Kajal Remedies: ಕಣ್ಣಿನ ಕಾಡಿಗೆಗೆ ಸಂಬಂಧಿಸಿದ ಈ ಉಪಾಯಗಳು ನಿಮ್ಮ ಭಾಗ್ಯವನ್ನೇ ಬದಲಾಯಿಸುತ್ತವೆ!
Benefits Of Kajal: ಕಾಡಿಗೆ ಕೇವಲ ಕಣ್ಣಿನ ಅಂದವನ್ನು ಹೆಚ್ಚಿಸುವುದಲ್ಲದೆ, ಅನೇಕ ಸಮಸ್ಯೆಗಳಿಂದ ಮುಕ್ತಿ ಕೂಡ ನೀಡುತ್ತದೆ. ಕಾಡಿಗೆಗೆ ಸಂಬಂಧಿಸಿದ ಈ ಉಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ.(Spiritual News In Kannada)
Kajal Spiriual Importance: ಸಾಮಾನ್ಯವಾಗಿ ಕಾಡಿಗೆಯನ್ನು ಮಹಿಳೆಯರು ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾರೆ. ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಕೂಡ ಕಾಡಿಗೆಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಕಾಡಿಗೆಗೆ ವಿಶೇಷ ಮಹತ್ವವಿದೆ. ಅಂದರೆ ಕಾಡಿಗೆಯ ಬಳಕೆ ಕೇವಲ ಮೇಕಪ್‌ಗೆ ಸೀಮಿತವಾಗಿಲ್ಲ. ಹಣದ ಕೊರತೆ, ಗ್ರಹ ದೋಷಗಳು, ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ ಎಂದರ್ಥ. ಹಾಗಾದರೆ ಬನ್ನಿ ಕಾಡಿಗೆಗೆ ಸಂಬಂಧಿಸಿದ ತಂತ್ರಗಳು(Kajal Remedies) ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
1. ಮನೆಯಲ್ಲಿ ಸದಾ ಜಗಳ, ವ್ಯಾಜ್ಯದ ವಾತಾವರಣವಿದ್ದು, ಇದರಿಂದ ಕುಟುಂಬದ ನೆಮ್ಮದಿ ಹಾಳಾಗಿದ್ದರೆ, ಶನಿವಾರ ಬೆಳಗ್ಗೆ ಹಲಸಿನ ಕಾಯಿ ತೆಗೆದುಕೊಂಡು ಕಪ್ಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ನಂತರ ಅದರ ಮೇಲೆ 21 ಕಾಡಿಗೆ ಚುಕ್ಕೆಗಳನ್ನಿಡಿ, ನಂತರ ಅದನ್ನು ಮನೆಯ ಹೊರಗೆ ಇಡಬೇಕು. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಪ್ರೀತಿ ಹೆಚ್ಚಾಗುತ್ತದೆ.(spiritual remedies for hooded eyes)
2. ಶನಿಯ ಎರಡೂವರೆ ವರ್ಷಗಳ ಕಾಟ ಮತ್ತು ಸಾಡೇಸಾತಿಯಿಂದ ವ್ಯಕ್ತಿಗೆ ತೊಂದರೆಯಾಗಿದ್ದರೆ, ಶನಿವಾರದಂದು, ಕಪ್ಪು ಕಾಡಿಗೆಯನ್ನು ಒಂದು ಬಾಟಲಿಯಲ್ಲಿ ತೆಗೆದುಕೊಂಡು, ಶನಿ ದೋಷದಿಂದ ಬಳಲುತ್ತಿರುವ ವ್ಯಕ್ತಿಯ ತಲೆಯಿಂದ ಪಾದದವರೆಗೆ 9 ಬಾರಿ ನಿವಾಳಿಸಿ. ಇದನ್ನು ಮಾಡಿದ ನಂತರ, ಬಾಟಲಿಯನ್ನು ನಿರ್ಜನ ನೆಲದಲ್ಲಿ ಹೂತುಹಾಕಿ. ಇದಲ್ಲದೆ, ಮಣ್ಣನ್ನು ಅಗೆದ ಉಪಕರಣವನ್ನು ಕೂಡ ಅಲ್ಲಿಯೇ ಬಿಟ್ಟು ಬನ್ನಿ.(home remedy to remove evil eye)
3. ನಿಮ್ಮ ಶತ್ರುಗಳಿಂದ ನಿಮಗೆ ತೊಂದರೆಯಾಗಿದ್ದರೆ, ಐದು ಸಣ್ಣ ಬೆಳ್ಳಿ ಹಾವುಗಳನ್ನು ತಯಾರಿಸಿ. ಆ ಹಾವುಗಳ ಮೇಲೆ ಸತತ 21 ದಿನಗಳವರೆಗೆ ಕಾಡಿಗೆಯನ್ನು ಹಚ್ಚಿ. ಬಳಿಕ ಅವುಗಳನ್ನು ನೀವು ಮಲಗುವ ಹಾಸಿಗೆಯ ಕೆಳಗೆ ಇರಿಸಿ.ಈ ಪರಿಹಾರವು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗುತ್ತದೆ ಮತ್ತು ಶತ್ರುಕಾಟದಿಂದ ಮುಕ್ತಿ ಸಿಗುತ್ತದೆ.
