ವರ್ಷದ ಪ್ರಥಮ ಸೂರ್ಯ ಗ್ರಹಣಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ, ನಿಮ್ಮ ಮೇಲೆ ಏನು ಪರಿಣಾಮ
Solar Eclipse Effects: ವರ್ಷದ ಮೊದಲ ಸೂರ್ಯ ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಮುಖ ಖಗೋಳ ವಿದ್ಯಮಾನವಾಗಿರುವ ಗ್ರಹಣಗಳು ಜ್ಯೋತಿಷ್ಯದ ದೃಷ್ಟಿಯಿಂದಲೂ ತುಂಬಾ ಮಹತ್ವವನ್ನು ಹೊಂದಿದೆ. ಈ ಬಾರಿಯ ಮೊದಲ ಸೂರ್ಯಗ್ರಹಣವು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
Surya Grahan Effects On Zodiac Signs: 2023ರ ಮೊದಲ ಸೂರ್ಯ ಗ್ರಹಣಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ನಾಳೆ 20 ಏಪ್ರಿಲ್ 2023ರಂದು ಬೆಳಿಗ್ಗೆ 07:05ರಿಂದ ಮಧ್ಯಾಹ್ನ 12:29ರವರೆಗೆ ಮೇಷ ರಾಶಿಯಲ್ಲಿ ಸೂರ್ಯ ಗ್ರಹಣ ಸಂಭವಿಸಲಿದೆ.
ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, ಸೂತಕದ ಅವಧಿಯೂ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಸೂರ್ಯ ಗ್ರಹಣದ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ನಿಮ್ಮ ರಾಶಿಯ ಮೇಲೆ ಸೂರ್ಯ ಗ್ರಹಣದ ಪರಿಣಾಮ ಏನು ಎಂದು ತಿಳಿಯೋಣ...
ದ್ವಾದಶ ರಾಶಿಗಳ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪರಿಣಾಮ:
ಮೇಷ ರಾಶಿ:
ವರ್ಷದ ಮೊದಲ ಸೂರ್ಯ ಗ್ರಹಣವು ಮೇಷ ರಾಶಿಯವರಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಮಾತ್ರವಲ್ಲ, ಕೌಟುಂಬಿಕ ಜೀವನದಲ್ಲಿಯೂ ಬಿಕ್ಕಟ್ಟನ್ನು ತರಬಹುದು ಎಂದು ಹೇಳಲಾಗುತ್ತಿದೆ.
ವೃಷಭ ರಾಶಿ:
ಈ ಸಮಯದಲ್ಲಿ ವೃಷಭ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಲಾಭ ಸಾಧ್ಯತೆ ಇದೆ. ಇದರಿಂದ ಆರ್ಥಿಕವಾಗಿ ನೀವು ಬಲಗೊಳ್ಳುವಿರಿ. ಮನೆಯಲ್ಲಿ ಕೆಲವು ಶುಭ ಸಮಾರಂಭಗಳು ಸಹ ನಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿ:
ವ್ಯಾಪಾರ-ವ್ಯವಹಾರದಲ್ಲಿ ಲಾಭದ ಹೊರತಾಗಿಯೂ ನಿಮ್ಮ ಆತ್ಮವಿಶ್ವಾಸದ ಕೊರತೆಯಿಂದಾಗಿ ನೀವು ಒತ್ತಡವನ್ನು ಅನುಭವಿಸುವಿರಿ. ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಹೊರಗಿನ ಆಹಾರಗಳಿಂದ ದೂರವಿರಿ.
ಇದನ್ನೂ ಓದಿ- Guru Gochar Effect: ಮೇಷ ರಾಶಿಯಲ್ಲಿ ಗುರು ಚಂಡಾಲ ಯೋಗದಿಂದ ನಾಲ್ಕು ರಾಶಿಯವರಿಗೆ ಸಂಕಷ್ಟ
ಕರ್ಕಾಟಕ ರಾಶಿ:
ಯಾವುದೇ ವಿಷಯದಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಪಿತ್ರಾರ್ಜಿತ ಆಸ್ತಿ ಪಡೆಯುವಲ್ಲಿಯೂ ಸಮಸ್ಯೆಗಳು ಎದುರಾಗಬಹುದು. ತಾಳ್ಮೆಯಿಂದಿರಿ ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗುವುದು.
