಲ್ಲಿ ಹೊಸ ಸಮೀಕರಣಗಳಿಂದಾಗಿ ನೀವು ಇಡೀ ದಿನ ಕಾರ್ಯನಿರತರಾಗಿರುತ್ತೀರಿ. ಇಷ್ಟು ದಿನ ಸ್ಥಗಿತಗೊಂಡಿರುವ ಕೆಲವು ಯೋಜನೆಗಳು ಈಗ ಕಾರ್ಯರೂಪಕ್ಕೆ ಬರಲಿವೆ. ಉದ್ಯೋಗಸ್ಥರಿಗೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಜೊತೆಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆಯನ್ನು ಪಡೆಯಬಹುದು.


ತುಲಾ ರಾಶಿ: ಮಂಗಳವಾರ ಮಿಶ್ರ ಫಲಿತಾಂಶಗಳು ಸಾಧ್ಯ. ಆದಾಗ್ಯೂ, ನಿಮ್ಮ ಪರವಾಗಿ ಬಹುತೇಕ ಒಳ್ಳೆಯ ಫಲಿತಾಂಶಗಳೇ ಲಭ್ಯವಿದೆ. ಅನುತ್ಪಾದಕ ಚಟುವಟಿಕೆಗಳಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಯಾವುದೇ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಸರಿಯಾಗಿ ಯೋಚಿಸಿ. ಹೂಡಿಕೆ ಮಾಡುವ ಮುನ್ನ ಆರ್ಥಿಕ ತಜ್ಞರಿಂದ ಸೂಕ್ತ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.


ವೃಶ್ಚಿಕ ರಾಶಿ: ಮಂಗಳವಾರದಂದು ವೃಶ್ಚಿಕ ರಾಶಿಚಕ್ರದ ಜನರು ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.  ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಲಾಭದ ಅವಕಾಶಗಳನ್ನು ಕಲ್ಪಿಸಲಿದೆ. ಜೊತೆಗೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಿಮ್ಮ ಆರ್ಥಿಕ ಸಪರಿ್ಥಿತಿಯೂ ಉತ್ತಮವಾಗಿರುತ್ತದೆ.


ಇದನ್ನೂ ಓದಿ- ನಾಯಕತ್ವದ ಗುಣ ಹೊಂದಿರುತ್ತಾರೆ ಈ ರಾಶಿಯವರು, ಇವರನ್ನು ಸೋಲಿಸುವುದು ಸುಲಭವಲ್ಲ


ಧನು ರಾಶಿ: ಮಂಗಳವಾರ ಧನು ರಾಶಿಯವರು ಉತ್ತಮ ಆರೋಗ್ಯವನ್ನು ಆನಂದಿಸುವಿರಿ ಮತ್ತು ನಿಮ್ಮ ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಧನಪ್ರಾಪ್ತಿಯಾಗಲಿದೆ. ಇದರೊಂದಿಗೆ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ.  


ಮಕರ ರಾಶಿ: ಇದು ನಿಮಗೆ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಅನುಕೂಲಕರ ಅವಧಿ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಮತ್ತು ಸಹಕಾರವು ಮುಂಬರುವ ತಿಂಗಳುಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.  


ಕುಂಭ ರಾಶಿ: ಈ ರಾಶಿಯ ಜನರು ಇಂದು ಯಾವುದೇ ಕೆಲಸದಲ್ಲಿ ನಿಮ್ಮ ಜೀವನ ಸಂಗಾತಿ ಅಥವಾ ಸಹವರ್ತಿಗಳ ಬೆಂಬಲವನ್ನು ಅರೆಮನಸ್ಸಿನಿಂದ ಪಡೆಯುತ್ತೀರಿ. ಹಾಗಾಗಿ ನೀವು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದಿರಬಹುದು. ಈ ಪರಿಸ್ಥಿತಿಯು ನಿಮ್ಮನ್ನು ಮಾನಸಿಕ ಗೊಂದಲ ಮತ್ತು ಒತ್ತಡಕ್ಕೆ ಸಿಲುಕಿಸುತ್ತದೆ. ಇದರಿಂದ ನೀವು ಅಸಮಾಧಾನಗೊಳ್ಳಬಹುದು. ಆದರೆ, ಈ ಬಗ್ಗೆ ಯಾರಿಗೂ ತಿಲಿಸದಿರುವುದೇ ಉತ್ತಮ.


ಮೀನ ರಾಶಿ: ಹೊಸ ವ್ಯಾಪಾರ-ವ್ಯವಹಾರರಗಳನ್ನು ಅಂತಿಮಗೊಳಿಸಲು ಇದು ಅನುಕೂಲಕರ ಸಮಯವಾಗಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳು ಮುಂಬರುವ ತಿಂಗಳುಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.