Shani Rashi Parivartane: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹ ಶನಿ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ದೇವನು ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಸಂಚರಿಸಲು ಬರೋಬ್ಬರಿ ಎರಡೂವರೆ ವರ್ಷಗಳು ಬೇಕಾಗುತ್ತದೆ. ಪ್ರಸ್ತುತ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮೂರು ದಶಕಗಳ ಬಳಿಕ ಈ ವರ್ಷದ ಆರಂಭದಲ್ಲಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು 2025 ರವರೆಗೆ ಇದೇ ರಾಶಿಯಲ್ಲಿ ಇರುತ್ತಾನೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಶನಿ ಪ್ರಭಾವ, ಶನಿ ಸಂಕ್ರಮಣ ಎಂದರೆ ಸಾಕು ಎಲ್ಲರೂ ಹೆದರುತ್ತಾರೆ. ಏಕೆಂದರೆ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿಯು ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ತಕ್ಕ ಫಲವನ್ನು ನೀಡುತ್ತಾನೆ. ಹಾಗಾಗಿ, ಜಾತಕದಲ್ಲಿ ಶನಿ ಅಶುಭ ಸ್ಥಾನವು ಅವರ ಕೆಟ್ಟ ದಿನಗಳ ಪ್ರತೀಕ ಎಂತಲೇ ಹೇಳಲಾಗುತ್ತದೆ. ಅದೇ ರೀತಿ, ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ, ಅಂತಹವರ ಜೀವನದಲ್ಲಿ ಅದೃಷ್ಟದ ಬೆಂಬಲವೂ ಇರಲಿದೆ. ಜೊತೆಗೆ, ಅವರು ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತದೆ. ಸದ್ಯ 2025ರವರೆಗೆ ಕುಂಭ ರಾಶಿಯಲ್ಲಿಯೇ ಇರುವ ಶನಿ ದೇವನು ಮೂರು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು, ಶ್ರೀಮಂತರಾಗಬೇಕು ಎಂಬ ಅವರ ಕನಸು ನನಸಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- Weekly Horoscope: ಈ ವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ!


ಕುಂಭ ರಾಶಿಯಲ್ಲಿ ಶನಿ ದೇವ: ಮೂರು ರಾಶಿಯವರ ಬಾಳೇ ಬಂಗಾರ: 
ವೃಷಭ ರಾಶಿ: 

ವೃಷಭ ರಾಶಿಯವರ ಹತ್ತನೇ ಮನೆಯಲ್ಲಿ ಸಂಚರಿಸುತ್ತಿರುವ ಶನಿದೇವನು ಈ ರಾಶಿಯವರ ಬದುಕಿನಲ್ಲಿ ಹೊಸ ಬೆಳಕನ್ನು ನೀಡಲಿದ್ದಾರೆ. ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯು ವೃಷಭ ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಉಂಟು ಮಾಡಲಿದ್ದಾನೆ. ಇದರಿಂದಾಗಿ ವೃತ್ತಿ ಬದುಕಿನಲ್ಲಿ ಯಶಸ್ಸು, ಪ್ರಗತಿಯ ಜೊತೆಗೆ ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳಲಿದೆ. 2025ರವರೆಗೆ ನಿಮಗೆ ಯಾವುದೇ ಕಷ್ಟಗಳು ಕಾಣಿಸಿಕೊಂಡರು ಪ್ರತಿ ಹಂತದಲ್ಲೂ ಶನಿ ನಿಮ್ಮ ಬೆನ್ನಿಗೆ ನಿಲ್ಲುತ್ತಾನೆ. 


ಸಿಂಹ ರಾಶಿ: 
ಸಿಂಹ ರಾಶಿಯವರ ಏಳನೇ ಮನೆಯಲ್ಲಿ ಸಂಚರಿಸುತ್ತಿರುವ ಶನಿ ದೇವನು 2025 ರವರೆಗೆ ಈ ರಾಶಿಯವರಿಗೆ ಒಳ್ಳೆಯ ಫಲಗಳನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಪ್ರೇಮಿಗಳು ವೈವಾಹಿಕ ಜೀವನದಲ್ಲಿ ಬಂಧಿಯಾಗಲಿದ್ದಾರೆ. ವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯವೂ ಇದೇ. ಮಾತ್ರವಲ್ಲ, ಈ ಸಂದರ್ಭದಲ್ಲಿ ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗದ ಶಿಖರವನ್ನು ಏರುವಿರಿ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದ್ದು, ಭವಿಷ್ಯಕ್ಕಾಗಿಯೂ ಒಂದಿಷ್ಟು ಹಣವನ್ನು ಉಳಿಸಬಹುದು. ಒಟ್ಟಾರೆಯಾಗಿ ಇದು ನಿಮಗೆ ಬಂಗಾರದಂತಹ ಸಮಯ ಎಂತಲೇ ಹೇಳಬಹುದು. 


ಇದನ್ನೂ ಓದಿ- ಶನಿ ದೇವನ ಪ್ರಿಯ ರಾಶಿಗಳಿವು: ಇವರಿಗೆ ಜೀವನದಲ್ಲಿ ಸೋಲೆಂಬುದೇ ಇಲ್ಲ


ತುಲಾ ರಾಶಿ: 
ತುಲಾ ರಾಶಿಯ ಐದನೇ ಮನೆಯಲ್ಲಿ ಶನಿ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ವೇಳೆ ತುಲಾ ರಾಶಿಯವರು ಮಕ್ಕಳಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಪಡೆಯುವರು. ಮಾತ್ರವಲ್ಲ, ಹಠಾತ್ ಧನಲಾಭದ ಸಾಧ್ಯತೆಯೂ ಇದ್ದು, ಇದರಿಂದಾಗಿ ನಿಮಗೆ ಸಿರಿವಂತರಾಗುವ ಯೋಗವೂ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಯೋಗವೂ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.