ಸಿಂಹ ರಾಶಿ:
ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆದರೆ, ನಿಮ್ಮ ಕುಟುಂಬಸ್ಥರಿಗೆ ಆರೋಗ್ಯದ ಸಮಸ್ಯೆಗಳು ಹೆಚ್ಚಾಗುವುದರಿಂದ ಆಸ್ಪತ್ರೆಗೆ ಸುತ್ತಾಟವಿರುತ್ತದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಈ ಬಾರಿಯ ಸೂರ್ಯ ಗ್ರಹಣ ಅಷ್ಟು ಮಂಗಳಕರವಾಗಿಲ್ಲ. ಈ ಸಮಯದಲ್ಲಿ ನೀವು ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ತುಲಾ ರಾಶಿ:
ತುಲಾ ರಾಶಿಯ ವ್ಯಾಪಾರಿಗಳಿಗೆ ಈ ಸಮಯದಲ್ಲಿ ಬಂಪರ್ ಲಾಭವಾಗಲಿದೆ. ಆದಾಗ್ಯೂ, ನೀವು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ವೃಶ್ಚಿಕ ರಾಶಿ:
ವರ್ಷದ ಮೊದಲ ಸೂರ್ಯಗ್ರಹಣವು ಈ ರಾಶಿಯವರಿಗೆ ಮಿಶ್ರ ಫಲಿತಾಂಶವನ್ನು ನೀಡಲಿದೆ. ಈ ಸಮಯದಲ್ಲಿ ಎಚ್ಚರಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಿ, ಇಲ್ಲವೇ ನಿಮ್ಮ ಜೊತೆಗಿರುವವರೇ ನಿಮ್ಮನ್ನು ಮೋಸಗೊಳಿಸಬಹುದು. ಆದಾಗ್ಯೂ, ಹಣಕಾಸಿನ ಹರಿವು ಹೆಚ್ಚಾಗಲಿದೆ.
ಧನು ರಾಶಿ:
ನಾಳೆ ಸಂಭವಿಸಲಿರುವ ವರ್ಷದ ಮೊದಲ ಸೂರ್ಯ ಗ್ರಹಣವು ಧನು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದ್ದು, ಮನಸ್ಸು ಉಲ್ಲಾಸದಿಂದ ಇರಲಿದೆ.
ಇದನ್ನೂ ಓದಿ- Budh Gochar 2023: ಈ 3 ರಾಶಿಯವರ ಭಾಗ್ಯ ಬೆಳಗುವನು ಬುಧ.. ಪ್ರತಿ ಕೆಲಸದಲ್ಲೂ ಜಯ, ಅಪಾರ ಧನಲಾಭ!
ಮಕರ ರಾಶಿ:
ಮಕರ ರಾಶಿಯವರಿಗೆ ಸೂರ್ಯ ಗ್ರಹಣವು ಒಳ್ಳೆಯ ದಿನಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಕೆಲವು ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಅವರು ನಿಮಗೆ ಭವಿಷ್ಯದಲ್ಲಿ ಉಪಕಾರವನ್ನು ಮಾಡಲಿದ್ದಾರೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಆದರೆ, ಓಡಾಟ ಹೆಚ್ಚಾಗುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ.
ಮೀನ ರಾಶಿ:
ಈ ಸಮಯದಲ್ಲಿ ನಿಮ್ಮ ಸೋಮಾರಿತನವೇ ನಿಮಗೆ ಮಾರಕವಾಗಬಹುದು. ನಿಮ್ಮ ಈ ಸ್ವಭಾವದಿಂದ ಯಾವುದೇ ಕೆಲಸಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತದೆ. ಇದು ಆರ್ಥಿಕ ಬಿಕ್ಕಟ್ಟಿಗೂ ಕಾರಣವಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.