ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ-ಭಾಗ್ಯೋದಯ ಯೋಗ!

Budhaditya Yog In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಂಡಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಧನ ಕುಬೇರ ಕೃಪೆಯಿಂದ ಭಾರಿ ಧನಲಾಭ ಉಂಟಾಗಳಿದ್ದು, ಈ ಅವಧಿಯಲ್ಲಿ ಅವರ ಭಾಗ್ಯೋದಯ ನೆರವೇರಲಿದೆ. (Spiritual News In Kannada)
 

ಬೆಂಗಳೂರು: ಜೋತಿಷ್ಯ ಪಂಚಾಂಗದ ಪ್ರಕಾರ ಇಂದು ನವೆಂಬರ್ 17, 2023, ವೃಶ್ಚಿಕ ರಾಶಿಗೆ ಗ್ರಹಗಳ ರಾಜ ಸೂರ್ಯ ಪ್ರವೇಶಿಸಿದ್ದಾನೆ. ಆದರೆ, ವೃಶ್ಚಿಕ ರಾಶಿಗೆ ಈಗಾಗಲೇ ಅಂದರೆ ನವೆಂಬರ್ 6, 2023 ರಂದು ಬುಧ ಪ್ರವೇಶಿಸಿರುವ ಕಾರಣ ಅಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಂಡಿದೆ. ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ವೃಶ್ಚಿಕ ರಾಶಿಯ ಮೇಲೆ ಮಂಗಳನ ಅಧಿಪತ್ಯವಿದೆ. ಹೀಗಿರುವಾಗ ಈ ಯೋಗ ರೂಪಗೊಳ್ಳುವುದು ಒಂದು ಮಹತ್ವದ ಘಟನೆಯ ರೂಪದಲ್ಲಿ ನೋಡಲಾಗುತ್ತಿದೆ. ಆದರೆ ಕೆಲ ರಾಶಿಗಳ ಜನರಿಗೆ ಇದರಿಂದ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದ್ದು, ಅವರ ಘನತೆ-ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ICC World Cup 2023 Final ಕುರಿತು ಜೋತಿಷ್ಯ ಪಂಡಿತರು ನುಡಿದ ಭವಿಷ್ಯವಾಣಿ ಇಲ್ಲಿದೆ! ಈ ತಂಡ ಗೆಲ್ಲುತ್ತಂತೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವೃಶ್ಚಿಕ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಇನ್ನೊಂದೆಡೆ ಯಾವುದಾದರೊಂದು ಆಸ್ತಿ ಪಾಸ್ತಿಗೆ ಸಂಬಂಧಿಸಿದಂತೆ ಕೋರ್ಟ್-ಕಚೇರಿ ವಾದ ನಡೆಯುತ್ತಿದ್ದರೆ, ಖಂಡಿತವಾಗಿಯೂ ಜಯ ನಿಮ್ಮದಾಗಲಿದೆ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಸಂಪತ್ತಿನ ವಿಷಯದಲ್ಲಿಯೂ ಕೂಡ ಈ ಸಮಯ ಸಾಕಷ್ಟು ಲಾಭಕಾರಿಯಾಗಿದೆ.  ಈ ಅವಧಿಯಲ್ಲಿ ನೀವು ಆಸ್ತಿ ಪಾಸ್ತಿ ಖರೀದಿಸಬಹುದು ಅಥವಾ ಮಾರಾಟಮಾಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. 

2 /7

ಕರ್ಕ ರಾಶಿ: ಈ ಯೋಗ ನಿಮ್ಮ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆರ್ಥಿಕ ದೃಷ್ಟಿಕೋನದಿಂದ ಈ ಅವಧಿ ನಿಮಗೆ ಸಾಕಷ್ಟು ಲಾಭ ನೀಡುವುದ್ದಾಗಿದೆ. ಹೂಡಿಕೆಗಾಗಿ ನೀವು ಯೋಜನೆ ರೂಪುಸುವ ಸಾಧ್ಯತೆ ಇದೆ. ಇದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಕೂಡ ಈಡೇರಲಿವೆ. ಒಂದು ವೇಳೆ ನೀವು ವಿದ್ಯಾರ್ಥಿಯಾಗಿದ್ದಾರೆ. ಪರೇಕ್ಷೆಯಲ್ಲಿ ನೀವು ಉತ್ತೀರ್ಣರಾಗುವ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಅಥವಾ ಉನ್ನತ ಕೋರ್ಸ್ ಗೆ ನಿಮಗೆ ಅಡ್ಮಿಷನ್ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗುವ ಸಾಧ್ಯತೆ ಇದೆ. 