4. ವ್ಯಾಪಾರದಲ್ಲಿ ಮಂದಗತಿಯಿದ್ದರೆ ಅಥವಾ ಉದ್ಯೋಗದಲ್ಲಿ ಬಡ್ತಿ ಸಿಗದಿದ್ದರೆ ಐದು ಗ್ರಾಂ ಕಾಡಿಗೆ ಗಟ್ಟಿಗಳನ್ನು ತೆಗೆದುಕೊಂಡು ಶನಿವಾರದಂದು ಮಣ್ಣಿನಲ್ಲಿ ಹೂತುಹಾಕಿ, ಬಳಿಕ ಹಿಂದಿರುಗಿ ನೋಡದೆ ಮನೆಗೆ ವಾಪಸ್ಸಾಗಿ.
5. ನಿಮ್ಮ ಜಾತಕದಲ್ಲಿ ಮಂಗಳ ದೋಷವಿದ್ದರೆ, ನೀವು 43 ದಿನಗಳವರೆಗೆ ನಿಮ್ಮ ಕಣ್ಣುಗಳಿಗೆ ಬಿಳಿ ಕಾದಿಗೆಯನ್ನು ಅನ್ವಯಿಸಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಮಂಗಳ ಶುಭ ಪರಿಣಾಮಗಳನ್ನು ನೀಡಲು ಪ್ರಾರಂಭಿಸುತ್ತದೆ. ನೀವು ಮಂಗಳವಾರ ಮತ್ತು ಶನಿವಾರದಂದು ಕಾಡಿಗೆಯನ್ನು ಅನ್ವಯಿಸಬೇಕು ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ-Tips For Prosperity: ಜೀವನದಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ, ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ!
6. ಅರಿಸಿನ ಹೂವು ಮತ್ತು ಹತ್ತಿಯನ್ನು ಬೆರೆಸಿ ಹೂಬತ್ತಿಯನ್ನು ತಯಾರಿಸಿ ಮತ್ತು ಭಾನುವಾರದಂದು ಬೆಣ್ಣೆಯಿಂದ ಆ ದೀಪವನ್ನು ಸುಡಬೇಕು. ಅದರಿಂದ ಕಾಡಿಗೆಯನ್ನು ತಯಾರಿಸಿ. ಈ ಕಾದಿಗೆಯನ್ನು ರಾತ್ರಿ ಕಣ್ಣುಗಳಿಗೆ ಅನ್ವಯಿಸಿ, ಹೀಗೆ ಮಾಡುವುದರಿಂದ ಯಾರನ್ನಾದರೂ ಸುಲಭವಾಗಿ ವಶಪಡಿಸಿಕೊಳ್ಳಬಹುದು.
ಇದನ್ನೂ ಓದಿ-Marriage Tips: ವಿವಾಹಕ್ಕೆ ಸಿದ್ಧರಾಗಿದ್ದೀರಾ? ಹಾಗಾದರೆ ಭಾವೀ ಸಂಗಾತಿಗೆ ಚಾಚು ತಪ್ಪದೆ ಈ ವಿಷಯಗಳನ್ನು ಕೇಳಿ!
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