Lucky Zodiac Sign: ತಾವೂ ಸಹ ತಾಯಿ ಮಹಾ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ನಾನಾ ರೀತಿಯ ಪೂಜೆ ಪುನಸ್ಕಾರಗಳನ್ನು ಸಹ ಮಾಡುತ್ತಾರೆ. ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳನ್ನು ತಾಯಿ ಮಹಾ ಲಕ್ಷ್ಮೀದೇವಿಯ ನೆಚ್ಚಿನ ರಾಶಿಗಳು ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಈ ರಾಶಿಯವರ ಬಳಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ. ಇವರ ವ್ಯಾಲೆಟ್, ಖಜಾನೆ ಸದಾ ಧನಲಕ್ಷ್ಮಿಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ರಾಶಿಚಕ್ರಗಳಿವು: 
ವೃಷಭ ರಾಶಿ: 

ವೈದಿಕ ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯವರ ಮೇಲೆ ಮಾತೆ ಧನಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ. ಲಕ್ಷ್ಮಿಯ ಅನುಗ್ರಹದಿಂದ ಇವರ ಜೀವನದಲ್ಲಿ ಎಷ್ಟೇ ಏಳುಬೀಳುಗಳು ಬಂದರೂ ಸಹ ಎಂದಿಗೂ ಇವರಿಗೆ ಹಣಕ್ಕೆ ಕೊರತೆಯಾಗುವುದಿಲ್ಲ. ಈ ರಾಶಿಯವರು ಬುದ್ದಿಜೀವಿಗಳು ಮಾತ್ರವಲ್ಲ, ಶ್ರಮ ಜೀವಿಗಳೂ ಸಹ ಆಗಿರುವುದರಿಂದ ಇವರು ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ ಎನ್ನುತ್ತಾರೆ. 


ಇದನ್ನೂ ಓದಿ- ಈ ವರ್ಷ ಅಕ್ಷಯ ತೃತೀಯದಲ್ಲಿ ರೂಪುಗೊಳ್ಳಲಿದೆ 7 ಮಹಾನ್ ಯೋಗ


ಸಿಂಹ ರಾಶಿ: ಸಿಂಹ ರಾಶಿಯವರನ್ನು ಕೂಡ ತಾಯಿ ಮಹಾಲಕ್ಷ್ಮಿಯ ನೆಚ್ಚಿನ ರಾಶಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರ ಮೇಲೆ ತಾಯಿ ಲಕ್ಷ್ಮಿಯ ಕೃಪೆ ಸದಾ ಇರಲಿದ್ದು ಇವರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದೇ ಪಡೆಯುತ್ತಾರೆ. ಇದರಿಂದಾಗಿ ಜೀವನದಲ್ಲಿ ಬಹಳ ಬೇಗೆ ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Akshaya Tritiya 2023: ಅಕ್ಷಯ ತೃತೀಯದಂದು ಈ ಕೆಲಸ ಮಾಡಿದ್ರೆ ಎಂದಿಗೂ ಖಾಲಿಯಾಗಲ್ಲ ಖಜಾನೆ


ತುಲಾ ರಾಶಿ: 
ಸಂಪತ್ತಿನ ದೇವತೆ ಲಕ್ಷ್ಮಿಯ ಪ್ರಿಯ ರಾಶಿಗಳಲ್ಲಿ ತುಲಾ ರಾಶಿಯೂ ಒಂದು. ಈ ರಾಶಿಯವರ ಮೇಲೆ ತಾಯಿ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದ ಸದಾ ಇರುತ್ತದೆ. ಹಾಗಾಗಿಯೇ, ಈ ರಾಶಿಯವರೂ ಕೂಡ ಜೀವನದಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯಗಳನ್ನು ಕಂಡು ಯಾವುದೋ ಒಂದು ರೂಪದಲ್ಲಿ ಬೆಟ್ಟದಂತೆ ಬಂದ ಕಷ್ಟವೂ ಸಹ ಮಂಜಿನಂತೆ ಕರಗುತ್ತದೆ. ಸ್ವಲ್ಪ ಪ್ರಯತ್ನಿಸಿದರೂ ಸಾಕು ಅಂದುಕೊಂಡ ಕೆಲಸಗಳು ಕೈಗೂಡುತ್ತವೆ. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.