ಈ ಅಕ್ಷರದಿಂದ ಹೆಸರು ಆರಂಭವಾಗುವವರು ರಾಜನಂತೆ ಬದುಕುತ್ತಾರೆ! ಕುಬೇರನ ಆಶೀರ್ವಾದ ಸದಾ ಇವರ ಮೇಲೆ ಇರುತ್ತದೆ
ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ ವ್ಯಕ್ತಿಯ ಹೆಸರಿನ ವಿಶೇಷ ಮಹತ್ವವನ್ನು ಹೇಳಲಾಗಿದೆ. ಹೆಸರಿನ ಪರಿಣಾಮ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಶಾಸ್ತ್ರಗಳ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ರಾಶಿಯನ್ನು ನಿರ್ಧರಿಸಲಾಗುತ್ತದೆ. ರಾಶಿಗನುಗುಣವಾಗಿ ಯಾವ ಅಕ್ಷರದಿಂದ ಹೆಸರು ಆರಂಭವಾಗಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದ ಮೂಲಕ ಕೂಡಾ ಅವನ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಸಾಧ್ಯವಾಗುತ್ತದೆ.
ಇವರ ಮೇಲಿರುತ್ತದೆ ಕುಬೇರ ದೇವನ ವಿಶೇಷ ಅನುಗ್ರಹ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಮ್ಮ ಹೆಸರಿನ ಮೊದಲ ಅಕ್ಷರವು Vಯಿಂದ ಆರಂಭವಾದರೆ ಆ ವ್ಯಕ್ತಿ ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುತ್ತಾನೆ ಎನ್ನಲಾಗಿದೆ. ಕುಬೇರ ದೇವನ ಆಶೀರ್ವಾದ ಈ ಹೆಸರಿನವರ ಮೇಲೆ ಅತಿಯಾಗಿ ಇರುತ್ತದೆಯಂತೆ. ಇಷ್ಟೇ ಅಲ್ಲ, V ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿ ಜೀವನದಲ್ಲಿ ಎಲ್ಲಾ ರೀತಿಯ ಐಷಾರಾಮಗಳನ್ನೂ ಪಡೆಯುತ್ತಾನೆ. ಇವರು ದುಬಾರಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ ಮತ್ತು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ.
ಇದನ್ನೂ ಓದಿ : Chanakya Niti: ಈ ಒಂದು ಕೆಲಸ ಮಾಡಿದರೆ ಸಾಕು ವರ್ಷಪೂರ್ತಿ ಆರ್ಥಿಕ ಸಮಸ್ಯೆ ಎದುರಾಗೋದೇ ಇಲ್ಲ
N ಅಕ್ಷರದಿಂದ ಹೆಸರು ಆರಂಭವಾಗುವವರು :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, N ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಹೃದಯವಂತರು. ಇವರ ವಿಭಿನ್ನ ಶೈಲಿಯ ಮೂಲಕವೇ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಜೀವನದಲ್ಲಿ ಸಾಕಷ್ಟು ಗೌರವವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಜ್ಯೋತಿಷ್ಯದ ಪ್ರಕಾರ, ಈ ಜನರನ್ನು ಸ್ವಭಾವತಃ ಧೈರ್ಯಶಾಲಿ ಮತ್ತು ನಿರ್ಭೀತರು ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ.
S ಅಕ್ಷರದಿಂದ ಆರಂಭವಾಗುವ ಹೆಸರು :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, S ಅಕ್ಷರದಿಂದ ಹೆಸರು ಆರಂಭವಾಗುವವರು ಜೀವನದ ಪ್ರತಿಯೊಂದು ತಿರುವಿನಲ್ಲಿಯೂ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಇವರು ಅಂದುಕೊಂಡ ಕೆಲಸವನ್ನು ಮುಗಿಸಿದ ನಂತರವೇ ವಿರಾಮ ಪಡೆಯುತ್ತಾರೆ. ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಈ ಹೆಸರಿನ ಜನರಿಗೆ ದೂರದ ಊರುಗಳಿಗೆ ಪ್ರಯಾಣ ಮಾಡುವುದೆಂದರೆ ಇಷ್ಟ. ಸಂಪತ್ತಿನ ದೇವರಾದ ಕುಬೇರ ದೇವನ ಆಶೀರ್ವಾದ ಇವರ ಮೇಲೆ ಹೆಚ್ಚಾಗಿರುತ್ತದೆ.
ಇದನ್ನೂ ಓದಿ : Numerology: ಈ ದಿನಾಂಕದಂದು ಜನಿಸಿದವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗುತ್ತದೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.