Chandra Grahan 2023: ವರ್ಷದ ಮೊದಲ ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಭಾಗ್ಯೋದಯ

Lunar Eclipse 2023: ಖಗೋಳ ಶಾಸ್ತ್ರದ ಪ್ರಮುಖ ಘಟನೆಗಳಾಗಿರುವ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಜ್ಯೋತಿಷ್ಯ ಶಾಸ್ತ್ರದಲ್ಲೂ ಬಹಳ ಪ್ರಾಮುಖ್ಯತೆ ಹೊಂದಿವೆ. ಗ್ರಹಣಗಳು ನೇರವಾಗಿ ಇಲ್ಲವೇ, ಪರೋಕ್ಷವಾಗಿ ಪ್ರತಿಯೊಬ್ಬರ ಜೀವನದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತವೆ. 

Written by - Yashaswini V | Last Updated : Apr 6, 2023, 09:46 AM IST
  • ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.
  • ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿರಬಹುದು, ಆದರೆ ಇದು ಜ್ಯೋತಿಷ್ಯ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.
  • ಇದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ.
Chandra Grahan 2023: ವರ್ಷದ ಮೊದಲ ಚಂದ್ರಗ್ರಹಣದಿಂದ ಈ ರಾಶಿಯವರಿಗೆ ಭಾಗ್ಯೋದಯ  title=
Chandra Grahan 2023 impact on zodiac signs

Lunar Eclipse 2023 Effect: 2023ರ ಮೇ ತಿಂಗಳಿನಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. 2023 ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023 ರಂದು ಸಂಭವಿಸುತ್ತದೆ. ಈ ದಿನ ರಾತ್ರಿ 8.45ರಿಂದ ಗ್ರಹಣ ಕಾಲ ಆರಂಭವಾಗಲಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗ್ರಹಣ ಕೊನೆಗೊಳ್ಳಲಿದೆ. 

ಗ್ರಹಣದ ಸೂತಕ ಕಾಲ:  
ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ. ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿರಬಹುದು, ಆದರೆ ಇದು ಜ್ಯೋತಿಷ್ಯ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಇದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಈ ವರ್ಷದ ಮೊದಲ ಚಂದ್ರಗ್ರಹಣವು ಮೂರು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Trigrahi Yoga: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ತ್ರಿಗ್ರಾಹಿ ಯೋಗದಿಂದ ಹೆಚ್ಚಾಗಲಿದೆ ಈ 3 ರಾಶಿಯವರ ಸಂಕಷ್ಟ

ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ- ಈ ರಾಶಿಯವರಿಗೆ ತುಂಬಾ ಅದೃಷ್ಟ 
ಮೇಷ ರಾಶಿ : 

ಮೇಷ ರಾಶಿಯವರಿಗೆ ಚಂದ್ರಗ್ರಹಣವು ತುಂಬಾ ಶುಭಕರವಾಗಿರುತ್ತದೆ. ನೀವು ಉತ್ತಮ ಆರ್ಥಿಕ ಏರಿಳಿತಗಳನ್ನು ನೋಡಬಹುದಾದರೂ, ನೀವು ಉಳಿತಾಯಕ್ಕಾಗಿ ಆಯ್ಕೆಗಳನ್ನು ಕಂಡುಕೊಳ್ಳಬಹುದು. ವೃತ್ತಿ ಬದುಕಿನಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.  

ಸಿಂಹ ರಾಶಿ:
ವರ್ಷದ ಮೊದಲ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಣಾಮ ಬೀರಲಿಡ್. ಈ ಸಮಯದಲ್ಲಿ ನೀವು ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆರ್ಥಿಕ ಲಾಭ ದೊರೆಯಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ.  

ಇದನ್ನೂ ಓದಿ- ಏಪ್ರಿಲ್‌ನಲ್ಲಿ ರೂಪುಗೊಳ್ಳಲಿವೆ 2 ವಿನಾಶಕಾರಿ ಯೋಗ: ಈ ರಾಶಿಯವರು ಜಾಗರೂಕರಗಿರಿ

ಮಕರ ರಾಶಿ: 
2023ರ ಮೊದಲ ಚಂದ್ರಗ್ರಹಣವು ಮಕರ ರಾಶಿಯವರಿಗೂ ಕೂಡ ತುಂಬಾ ಮಂಗಳಕರವೆಂದೇ ಹೇಳಬಹುದು. ಈ ಸಮಯದಲ್ಲಿ ನಿಮ್ಮ ಬಹುದಿನಗಳ ಆಸೆ ಈಡೇರಲಿದೆ. ಹಠಾತ್ ಧನಲಾಭ ಸಾಧ್ಯತೆ ಇದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಈ ರಾಶಿಯವರಿಗೆ ಭೂಮಿ, ವಾಹನ ಖರೀದಿ ಯೋಗವೂ ಇದೆ.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News