3 /7

ಸಿಂಹ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವ್ಧಿಯಲ್ಲಿ ನಿಮಗೆ ವಾಹನ-ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಸುಖ-ಸಮೃದ್ಧಿಯಲ್ಲಿ ಹೆಚ್ಚಳವನ್ನು ನೀವು ಗಮನಿಸಬಹುದು. ಐಷಾರಾಮಿ ವಸ್ತುಗಳ ಖರೀದಿಗೆ ನಿಮ್ಮ ಒಲವು ಹೆಚ್ಚಾಗಲಿವೆ. ನಿಮ್ಮ ಕೆಲಸ ರಿಯಲ್ ಎಸ್ಟೇಟ್, ಭೂಮಿ ಹಾಗೂ ಆಸ್ತಿಪಾಸ್ತಿಗೆ ಸಂಬಂಧಿಸಿದ್ದರೆ, ಉತ್ತಮ ಲಾಭ ನಿಮ್ಮದಾಗಲಿದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. 

4 /7

ತುಲಾ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಸಂಭವಿಸಲಿದೆ. ಈ ಸಮಯದಲ್ಲಿ ಸಿಲುಕಿಹಾಕಿಕೊಂಡ ನಿಮ್ಮ ಧನ ನಿಮ್ಮತ್ತ ಮರಳಲಿದೆ. ನೌಕರವರ್ಗದ ಜನರ ಆದಾಯ ಹೆಚ್ಚಾಗಲಿದೆ ಮತ್ತು ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ನೀವು ಯಶಸ್ವಿಯಾಗುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ವೃತ್ತಿ ಕ್ಷೇತ್ರದಲ್ಲಿ ಜಬರ್ದಸ್ತ್ ಯಶಸ್ಸು ನಿಮಗೆ ಸಿಗಲಿದ್ದು, ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಜನರು ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಮಾರ್ಕೆಟಿಂಗ್, ಮಾಧ್ಯಮ, ಶಿಕ್ಷಣ ಹಾಗೂ ಸಂವಹನ ಕ್ಷೇತ್ರದಲ್ಲಿರುವ ಜನರಿಗೆ ಈ ಸಮಯ ಅದ್ಭುತವಾಗಿರಲಿದೆ. 

5 /7

ಮಕರ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭದ ಸ್ಥಾನದಲ್ಲಿ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ಜಬರ್ದಸ್ತ್ ಹೆಚ್ಚಳವಾಗಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುವ ಕಾರಣ ನಿಂತು ಹೋದ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಿಲುಕಿಕೊಂಡ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ. ಇನ್ನೊಂದೆಡೆ ನಿಮ್ಮ ಆದಾಯದಲ್ಲಿ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಕಾರ್ಯಕ್ಷೇತ್ರದಲ್ಲಿ ಪ್ರಭಾವ ಹೆಚ್ಚಾಗಲಿದೆ. ಕಾರ್ಯಸ್ಥಳದಲ್ಲಿ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ನಿಮ್ಮ ಸಂಬಂಧಗಳು ಉತ್ತಮವಾಗಿರಲಿವೆ. ದೀರ್ಘಕಾಲದಿಂದ ಸಂತಾನ ಅಪೇಕ್ಷೆ ಹೊಂದಿರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುವ ನಿರೀಕ್ಷೆ ಇದೆ. 

6 /7

ಮೀನ ರಾಶಿ: ನಿಮ್ಮ ಪಾಲಿಗೆ ಈ ಯೋಗ ಒಂದು ವರದಾನ ಎಂದರೆ ತಪ್ಪಾಗಲಾರದು, ಏಕೆಂದರೆ ಈ ಯೋಗ ನಿಮ್ಮ ಜಾತಕದ ಭಾಗ್ಯಸ್ಥಾನದಲ್ಲಿ ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ ಮತ್ತು ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಪ್ರಸ್ತಾಪಗಳು ಬರಲಿವೆ. ದೇಶ-ವಿದೇಶಗಳಿಗೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. 

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)