Most Trusted Zodiac : ಯಾವುದೇ ಸಂಬಂಧವಿರಲಿ ಪ್ರಾಮಾಣಿಕತೆ ಇದ್ದರೆ ಮಾತ್ರ ಆ ಸಂಬಂಧ ಗಟ್ಟಿಯಾಗಿರಲು ಸಾಧ್ಯ.  ತಂದೆ-ಮಗನ ಸಂಬಂಧವೇ ಆಗಿರಲಿ ಅಥವಾ ಜೀವನ ಸಂಗಾತಿಯಾಗಿರಲಿ, ಸಂಬಂಧದಲ್ಲಿ ಪ್ರಾಮಾಣಿಕತೆ ಎನ್ನುವುದು ಬಹಳ ಮುಖ್ಯ. ಅದರಲ್ಲೂ ಸಂಗಾತಿ ಮಧ್ಯೆ ಪ್ರಾಮಾಣಿಕತೆ ಇಲ್ಲ ಎಂದಾದರೆ ಆ ಸಂಬಂಧ ಉಳಿಯುವುದು ಸಾಧ್ಯವೇ ಇಲ್ಲ.  ಇಬ್ಬರ ನಡುವೆ ಸದಾ ಕಲಹ ಹುಟ್ಟಿಕೊಳ್ಳುತ್ತವೆ. ಸಂಬಂಧದಲ್ಲಿ ದ್ರೋಹ ಬಗೆದರೆ ಆ ಸಂಬಂಧ ಮುರಿದೇ ಬೀಳುವುದು. ಹಾಗಾಗಿ ನಿಮ್ಮ ಸಂಗಾತಿ ನಿಮಗೆ, ನೀವು ನಿಮ್ಮ ಸಂಗಾತಿಗೆ ನಿಷ್ಠೆಯಿಂದ ಇರುವುದು ಬಹಳ ಮುಖ್ಯ.  ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ತಮ್ಮ ಸಂಗಾತಿಗೆ ಅತಿಯಾಗಿ ಪ್ರಾಮಾಣಿಕರಾಗಿರುತ್ತಾರೆಯಂತೆ. 


COMMERCIAL BREAK
SCROLL TO CONTINUE READING

ಈ ರಾಶಿಯವರು ಸಂಗಾತಿಗೆ ನಿಷ್ಠರಾಗಿರುತ್ತಾರೆ : 
ಕಟಕ ರಾಶಿ  :
ಕರ್ಕಾಟಕ ರಾಶಿಯವರು ತಮ್ಮ ಆದ್ಯತೆಗಳ ಬಗ್ಗೆ ಬಹಳ ಸ್ಪಷ್ಟವಾಗಿರುತ್ತಾರೆ. ಅವರು ಯಾರನ್ನಾದರೂ ಪ್ರೀತಿಸಿದರೆ, ಪೂರ್ಣ ಹೃದಯದಿಂದ ಪ್ರೀತಿಸುತ್ತಾರೆ.  ಪ್ರಾಮಾಣಿಕತೆ ಮತ್ತು ನಿಷ್ಠೆ ಸಂಬಂಧಗಳ ಮೂಲಾಧಾರ ಎಂದು ನಂಬಿರುತ್ತಾರೆ.  ಇವರು ತಮ್ಮ ಸಂಗಾತಿಗೆ ಮೋಸ ಮಾಡುವ ಬಗ್ಗೆ ಯೋಚನೆಯೂ ಮಾಡುವುದಿಲ್ಲ, ಮಾತ್ರವಲ್ಲ ಮೋಸ ಮಾಡುವ ಸಂಗಾತಿ ಜೊತೆ ಇವರು ಬದುಕುವುದೂ ಇಲ್ಲ. 


