Yearly Horoscope 2024 : ಮಹಾಲಕ್ಷ್ಮಿ ವರ್ಷ 2024 ಪ್ರಾರಂಭವಾಗಿದೆ. ದೀಪಾವಳಿಯ ನಂತರ ಗ್ರಹಗಳು ಮತ್ತು ನಕ್ಷತ್ರಗಳ ಅತ್ಯಂತ ಮಂಗಳಕರ ಸಂಯೋಜನೆಯಾಗಿದೆ. ಹೀಗಾಗಿ ಅನೇಕ ಮಂಗಳಕರ ಯೋಗಗಳು ಕೂಡಾ ರೂಪು ಗೊಂಡಿವೆ. ಈ ಯೋಗಗಳು ಮುಂಬರುವ ಹಲವು ತಿಂಗಳುಗಳವರೆಗೆ ಮುಂದುವರಿಯುತ್ತದೆ. ದೀಪಾವಳಿಯ ಕೆಲವು ದಿನಗಳ ಹಿಂದೆ ರಾಹು-ಕೇತು ಸಂಕ್ರಮಣವಾಯಿತು. ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ನೇರ ನಡೆಗೆ ಮರಳಿದ್ದಾನೆ. ರಾಹು ಒಂದು ವರ್ಷ ಮೀನ ರಾಶಿಯಲ್ಲಿದ್ದರೆ, ಕೇತು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಶನಿಯು ಕುಂಭ ರಾಶಿಯಲ್ಲಿ ಸಾಗಲಿದ್ದು ಗುರು ಗ್ರಹ ಸಂಕ್ರಮಿಸಿ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಈ ಗ್ರಹಗಳ ಸ್ಥಾನದಲ್ಲಿನ ಬದಲಾವಣೆ ಐದು ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ.  ಈ ರಾಶಿಯವರ ಮೇಲೆ ಮಹಾಲಕ್ಷ್ಮಿ ದಯೆ  2024 ರಲ್ಲೂ ಮುಂದುವರೆಯಲಿದೆ. 


COMMERCIAL BREAK
SCROLL TO CONTINUE READING

2024 ರ ಅದೃಷ್ಟದ ರಾಶಿಗಳು : 
ಮಿಥುನ ರಾಶಿ : ಮಿಥುನ ರಾಶಿಯವರಿಗೆ 2024 ರ ವರ್ಷವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ವ್ಯಕ್ತಿತ್ವದಲ್ಲಿ ವಿಭಿನ್ನ ಪರಿಣಾಮ ಕಂಡುಬರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ವಾಹನ ಖರೀದಿ ಯೋಗವಿದೆ. ವೃತ್ತಿಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ಪಡೆಯಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಮತ್ತು ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿದೆ. 


ಇದನ್ನೂ ಓದಿ : ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ-ಭಾಗ್ಯೋದಯ ಯೋಗ!


ಸಿಂಹ ರಾಶಿ : 2024 ರ ವರ್ಷವು ಸಿಂಹ ರಾಶಿಯವರ ಜೀವನದಲ್ಲಿ ಸುವರ್ಣ ಯುಗ ಎಂದರೆ ತಪ್ಪಲ್ಲ. ಒತ್ತಡದಿಂದ ಮುಕ್ತಿ ಸಿಗುವುದು. ಆರ್ಥಿಕ ಲಾಭವಾಗುವುದು. ಆದಾಯ ಹೆಚ್ಚಲಿದೆ. ನೀವು ನಿರೀಕ್ಷಿಸಿದಂತೆ ಫಲ ಸಿಗುತ್ತಾ ಹೋಗುವುದು. ಹೂಡಿಕೆಯಿಂದ ಲಾಭವಾಗಲಿದೆ. 


ಕನ್ಯಾ ರಾಶಿ: ಕನ್ಯಾ ರಾಶಿಯ ಜನರು 2024ರಲ್ಲಿ ಭಾರಿ ಆರ್ಥಿಕ ಲಾಭಗಳನ್ನು ಪಡೆಯಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವೇಗವಾಗಿ ಹೆಚ್ಚಾಗುತ್ತದೆ. ಯಾವುದೇ ಪ್ರಮುಖ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ಭಾಗವಹಿಸಿ   ಯಶಸ್ವಿಯಾಗುವಿರಿ. ಆಸ್ತಿ ಮತ್ತು ವಾಹನ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಟ್ಟದ ಲಾಭವನ್ನು ಪಡೆಯುವಿರಿ.  


ಇದನ್ನೂ ಓದಿ : 2024 ರಲ್ಲಿ ಯಶಸ್ಸಿನ ಹಾದಿಯಲ್ಲಿಯೇ ನಡೆಯುತ್ತಾರೆ ಈ ರಾಶಿಯವರು ! ಸಂಪತ್ತಿನ ಸುಧೆ ಹರಿಸುತ್ತಾರೆ ಗುರು ಮತ್ತು ಶನಿ


ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರು 2024 ರಲ್ಲಿ ತಮ್ಮ ವ್ಯಾಪಾರವನ್ನು ಗಮನಾರ್ಹವಾಗಿ ವಿಸ್ತರಿಸುವ ಅವಕಾಶವನ್ನು ಪಡೆಯಬಹುದು. ಒಂದರ ನಂತರ ಒಂದರಂತೆ ಪ್ರಯೋಜನಗಳು ಸಿಗುವುದು. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬಹುದು. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. 


ಮಕರ ರಾಶಿ : ಮಕರ ರಾಶಿಯವರಿಗೆ 2024ರ ವರ್ಷವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕಠಿಣ ಪರಿಶ್ರಮದಿಂದ ಯಶಸ್ಸು ಸಿಗುವುದು.  ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗುತ್ತದೆ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುವರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