Malavya Rajyoga 2024 : 2024 ವರ್ಷ ಪ್ರಾರಂಭವಾಗಲಿದೆ. ಹೊಸ ವರ್ಷದಂದು, ಅನೇಕ ದೊಡ್ಡ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಇದರ ಪರಿಣಾಮ 12 ರಾಶಿಯವರ ಮೇಲೆಯೂ ಬೀರಲಿದೆ. ಶುಕ್ರನನ್ನು ಸಂಪತ್ತನ್ನು ಕರುಣಿಸುವಾತ ಎಂದು ಹೇಳಲಾಗುತ್ತದೆ.  2024ರಲ್ಲಿ ಸಂಪತ್ತನ್ನು ಕೊಡುವ ಶುಕ್ರನು ಮಾಲವ್ಯ ರಾಜ್ಯಯೋಗವನ್ನು ಸೃಷ್ಟಿಸಲಿದ್ದಾನೆ. ಶುಕ್ರನು ತನ್ನ ಉಚ್ಛ ರಾಶಿಯಾದ ಮೀನ ರಾಶಿಯನ್ನು ಪ್ರವೇಶಿಸಿದಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಅವಧಿಯಲ್ಲಿ, ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಈ ರಾಶಿಯವರು ಅಪಾರ ಪ್ರಮಾಣದ ಸಂಪತ್ತನ್ನು ಗಳಿಸುತ್ತಾರೆ. 


COMMERCIAL BREAK
SCROLL TO CONTINUE READING

ವೃಷಭ ರಾಶಿ :
ಮೀನರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಅವಧಿಯಲ್ಲಿ, ಮಾಲವ್ಯ ರಾಜಯೋಗವು ಈ ರಾಶಿಯ  ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿರಲಿದೆ. ಶುಕ್ರನು ವೃಷಭ  ರಾಶಿಯ ಅಧಿಪತಿಯಾಗಿದ್ದು, ಈ ರಾಶಿಯ ಆದಾಯದ ಮನೆಗೆ ಭೇಟಿ ನೀಡಲಿದ್ದಾನೆ. ಹೀಗಿರುವಾಗ ನಿಮ್ಮ ಆದಾಯದಲ್ಲಿ  ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ಆದಾಯದ ಮೂಲ ಹುಟ್ಟಿಕೊಳ್ಳಬಹುದು. ಯಾವುದೇ ಆಸ್ತಿ ಅಥವಾ ವಾಹನ ಖರೀದಿ ಯೋಗ ಒಲಿದು ಬರುವುದು. ಅದೃಷ್ಟ ನಿಮ್ಮ ಬೆನ್ನಿಗೇ  ಇರುತ್ತದೆ.  ಇದರಿಂದ ಏನೇ ಕೆಲಸ ಮಾಡಿದರೂ ಪ್ರಗತಿಯ ಬಾಗಿಲು ತೆರೆಯುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. 


ಇದನ್ನೂ ಓದಿ : ಹೊಸ ವರ್ಷದ ಆರಂಭದಿಂದಲೇ ಈ ರಾಶಿಯವರಿಗೆ ಗುರು ದೆಸೆ ! ಅಪಾರ ಕೀರ್ತಿ ಸಂಪತ್ತು ಕರುಣಿಸಲಿದ್ದಾನೆ ಬೃಹಸ್ಪತಿ !


ಧನು ರಾಶಿ :
ಮೀನರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗವು ರೂಪುಗೊಳ್ಳುತ್ತಿದೆ. ಇದು ಧನು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ. ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳಲಿದೆ. ಈ ಅವಧಿಯಲ್ಲಿ, ನೀವು ವಾಹನ ಮತ್ತು ಆಸ್ತಿ ಖರೀದಿಸುವ ಸಾಧ್ಯತೆ ದಟ್ಟವಾಗಿದೆ. ನಿಮ್ಮ ರಾಶಿಯ ಆರನೇ ಮತ್ತು 11 ನೇ ಮನೆಯ ಅಧಿಪತಿ ಶುಕ್ರ. ಹೀಗಾಗಿ ನಿಮ್ಮ ಆದಾಯದಲ್ಲಿ ಭಾರೀ ಹೆಚ್ಚಳ ಕಂಡುಬರುತ್ತದೆ. ನಿಮ್ಮ ವೃತ್ತಿಜೀವನದಲ್ಲಿಯೂ ಒಂದರ ನಂತರ ಒಂದರಂತೆ ಯಶಸ್ಸು ಪಡೆಯುತ್ತೀರಿ.


ಕರ್ಕ ರಾಶಿ : 
ಕರ್ಕ ರಾಶಿಯವರಿಗೆ ಮಾಲವ್ಯ ರಾಜಯೋಗವು ಮಂಗಳಕರವಾಗಿರುತ್ತದೆ.   ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಶುಕ್ರನು ಪ್ರಯಾಣಿಸಲಿದ್ದಾನೆ.   ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ಈ ಸಮಯದಲ್ಲಿ, ಅದೃಷ್ಟವು ನಿಮ್ಮ ಕಡೆ ಇರುವುದರಿಂದ ಪ್ರಗತಿಗೆ ಅವಕಾಶಗಳಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ  ಸಣ್ಣ ಮತ್ತು ದೊಡ್ಡ ಪ್ರವಾಸಗಳನ್ನು ಕೈಗೊಳ್ಳಬಹುದು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು. 


ಇದನ್ನೂ ಓದಿ : ಗುರು ಪುಷ್ಯ ಯೋಗದಿಂದ ಈ ರಾಶಿಯವರಿಗೆ ವರ್ಷಾಂತ್ಯದಲ್ಲಿ ಭಾರಿ ಧನಲಾಭ, ಅಪಾರ ಕೀರ್ತಿ ಸಂಪತ್ತು ನಿಮ್ಮದಾಗುವುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.