Numerology: ಈ ದಿನಾಂಕದಂದು ಜನಿಸಿದವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗುತ್ತದೆ!

ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ವಿಶೇಷ ಸಂಖ್ಯೆಯನ್ನು ಹೊಂದಿರುವ ಜನರಿಗೆ 2023ರ ಹೊಸ ವರ್ಷವು ತುಂಬಾ ವಿಶೇಷವಾಗಿರಲಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಕೆಲವು ತಪ್ಪು ಮಾಡುವುದನ್ನು ತಪ್ಪಿಸಬೇಕು.  

Written by - Puttaraj K Alur | Last Updated : Jan 9, 2023, 09:23 AM IST
  • ರಾಡಿಕ್ಸ್ 5ರ ಸಂಖ್ಯೆ ಹೊಂದಿರುವ ಜನರ ದೊಡ್ಡ ನ್ಯೂನತೆಯೆಂದರೆ ಅತಿಯಾದ ಆತ್ಮವಿಶ್ವಾಸ
  • ಸೋಮಾರಿತನ ಮತ್ತು ಆಲಸ್ಯದಿಂದ ರಾಡಿಕ್ಸ್ 5ರ ಸಂಖ್ಯೆಯ ಜನರು ಅಂದುಕೊಂಡಿದ್ದನ್ನು ಸಾಧಿಸುವುದಿಲ್ಲ
  • ರಾಡಿಕ್ಸ್ 5ರ ಸಂಖ್ಯೆ ಹೊಂದಿರುವ ಜನರ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಚಂಚಲತೆ
Numerology: ಈ ದಿನಾಂಕದಂದು ಜನಿಸಿದವರಿಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಗುತ್ತದೆ! title=
ಸಂಖ್ಯಾಶಾಸ್ತ್ರದ ಭವಿಷ್ಯ

ನವದೆಹಲಿ: ಸಂಖ್ಯಾಶಾಸ್ತ್ರದಿಂದಲೂ ಮನುಷ್ಯನ ಜೀವನದ ಅನೇಕ ವಿಷಯಗಳ ಬಗ್ಗೆ ತಿಳಿಯಬಹುದು. ಇದರಲ್ಲಿ ಹುಟ್ಟಿದ ದಿನಾಂಕದ ಮೊದಲು ರಾಡಿಕ್ಸ್ ಅನ್ನು ಹೊರತೆಗೆಯಲಾಗುತ್ತದೆ. ಉದಾಹರಣೆಗೆ ಯಾರಾದರೂ 16ರಂದು ಜನಿಸಿದರೆ ಅವರ ರಾಡಿಕ್ಸ್ ಸಂಖ್ಯೆ 7 ಆಗಿರುತ್ತದೆ. ಅದೇ ರೀತಿ ಇಂದು ನಾವು ರಾಡಿಕ್ಸ್ 5ರ ಸಂಖ್ಯೆ ಹೊಂದಿರುವ ಜನರ ಬಗ್ಗೆ ಹೇಳುತ್ತಿದ್ದೇವೆ.

ಈ ಜನರು ಅನೇಕ ಕಾರಣಗಳಿಂದ ತಮ್ಮ ಗುರಿಯನ್ನು ಸಾಧಿಸಲು ವಿಫಲರಾಗುತ್ತಾರೆ. 5, 14 ಮತ್ತು 23ರಂದು ಜನಿಸಿದವರು 5ನೇ ರಾಡಿಕ್ಸ್ ಸಂಖ್ಯೆಯಲ್ಲಿ ಬರುತ್ತಾರೆ. ಇವರ ಅಧಿಪತಿ ಬುಧ. ಅದಕ್ಕಾಗಿಯೇ ಬುಧ ಗ್ರಹದ ಪ್ರಭಾವವು ಈ ಜನರ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಿಮ್ಮ ಸಂಖ್ಯೆ 5 ಆಗಿದ್ದರೆ ನೀವು ಈ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಬೇಕು. ಏಕೆಂದರೆ ಇದರಿಂದ ನೀವು ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.      

