ಬೆಂಗಳೂರು : ಎರಡೂವರೆ ವರ್ಷಗಳ ನಂತರ ತನ್ನ ಸ್ಥಾನವನ್ನು ಬದಲಾಯಿಸಿರುವ ಶನಿ ಜನವರಿ 31 ರಂದು, ಕುಂಭ ರಾಶಿಯಲ್ಲಿಯೇ  ಅಸ್ತವಾಗಲಿದ್ದಾನೆ. ಇದಾದ ನಂತರ ಮಾರ್ಚ್ 09 ರಂದು,  ಮತ್ತೆ ಕುಂಭ ರಾಶಿಯಲ್ಲಿಯೇ ಶನಿ ಉದಯವಾಗಲಿದೆ. ಶನಿ ಉದಯದೊಂದಿಗೆ ಶಶ ಮಹಾಪುರುಷ ರಾಜಯೋಗವು ನಿರ್ಮಾಣವಾಗಲಿದೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಬೀರುತ್ತದೆ. ಅದರಲ್ಲೂ ಕೆಲವು ರಾಶಿಯವರು ವಿಶೇಷ ಲಾಭವನ್ನು ಪಡೆಯುತ್ತಾರೆ. 


COMMERCIAL BREAK
SCROLL TO CONTINUE READING

ಸಿಂಹ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ಶನಿಗ್ರಹದ  ಉದಯದೊಂದಿಗೆ ಶಶ ಮಹಾಪುರುಷ ರಾಜಯೋಗ ನಿರ್ಮಾಣವಾಗಲಿದೆ. ಈ ರಾಜಯೋಗ ಸಿಂಹ ರಾಶಿಯ ಏಳನೇ ಮನೆಯಲ್ಲಿ ರೂಪುಗೊಳ್ಳಲಿದೆ.   ಈ ಸಂದರ್ಭದಲ್ಲಿ, ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಈ ಸಮಯದಲ್ಲಿ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಮಾಡುವ ಕೆಲಸದಲ್ಲಿ ಜೀವನ ಸಂಗಾತಿಯ ಬೆಂಬಲವೂ ಇರಲಿದೆ. 


ಇದನ್ನೂ ಓದಿ :  Guru Ast 2023: ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಅಸ್ತ, ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ?


ಧನು ರಾಶಿ :
ಈ ರಾಶಿಯವರಿಗೆ ಶನಿಯ ಉದಯದಿಂದ ರೂಪುಗೊಂಡ ರಾಜಯೋಗವು ಅನುಕೂಲಕರವಾಗಿರುತ್ತದೆ. ಈ ರಾಶಿಯ ಮೂರನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ಕೆಲವು ದೊಡ್ಡ ಜವಾಬ್ದಾರಿಗಳು ಹೆಗಲೇರಬಹುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಹೊಸ ಉದ್ಯೋಗಾವಕಾಶ ಸಿಗುವುದು. 


ಮಿಥುನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಶ ಮಹಾಪುರುಷ ರಾಜಯೋಗವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ರಾಶಿಯ ಒಂಭತ್ತನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಮನೆ ಅದೃಷ್ಟದ ಸ್ಥಳವಾಗಿದೆ. ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.  


ಇದನ್ನೂ ಓದಿ : ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ


ಮೇಷ ರಾಶಿ :
ಮೇಷ ರಾಶಿಯ ಜನರು ಶಶ ಮಹಾಪುರುಷ ರಾಜಯೋಗದಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು. ಈ ರಾಶಿಯ 11ನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಮನೆಯನ್ನು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯ ಜನರ ಆದಾಯದಲ್ಲಿ ಅಪಾರ ಪ್ರಮಾಣದ ಹೆಚ್ಚಳ ಕಂಡುಬರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.