ಇದನ್ನೂ ಓದಿ : Mangal Gochar: ಮುಂದಿನ 36 ದಿನ ಈ ರಾಶಿಗಳ ಮೇಲೆ ಸಂಪತ್ತಿನ ಮಳೆ.. ಸ್ಥಾನ, ಹಣ, ಪ್ರತಿಷ್ಠೆ ನಿಮ್ಮನ್ನು ಹುಡುಕಿ ಬರುತ್ತೆ!


ಮೇಷ ರಾಶಿ :
ಮೇಷ ರಾಶಿಯ ಜನರು ತುಂಬಾ ಪ್ರಾಮಾಣಿಕರು. ಎದುರಿಗಿರುವವರು ಏನು ಅಂದುಕೊಳ್ಳುತ್ತಾರೆಯೋ ಎನ್ನುವುದನ್ನು ಲೆಕ್ಕಿಸದೆ ತಮ್ಮ ಮನಸ್ಸಿನ ಮಾತನ್ನು ಹೇಳಿ ಬಿಡುತ್ತಾರೆ.  ಮೇಷ ರಾಶಿಯವರು ಇರುವುದನ್ನು ಇದ್ದ ಹಾಗೆ ಹೇಳುವ ಗುಣವುಳ್ಳವರು. ಯಾವುದಾದರೂ ವಿಚಾರದ ಬಗ್ಗೆ ಅವರ ಅಭಿಪ್ರಾಯ ಕೇಳಿದರೆ ತಮಗೆ ಏನು ಅನ್ನಿಸುತ್ತದೆಯೋ ಅದನ್ನೇ ಹೇಳುತ್ತಾರೆ. 


ಧನು ರಾಶಿ :
ಧನು ರಾಶಿಯ ಯುವಕರು ತಮ್ಮ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ತಮ್ಮ ಸಂಗಾತಿಯ ಭಾವನೆಗಳ ಬಗ್ಗೆ ಬಹಳ  ಪ್ರಾಮುಖ್ಯತೆ ನೀಡುತ್ತಾರೆ. ಸಂಗಾತಿಯ ನಿರೀಕ್ಷೆಗೆ ತಕ್ಕಂತೆ ಬದುಕಲು ಇಷ್ಟಪಡುತ್ತಾರೆ. ಸಂಗಾತಿಗೆ ಬಹಳ ಪ್ರಾಮಾಣಿಕರಾಗಿರುತ್ತಾರೆ.  


ಇದನ್ನೂ ಓದಿ : ಈ ರಾಶಿಯವರಿಗೆ ಹಣದ ಮಳೆಯನ್ನೇ ಕರುಣಿಸುವ ಸೂರ್ಯದೇವ: ಬಾಳಲ್ಲಿ ಸುಖವೃದ್ಧಿ-ಉದ್ಯೋಗದಲ್ಲಿ ಇನ್ಕ್ರಿಮೆಂಟ್


ಕನ್ಯಾರಾಶಿ :
ಕನ್ಯಾ ರಾಶಿಯ ಯುವಕರು ತಮ್ಮ ಸಂಗಾತಿಯ ಕಡೆಗೆ ನಿಷ್ಠರಾಗಿರುತ್ತಾರೆ. ಅವರು ತಮ್ಮ ಸಂಬಂಧಗಳನ್ನು ಸಂಪೂರ್ಣ ನಿಷ್ಠೆಯಿಂದ ನಿಭಾಯಿಸುತ್ತಾರೆ. ತನ್ನ ಸಂಗಾತಿಗೆ ಏನಾದರೂ ತೊಂದರೆಯಾಗಿದ್ದರೆ, ಅವನು ಯಾವಾಗಲೂ ವಿಷಯಗಳನ್ನು ಮುಕ್ತವಾಗಿ ಮಾತನಾಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಾನೆ.


ಇದನ್ನೂ ಓದಿ : Budha Udaya: ಇಂದಿನಿಂದ ಈ ರಾಶಿಯವರಿಗೆ ಭಾಗ್ಯೋದಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.