Weekly Horoscope : ಜ್ಯೋತಿಷ್ಯದಲ್ಲಿ, ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ಈ ವಾರ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿಯ ಸಂಯೋಗವಾಗುತ್ತದೆ. ಕುಂಭ ರಾಶಿಯು ಶನಿಯ ರಾಶಿಯಾಗಿದ್ದು ಈ ಎರಡು ಪ್ರಮುಖ ಗ್ರಹಗಳ ಸಂಯೋಗವು ವಿಶೇಷ ಯೋಗವನ್ನು ಸೃಷ್ಟಿಸುತ್ತಿದೆ. ಇದು ಎಲ್ಲಾ 12 ರಾಶಿಯವರ  ಮೇಲೆ ಪರಿಣಾಮ ಬೀರುತ್ತದೆ.  ಅದರಲ್ಲಿಯೂ ಶನಿ ಮತ್ತು ಸೂರ್ಯನು ಈ ರಾಶಿಯವರ ಮೇಲೆ ಕೃಪಾ ಕಟಾಕ್ಷ ಬೀರುತ್ತಾನೆ. ಈ ರಾಶಿಯವರು ಮುಂದಿನ 7 ದಿನಗಳಲ್ಲಿ ಒಳ್ಳೆಯ ಸುದ್ದಿ ಪಡೆಯಬಹುದು. ಲಾಭದ ಸಾಧ್ಯತೆಗಳು ಹೆಚ್ಚಾಗುವುದು. 


COMMERCIAL BREAK
SCROLL TO CONTINUE READING

ಈ ವಾರ  ಬೆಳಗುವುದು ಇವರ ಅದೃಷ್ಟ : 
ವೃಷಭ ರಾಶಿ :
ವೃಷಭ ರಾಶಿಯವರಿಗೆ ಈ ವಾರ ತುಂಬಾ ಒಳ್ಳೆಯದು. ಇಲ್ಲಿಯವರೆಗೆ ನೀವು ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ. ಉನ್ನತ ಸ್ಥಾನಕ್ಕೆ ಏರುವಿರಿ. ನೀವು ಬಯಸಿದ ವೇತನ ನಿಮ್ಮದಾಗುವುದು. ಹೊಸ ಕೆಲಸದ ಆಫರ್ ಬರಬಹುದು. ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣವಾಗುವುದು. ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕೆಲಸವು ಪೂರ್ಣಗೊಳ್ಳುವುದು.  


ಇದನ್ನೂ ಓದಿ : Vastu Tips: ಮನೆಗೆ ಈ 2 ಪಕ್ಷಿಗಳ ಆಗಮನ ತಾಯಿ ಲಕ್ಷ್ಮಿ ಪ್ರವೇಶದ ಸಂಕೇತ


ಕರ್ಕಾಟಕ ರಾಶಿ : ಈ ವಾರ ಕರ್ಕ ರಾಶಿಯವರಿಗೆ ವಿಶೇಷ ಲಾಭವಾಗುವುದು. ಕೆಲ ದಿನಗಳಿಂದ ನೀವು ಎದುರಿಸುತ್ತಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯಮಿಗಳು ಹೊಸ ವ್ಯವಹಾರಗಳನ್ನು ಅಂತಿಮಗೊಳಿಸಬಹುದು. ವೃತ್ತಿ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಪ್ರಗತಿಗೆ ಹೊಸ ಹಾದಿ ಹುಟ್ಟಿಕೊಳ್ಳುವುದು. ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತಲೇ ಇರುವುದು. 


ಕನ್ಯಾ ರಾಶಿ : ಇತರರ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ, ಕಠಿಣ ಪರಿಶ್ರಮ ಮತ್ತು ಕೆಲಸದ ಶೈಲಿಯನ್ನು ಪ್ರಶಂಸಿಸಲಾಗುತ್ತದೆ. ಹೊಸ ಜನರ ಸಂಪರ್ಕ ಹೆಚ್ಚಲಿದೆ. ಹೊಸ ಉದ್ಯೋಗದ ಆಫರ್ ಬರಬಹುದು. ಉದ್ಯಮಿಗಳು ಹೆಚ್ಚಿನ ಲಾಭವನ್ನು ಗಳಿಸಬಹುದು. ಹೂಡಿಕೆಯಿಂದ ಲಾಭವಾಗುವುದು. ಸಾಲ ಕೊಟ್ಟು ಹೊರಗೆ ಉಳಿದಿರುವ ಹಣ ಮತ್ತೆ ಕೈಸೇರುವುದು.  


ಇದನ್ನೂ ಓದಿ : Shani Budh Yuti 2024: ಕೆಲವೇ ಗಂಟೆಗಳಲ್ಲಿ ಶನಿ-ಬುಧರ ಮೈತ್ರಿ, ಈ ರಾಶಿಗಳ ಜನರಿಗೆ ಸಕಲೈಶ್ವರ್ಯ ಪ್ರಾಪ್ತಿ ಯೋಗ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.