Shani-Budh Yuti 2024: ವೈದಿಕ ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಶನಿ ಅಧಿಪತ್ಯದ ಕುಂಭ ರಾಶಿಯಲ್ಲಿ ಶನಿ ಹಾಗೂ ಬುಧನ ಮೈತ್ರಿ ನೆರವೇರಲಿದ್ದು, ಇದರಿಂದ ಕೆಲ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಈ ಜನರಿಗೆ ಸಕಲೈಶ್ವರ್ಯ ಪ್ರಾಪ್ತಿಯ ಯೋಗ ರಚನೆಯಾಗುತ್ತಿದೆ. (Spiritual News In Kannada)
Budh Shani Yuti In Kumbha Rashi 2024: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ವಾಣಿ, ವ್ಯಾಪಾರ, ಸಂವಹನ, ಷೇರು ಮಾರುಕಟ್ಟೆ, ಮಾರ್ಕೆಟಿಂಗ್ ಹಾಗೂ ಅರ್ಥವ್ಯವಸ್ಥೆಯ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಇನ್ನೊಂದೆಡೆ ಶನಿಯನ್ನು ಕರ್ಮ ಹಾಗೂ ನ್ಯಾಯದಾತ ಎಂದು ಭಾವಿಸಲಾಗಿದೆ. ಹೀಗಿರುವಾಗ ಪ್ರಸ್ತುತ ಕುಂಭ ರಾಶಿಯಲ್ಲಿ ಬುಧ ಹಾಗೂ ಶನಿಯ ಮೈತ್ರಿ ನೆರವೇರಲಿದೆ. ಫೆಬ್ರುವರಿ 20, 2024 ರಂದು ಬುಧನ ಕುಂಭ ರಾಶಿಯ ಗೋಚಾರದಿಂದ ಈ ಯುತಿ ನಿರ್ಮಾಣಗೊಳ್ಳುತ್ತಿದೆ, ಇದಕ್ಕೆ ಕಾರಣ ಎಂದರೆ ಶನಿ ಈಗಾಗಲೇ ತನ್ನ ಮೂಲ ತ್ರಿಕೋನ ರಾಶಿಯಾಗಿರುವ ಕುಂಭ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಮೂವತ್ತು ವರ್ಷಗಳ ಸುದೀರ್ಘ ಅವಧಿಯ ಬಳಿಕ ನೆರವೇರುತ್ತಿರುವ ಈ ಮೈತ್ರಿಯ ಪ್ರಭಾವ ಸಕಲ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ ಕೆಲ ರಾಶಿಗಳ ಪಾಲಿಗೆ ಈ ಮೈತ್ರಿ ಅತ್ಯಂತ ವಿಶೇಷ ಸಾಬೀತಾಗಲಿದೆ. ಆ ಲಕ್ಕಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Shani-Budh Yuti 2024: ವೈದಿಕ ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಶನಿ ಅಧಿಪತ್ಯದ ಕುಂಭ ರಾಶಿಯಲ್ಲಿ ಶನಿ ಹಾಗೂ ಬುಧನ ಮೈತ್ರಿ ನೆರವೇರಲಿದ್ದು, ಇದರಿಂದ ಕೆಲ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಈ ಜನರಿಗೆ ಸಕಲೈಶ್ವರ್ಯ ಪ್ರಾಪ್ತಿಯ ಯೋಗ ರಚನೆಯಾಗುತ್ತಿದೆ. (Spiritual News In Kannada)
ಕುಂಭ ರಾಶಿ: ಈ ಮೈತ್ರಿ ನಿಮ್ಮ ಜಾಕಾದ ಲಗ್ನ ಭಾವದಲ್ಲಿ ರಚನೆಯಾಗುತ್ತಿದೆ. ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಕಲಿತುಕೊಳ್ಳುವ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ರಚನಾತ್ಮಕ ಕ್ಷೇತ್ರದಲ್ಲಿ ನೀವು ಭಾರಿ ಹೊಳೆಯುವಿರಿ. ಈ ಅವಧಿ ಆರ್ಥಿಕ ಯೋಜನೆಗಳನ್ನು ರೂಪಿಸುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಬುಧನ ಪ್ರಭಾವದಿಂದ ವೃತ್ತಿ-ವ್ಯಾಪಾರದಲ್ಲಿ ನಿಮಗೆ ಭಾರಿ ಲಾಭ ಉಂಟಾಗಲಿದ್ದು, ಇದರಿಂದ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಕಾಣುವಿರಿ.
