Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ

Numerology In Kannada: ಅಂಕ ಜೋತಿಷ್ಯದ ಪ್ರಕಾರ, ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ತುಂಬಾ ಆಕರ್ಷಕರಾಗಿರುತ್ತಾರೆ. ಶುಕ್ರ ಗ್ರಹದ ಪ್ರಭಾವದಿಂದಾಗಿ ಈ ಜನರು ತಮ್ಮ ಜೀವನದಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ ಮತ್ತು ಸಾಕಷ್ಟು ಹಣವನ್ನು ಸಂಪಾದಿಸುತ್ತಾರೆ.  

Written by - Nitin Tabib | Last Updated : Apr 18, 2022, 01:32 PM IST
  • ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ
  • ಇವರು ತಮ್ಮ ಜೀವನದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ
  • ಅಷ್ಟೇ ಅಲ್ಲ ಈ ಜನರು ಐಶಾರಾಮಿ ಜೀವನವನ್ನು ಕೂಡ ಸಾಗಿಸುತ್ತಾರೆ
Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ title=
Numerology In Kannada

Numerology In Kannada: ಅಂಕ ಜೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮೂಲಾಂಕವನ್ನು ಲೆಕ್ಕಹಾಕಲಾಗುತ್ತದೆ ಮತ್ತು ಈ ಮೂಲಾಂಕ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳುತ್ತದೆ. ವಾಸ್ತವದಲ್ಲಿ, ಸಂಖ್ಯಾಶಾಸ್ತ್ರ ಅಥವಾ ಅಂಕ ಜೋತಿಷ್ಯಶಾಸ್ತ್ರದಲ್ಲಿ, 1 ರಿಂದ 9 ರವರೆಗಿನ ಎಲ್ಲಾ ಮೂಲಾಂಕಗಳನ್ನು ಹೊಂದಿರುವ ಜನರ ಗುಣಲಕ್ಷಣಗಳನ್ನು ಹೇಳಲಾಗಿದೆ. ಇದರೊಂದಿಗೆ ಅವರ ಭವಿಷ್ಯದ ಬಗ್ಗೆಯೂ ಆಳವಾಗಿ ವಿವರಣೆಗಳನ್ನು ನೀಡಲಾಗಿದೆ. ಅದರ ಪ್ರಕಾರ, ಮೂಲಾಂಕ 6ರ ಜನರು ಕೆಲ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಈ ಗುಣಗಳು ಅವರನ್ನು ಅತ್ಯಂತ ಆಕರ್ಷಕ ವ್ಯಕ್ತಿತ್ವದ ಮಾಲೀಕರನ್ನಾಗಿ ಮಾಡುತ್ತದೆ.

ಮೂಲಾಂಕ 6 ಇರುವ ಜನರ ಮೇಲೆ ಶುಕ್ರನ ಪ್ರಭಾವ ಇರುತ್ತದೆ.
ಯಾವುದೇ ತಿಂಗಳ 6, 15 ಮತ್ತು 24 ರಂದು ಜನಿಸಿದ ಸ್ಥಳೀಯರು ಮೂಲಾಂಕ ಸಂಖ್ಯೆ 6 ಅನ್ನು ಹೊಂದಿರುತ್ತಾರೆ. ಮೂಲಾಂಕ 6 ರ ಅಧಿಪತಿ ಶುಕ್ರ, ಶುಕ್ರನನ್ನು ಸಾಮಾನ್ಯವಾಗಿ ಸೌಂದರ್ಯ, ಪ್ರಣಯ, ಆಕರ್ಷಣೆ, ಸಂಪತ್ತು, ಭೌತಿಕ ಸಂತೋಷದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರ ಗ್ರಹದ ಪ್ರಭಾವದಿಂದಾಗಿ, ಮೂಲಾಂಕ 6 ಹೊಂದಿರುವ ಜನರು ಬಹಳ ಆಕರ್ಷಕರಾಗಿರುತ್ತಾರೆ. ವಯಸ್ಸಾದಂತೆ ಈ ಜನರು ಹೆಚ್ಚು ಆಕರ್ಷಕವಾಗುತ್ತಾರೆ. ಇವರ ಸ್ವಭಾವವೂ ಕೂಡ ಸಾಕಷ್ಟು ತಮಾಷೆಯಿಂದ ಕೂಡಿರುತ್ತದೆ ಮತ್ತು ಅವರು ಸುಹೃದಯವನ್ತರಾಗಿರುತ್ತಾರೆ ಮತ್ತು ಒಳ್ಳೆಯವರಾಗಿರುತ್ತಾರೆ. ಜನರನ್ನು ಎಷ್ಟು ವಿಶೇಷ ರೀತಿಯಲ್ಲಿ ಇವರು ನಡೆಸಿಕೊಳ್ಳುತ್ತಾರೆಂದರೆ, ಮೊದಲ ಭೇಟಿಯಲ್ಲಿಯೇ ಜನರು ಇವರಿಗೆ ಫ್ಯಾನ್ ಆಗಿ ಬಿಡುತ್ತಾರೆ.

ಐಷಾರಾಮಿ ಜೀವನಪ್ರಿಯರಾಗಿರುತ್ತಾರೆ
ಈ ಜನರು ಶ್ರಮಶೀಲರು ಮತ್ತು ಬುದ್ಧಿವಂತರು ಕೂಡ ಹೌದು. ಅಲ್ಲದೆ, ಇವರು ತುಂಬಾ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಈ ಜನರು ದುಬಾರಿ ವಸ್ತುಗಳನ್ನು ಮಾತ್ರ ಇಷ್ಟಪಡುತ್ತಾರೆ. ಈ ಹವ್ಯಾಸವನ್ನು ಪೂರೈಸಲು, ಈ ಜನರು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಗುರಿಗಳನ್ನು ಮಾಡುವ ಮೂಲಕ ಅವುಗಳನ್ನು ಬೆನ್ನಟ್ಟಲು ಪ್ರಾರಂಭಿಸುತ್ತಾರೆ. ಈ ಜನರು ಚಲನಚಿತ್ರ, ಮಾಧ್ಯಮ, ಗ್ಲಾಮರ್, ಆಭರಣ, ಬಟ್ಟೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ, ಇವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ.

ಇದನ್ನೂ ಓದಿ-Weekly Horoscope: ಈ ರಾಶಿಗಳ ಜನರಿಗೆ ಸಿಗಲಿದೆ ಗುಡ್ ನ್ಯೂಸ್, ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ?

ಖಂಡಿತವಾಗಿಯೂ ಮಿಲಿಯನೇರ್ ಆಗುತ್ತಾರೆ
ಅಂಕ ಜ್ಯೋತಿಷ್ಯದ ಪ್ರಕಾರ, ಮೂಲಾಂಕ 6 ಹೊಂದಿರುವ ಜನರು ತಮ್ಮ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಕೆ ಮಾಡಿ ಯಶಸ್ವಿಯಾಗುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಹಣವನ್ನು ಸಂಗ್ರಹಿಸುತ್ತಾರೆ. ಈ ಜನರಿಗೆ ತಿಳಿ ನೀಲಿ, ತಿಳಿ ಗುಲಾಬಿ ಮತ್ತು ಬಿಳಿ ಬಣ್ಣಗಳು ಶುಭ.

ಇದನ್ನೂ ಓದಿ-Vastu Tips: ಮಲಗುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ, ಒಂದರ ಮೇಲೊಂದರಂತೆ ಯಶಸ್ಸು ನಿಮ್ಮದಾಗಲಿದೆ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News