Family Yearly Horoscope 2023 for Aries : ಹೊಸ ವರ್ಷ 2023, ಮೇಷ ರಾಶಿಯವರ ಪಾಲಿಗೆ ಅನೇಕ ಉಡುಗೊರೆಗಳನ್ನು ಹೊತ್ತು ತರಲಿದೆ. ಆದರೆ, ಕೌಟುಂಬಿಕ ಜೀವನಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಏರುಪೇರು ಎದುರಿಸಬೇಕಾಗುತ್ತದೆ. ಹಾಗಿದ್ದರೆ 2023ರಲ್ಲಿ ಮೇಷ ರಾಶಿಯವರ ಉದ್ಯೋಗ, ವೃತ್ತಿ ಜೀವನ, ಕೌಟುಂಬಿಕ ಜೀವನ  ಹೇಗಿರಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

ಮೇಷ ರಾಶಿಯ ಜನರು ತಮ್ಮ ಮಾತಿನ ಮೇಲೆ ನಿಗಾ ಇರಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಎಷ್ಟು ಸಾಧ್ಯವೂ ಅಷ್ಟು ಕಡಿಮೆ ಮಾತನಾಡುವುದು ಒಳ್ಳೆಯದು. ಇತರರ ವ್ಯವಹಾರಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸಿದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇರೆಯವರು ನಿಮ್ಮ ಮಾತನ್ನು ಕೇಳಬೇಕು ಎಂದು ಬಯಸುವ ನೀವು, ಬೇರೆಯವರ ಮಾತಿಗೂ ಬೆಲೆ ಕೊಡಬೇಕಾಗುತ್ತದೆ. 


ಇದನ್ನೂ ಓದಿ : Swapna Shastra: ಕನಸಿನಲ್ಲಿ ಈ ಬಣ್ಣದ ಬೆಕ್ಕು ಕಾಣಿಸಿಕೊಂಡರೆ ಒಂದೇ ವಾರದಲ್ಲಿ ಹಣದ ಮಳೆ ಸುರಿಯುತ್ತದೆ


ವೈವಾಹಿಕ ಜೀವನ  :
ವರ್ಷದ ಆರಂಭದ ತಿಂಗಳುಗಳಲ್ಲಿ ಕೌಟುಂಬಿಕ ಜೀವನದ ರಥ ಹಳಿ ತಪ್ಪುವ ಸಾಧ್ಯತೆಗಳಿವೆ. ಸಂಗಾತಿಯ ವರ್ತನೆ ಬೇಸರ ತರಿಸಬಹುದು. ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಏಪ್ರಿಲ್ ತಿಂಗಳ ವೇಳೆಗೆ ಈ ವಿಷಯದಲ್ಲಿ ಸುಧಾರಣೆ ಕಂಡುಬರುತ್ತದೆ. ವರ್ಷದ ಮಧ್ಯದಲ್ಲಿ, ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ಸಂಗಾತಿಯೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಬಹುದು.  ಮೇ ಮತ್ತು ಜುಲೈ ನಡುವೆ, ವಾಹನ ಖರೀದಿಗೆ ಅವಕಾಶಗಳಿವೆ. ಆಸ್ತಿ ಮೇಲೆ ಕೂಡಾ ಹೂಡಿಕೆ ಮಾಡುವ ಸಾಧ್ಯತೆ ಇದೆ. ಆದರೆ ನೆನಪಿರಲಿ ಕುಟುಂಬದ ಆಸ್ತಿಗೆ ಸಂಬಂಧಿಸಿದ ವಿವಾದಗಳಿಂದ ದೂರವಿರಿ. 


ಅಕ್ಟೋಬರ್‌ನಲ್ಲಿ ತಂದೆಯ ಕಡೆಯಿಂದ ಸಂತಾಪ ಸುದ್ದಿ ಬರುವ ಸಾಧ್ಯತೆ ಇದೆ.  ಯಾವುದೇ ರೀತಿಯ ಕೆಲಸಗಳಿಗೆ ಒಡಹುಟ್ಟಿದವರ ಸಹಕಾರ ಸಿಗಲಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಕುಟುಂಬದಲ್ಲಿ ಯಾರಾದರೂ ಮದುವೆಯಾಗಬಹುದಾದ ಹುಡುಗ ಮತ್ತು ಹುಡುಗಿಯರಿದ್ದರೆ, ಮಂಗಳ ವಾದ್ಯ ಮೊಳಗಲಿದೆ. ಏಪ್ರಿಲ್ ತಿಂಗಳಿನಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಸುದ್ದಿ ಇರುತ್ತದೆ. ಮೇ ನಿಂದ ಆಗಸ್ಟ್ ವರೆಗಿನ ಸಮಯವು ಮಗುವಿಗೆ ಸಂಕಟದಿಂದ ತುಂಬಿರುತ್ತದೆ. ಅಕ್ಟೋಬರ್ ಮತ್ತು ಡಿಸೆಂಬರ್‌ನಲ್ಲಿ ಮಕ್ಕಳ ಆರೋಗ್ಯದ ಜೊತೆಗೆ ವೃತ್ತಿಯತ್ತಲೂ ಗಮನ ಹರಿಸಬೇಕಾಗುತ್ತದೆ. ಮಗುವನ್ನು ನಿರೀಕ್ಷಿಸುತ್ತಿರುವ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ತಾಯಿಯ ಆರೋಗ್ಯದ  ಬಗ್ಗೆ ಗಮನ ಹರಿಸಿ. ಕುಟುಂಬದ ಬಗ್ಗೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ, ತಂದೆ ಮತ್ತು ಸಂಗಾತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಿ.


ಇದನ್ನೂ ಓದಿ : Dhanu Sankranti: ಇಂದು ಧನು ರಾಶಿಗೆ ಸೂರ್ಯನ ಪ್ರವೇಶ, 3 ರಾಶಿಯವರು ಎಚ್ಚರಿಕೆಯಿಂದ ಕಳೆಯಬೇಕಾದ ದಿನ


( ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.