ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳಿಗೂ ಅಧಿಪತ್ಯ ಗ್ರಹ ಎಂದಿರುತ್ತದೆ.  ಹಾಗೆಯೇ ಕುಂಭ ರಾಶಿಯ ಅಧಿಪತಿ ಗ್ರಹ ಶನಿ. 30 ವರ್ಷಗಳ ಬಳಿಕ ಶನಿ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ಕೇಂದ್ರ ತ್ರಿಕೋನ ರಾಜ ಯೋಗ ನಿರ್ಮಾಣವಾಗಿದೆ. 
ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಶನಿಯ ಸಂಚಾರದಿಂದ ನಿರ್ಮಾಣವಾಗಿರುವ ಕೇಂದ್ರ ತ್ರಿಕೋನ ರಾಜಯೋಗವು ಮೂರು ರಾಶಿಯವರಿಗೆ ಕೇವಲ ಶುಭ ಫಲವನ್ನೇ ಹೊತ್ತು ತರುತ್ತಿದೆ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಶನಿ ಮಹಾತ್ಮ ಕೈ ಹಿಡಿದು ಕಾಯುತ್ತಾನೆ. ಕೇಂದ್ರ ತ್ರಿಕೋನ ರಾಜಯೋಗವು ಯಾವ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತದೆ ನೋಡೋಣ. 


ಇದನ್ನೂ ಓದಿ : ಈ ರಾಶಿಯವರಿಗೆ ಧನಿಕರಾಗುವ ಯೋಗ ! ಇನ್ನೆರಡು ವರ್ಷ ಲಕ್ಷ್ಮೀ ಕಟಾಕ್ಷ


ಕೇಂದ್ರ ತ್ರಿಕೋನ ರಾಜಯೋಗ ಈ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ
ಮೇಷ ರಾಶಿ :

ಶನಿಯ  ಸಂಚಾರದಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗವು ಮೇಷ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಅವರು ವಿತ್ತೀಯ ಪ್ರಯೋಜನಗಳನ್ನು ಪಡೆಯಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ವೇತನ ಹೆಚ್ಚಳದೊಂದಿಗೆ ಬಡ್ತಿ ದೊರೆಯಲಿದೆ. ದೀರ್ಘಕಾಲದ ಸಮಸ್ಯೆ ಕೊನೆಗೊಳ್ಳುತ್ತದೆ. ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. 


ವೃಷಭ ರಾಶಿ :
ಶನಿಯ ಸಂಚಾರದಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗವು ವೃಷಭ ರಾಶಿಯವರಿಗೆ ಬಂಪರ್ ಫಲಿತಾಂಶವನ್ನು ನೀಡುತ್ತದೆ. ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ.  ಹೊಸ ಉದ್ಯೋಗಕ್ಕಾಗಿ ನಡೆಸುತ್ತಿರುವ ಹುಡುಕಾಟವೂ ಕೊನೆಗೊಳ್ಳುತ್ತದೆ. ದೊಡ್ಡ ಸ್ಥಾನಕ್ಕೆ ಏರುವಿರಿ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ.


ಇದನ್ನೂ ಓದಿ :  Budha Gochara: ಈ 5 ರಾಶಿಯವರಿಗೆ ಧನ-ಸಂಪತ್ತು, ರಾಜಯೋಗ ಕರುಣಿಸಲಿದ್ದಾಳೆ ತಾಯಿ ಲಕ್ಷ್ಮಿ


ಸಿಂಹ ರಾಶಿ :
ಕೇಂದ್ರ ತ್ರಿಕೋನ ರಾಜಯೋಗವು ಸಿಂಹ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮಹಾಲಕ್ಷ್ಮಿಯ ಆಶೀರ್ವಾದದಿಂದ ಜೀವನದಲ್ಲಿ ಹಣದ ಹೊಳೆ ಹರಿಯುತ್ತದೆ. ನಾಯಕತ್ವ ಕೌಶಲ್ಯವು ಅತ್ಯುತ್ತಮವಾಗಿರುತ್ತದೆ.


ಕುಂಭ ರಾಶಿ :  
ಈ ರಾಶಿಯ ಅಧಿಪತಿ ಶನಿ.  ಹಾಗಾಗಿ ಕೇಂದ್ರ ತ್ರಿಕೋನ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ಶನಿ ಸಾಡೇಸಾತಿ ನಡೆಯುತ್ತಿದ್ದರೂ ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಿಮ್ಮ ಎಲ್ಲಾ ಕಷ್ಟಗಳಿಗೆ ಶನಿ ಮಹಾತ್ಮ ಪರಿಹಾರವಾಗಿರಲಿದ್ದಾನೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