Budha Vakri Effect: ಯಾವುದೇ ಒಂದು ಗ್ರಹವು ತನ್ನ ಸಾಮಾನ್ಯ ಚಲನೆಯ ಬದಲಿಗೆ ಹಿಮ್ಮುಖ ಚಲನೆಯಲ್ಲಿ ಚಲಿಸಿದಾಗ ಅದನ್ನು ಹಿಮ್ಮುಖ ಚಲನೆ, ವಕ್ರ ನಡೆ ಎಂದು ಕರೆಯಲಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.  ಇದೀಗ ಜ್ಯೋತಿಷ್ಟ್ಯ ಶಾಸ್ತ್ರದಲ್ಲಿ ಬುದ್ಧಿವಂತಿಕೆ, ವ್ಯವಹಾರ, ತಾರ್ಕಿಕ ಶಕ್ತಿಯ ಅಂಶವೆಂದು ಪರಿಗಣಿಸಲಾಗಿರುವ ಬುಧನು ಏಪ್ರಿಲ್ 21, 2023 ರಿಂದ ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುದ್ಧನ ಹಿಮ್ಮುಖ ಚಲನೆಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಯವರು ಭಾರೀ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ರಾಶಿಯವರನ್ನು ಸಂಪತ್ತಿನ ಒಡೆಯರನ್ನಾಗಿ ಮಾಡಲಿದ್ದಾನೆ ವಕ್ರೀ ಬುಧ :-
ಮೇಷ ರಾಶಿ: 

ಸ್ವ ರಾಶಿಯಲ್ಲಿಯೇ ಬುಧನ ಹಿಮ್ಮುಖ ಚಲನೆ ಈ ರಾಶಿಯವರ್ಫಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ತರಲಿದೆ. ಹಠಾತ್ ಧನಲಾಭದಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ ವಿತೀಯ ಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದೆ. 


ಇದನ್ನೂ ಓದಿ- Chandra Grahan 2023: ವರ್ಷದ ಮೊದಲ ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಭಾಗ್ಯೋದಯ


ಸಿಂಹ ರಾಶಿ: 
ಏಪ್ರಿಲ್ ತಿಂಗಳಿನಲ್ಲಿ ಬುಧನ ವಕ್ರ ನಡೆ ಸಿಂಹ ರಾಶಿಯವರಿಗೂ ಸಹ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವೃತ್ತಿ ರಂಗದಲ್ಲಿ ಉನ್ನತ ಸ್ಥಾನಕ್ಕೇರುವ ನಿಮ್ಮ ಹಾದಿ ಸುಲಭವಾಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಬಂಪರ್ ಲಾಭ ಸಾಧ್ಯತೆ ಇದ್ದು, ಹಣದ ಸುರಿಮಳೆ ಆಗಲಿದೆ. 


ಕುಂಭ ರಾಶಿ: 
ಬುಧದ ಹಿಮ್ಮುಖ ಚಲನೆಯು ಕುಂಭ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲಿದೆ. ಈ ಸಮಯದಲ್ಲಿ, ಪ್ರಚಾರವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ, ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ವ್ಯಾಪಾರಸ್ಥರಿಗೂ ಲಾಭವಾಗಲಿದೆ. 


ಇದನ್ನೂ ಓದಿ- Trigrahi Yoga: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ತ್ರಿಗ್ರಾಹಿ ಯೋಗದಿಂದ ಹೆಚ್ಚಾಗಲಿದೆ ಈ 3 ರಾಶಿಯವರ ಸಂಕಷ್ಟ


ಮೀನ ರಾಶಿ: 
ಈ ರಾಶಿಯವರಿಗೆ ಬುಧನ ವಕ್ರ ನಡೆಯಿಂದ ರುತ್ತಿ ಬದುಕಿನಲ್ಲಿ ಉತ್ತಮ ಫಲಗಳು ಲಭ್ಯವಾಗಲಿವೆ. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲೂ ಭಾರೀ ಅದೃಷ್ಟದ ಸಮಯ ಇದಾಗಿದ್ದು ಈ ಸಮಯದಲ್ಲಿ ನೀವು ಆರ್ಥಿಕವಾಗಿಯೂ ಬಲಶಾಲಿಯಾಗಲಿದ್ದೀರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.