ಮಿಥುನ ರಾಶಿ: ಶನಿ-ಬುಧರ ಈ ಮೈತ್ರಿ ನಿಮ್ಮ ಜಾತಕದ ನವಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಭಾಗ್ಯ ಹೊಳೆಯಲಿದೆ. ನೀವು ಅಂದುಕೊಂಡ ಯೋಜನೆಗಳಲ್ಲಿ ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನ ಅತ್ಯುತ್ತಮವಾಗಿರಲಿದೆ. ವಿದೇಶಿ ಒಪ್ಪಂದದಿಂದ ಲಾಭ ಸಿಗಲಿದೆ. ಕೆಲಸ-ಕಾರ್ಯಗಳ ನಿಮಿತ್ತ ನಿಮ್ಮ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ನಿಮ್ಮ ಪಾಲಿಗೆ ಶುಭ ಫಲದಾಯಿ ಸಾಬೀತಾಗಲಿದೆ. ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಸಿಂಹ ರಾಶಿ: ಎರಡೂ ಗ್ರಹಗಳ ಈ ಮೈತ್ರಿ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ರಚನೆಯಾಗುತ್ತಿದೆ. ವಿವಾಹಿತರಾಗಿದ್ದಾರೆ ನಿಮ್ಮ ವೈವಾಹಿಕ ಜೀವನ ಅತ್ಯುತ್ತಮವಾಗಿರಲಿದೆ. ಮೊದಲಿಗಿಂತ ಪರಸ್ಪರ ಅಧಿಕ ಹತ್ತಿರಕ್ಕೆ ಬರುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಒದಗಿ ಬರಲಿವೆ. ಶನಿ ನಿಮ್ಮ ರಾಶ್ಯಲ್ಲಿ ಶಶ ಮಹಾಪುರುಷ ರಾಜಯೋಗ ರಚಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ.
ಮಕರ ರಾಶಿ: ಶನಿ ಹಾಗೂ ಬುಧನ ಈ ಕುಂಭ ರಾಶಿಯಲಿನ ಮೈತ್ರಿ ಮಕರ ಜಾತಕದವರ ಪಾಲಿಗೆ ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ಈ ಮೈತ್ರಿ ರಚನೆಯಾಗುತ್ತಿದೆ. ಈ ಅವಧಿಯಲ್ಲಿ ನೌಕರಿಯ ಹುಡುಕಾಟದಲ್ಲಿರುವವರಿಗೆ ಹಾಗೂ ನೌಕರಿ ಬದಲಾವಣೆ ಕುರಿತು ಯೋಚಿಸುತ್ತಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಉತ್ತಮ ಅವಕಾಶಗಳು ನಿಮಗೆ ಒದಗಿ ಬರಲಿದ್ದು, ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಕೂಡ ಉಂಟಾಗಲಿದೆ. ಬುಧನ ಕೃಪೆಯಿಂದ ನಿಮ್ಮ ಮಾತಿನ ಪ್ರಭಾವ ಕೂಡ ಹೆಚ್ಚಾಗಲಿದ್ದು, ಇದರಿಂದ ಜನ ನಿಮ್ಮತ್ತ ಆಕರ್ಷಿತರಾಗಲಿದ್ದಾರೆ. ಇನ್ನೊಂದೆಡೆ ಯಾರ ಕೆಲಸ ಮಾರ್ಕೆಟಿಂಗ್, ಸಂವಹನ ಹಾಗೂ ಮಾತಿಗೆ ಸಂಬಂಧಿಸಿದೆಯೋ ಅವರ ಪಾಲಿಗೆ ಈ ಸಮಯ ಅತ್ಯದ್ಭುತ ಸಾಬೀತಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)