ಇದನ್ನೂ ಓದಿ: Astro Tips: ಪೊರಕೆಯ ಈ ಪರಿಣಾಮಕಾರಿ ಟ್ರಿಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ..!

ಅತಿಯಾದ ಆತ್ಮವಿಶ್ವಾಸ

ರಾಡಿಕ್ಸ್ 5ರ ಸಂಖ್ಯೆ ಹೊಂದಿರುವ ಜನರ ದೊಡ್ಡ ನ್ಯೂನತೆಯೆಂದರೆ ಅತಿಯಾದ ಆತ್ಮವಿಶ್ವಾಸ. ಈ ಜನರು ತಮ್ಮನ್ನು ಹೆಚ್ಚು ನಂಬುತ್ತಾರೆ. ಹೀಗಾಗಿ ಅತಿಯಾದ ಆತ್ಮವಿಶ್ವಾಸದಲ್ಲಿಯೇ ಇವರು ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ. ಆದರೆ ಅವರಿಗೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದಾಗಿ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ.

ಸೋಮಾರಿತನ ಮತ್ತು ಆಲಸ್ಯ

ರಾಡಿಕ್ಸ್ 5ರ ಸಂಖ್ಯೆಯ ಜನರ ನ್ಯೂನತೆಯೆಂದರೆ ಅವರು ಸೋಮಾರಿ ಮತ್ತು ನಿರಾಸಕ್ತಿಯಿಂದ ಉಳಿಯುತ್ತಾರೆ. ಈ ಕಾರಣದಿಂದ ಅವರ ಅನೇಕ ಕೆಲಸಗಳು ವಿಫಲಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸೋಮಾರಿತನವನ್ನು ಬಿಡಬೇಕು. ಸೋಮಾರಿತನ ತ್ಯಜಿಸಿ, ಉದಾಸೀನತೆಯ ಬದಲಿಗೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು.

ಇದನ್ನೂ ಓದಿ: Horoscope Today: ಈ ರಾಶಿಯ ಜನರಿಗೆ ಶೀಘ್ರವೇ ಶುಭ ಸುದ್ದಿಗಳು ಸಿಗಲಿವೆ

ಚಂಚಲತೆಯೇ ದೊಡ್ಡ ಸಮಸ್ಯೆ

ರಾಡಿಕ್ಸ್ 5ರ ಸಂಖ್ಯೆಯ ಜನರ ದೊಡ್ಡ ಸಮಸ್ಯೆ ಎಂದರೆ ಯಾವುದೇ ಒಂದು ಕೆಲಸವನ್ನು ದೀರ್ಘಕಾಲದವರೆಗೆ ಮಾಡದಿರುವುದು. ಮೊದಲಿಗೆ ಅವರು ಬಹಳ ಉತ್ಸಾಹದಿಂದ ಕೆಲಸವನ್ನು ಪ್ರಾರಂಭಿಸುತ್ತಾರೆ ಮತ್ತು ಶೀಘ್ರವೇ ಅದನ್ನು ಕೈಬಿಡುತ್ತಾರೆ. ಇವರಿಗೆ ಚಂಚಲತೆಯ ಮನಸ್ಸು ದೊಡ್ಡ ಸಮಸ್ಯೆಯಾಗಿರುತ್ತದೆ. ಈ ಕಾರಣದಿಂದ ಅವರು ತಮ್ಮ ಗುರಿಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಮೊದಲ ಕೆಲವನ್ನು ಕೈಬಿಟ್ಟ ಕೆಲವು ದಿನಗಳ ನಂತರ ಅವರು ಹೊಸ ಕೆಲಸ ಪ್ರಾರಂಭಿಸುತ್ತಾರೆ. ಹೀಗಾಗಿ ಆ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಕಡಿಮೆ.

ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು!

ರಾಡಿಕ್ಸ್ 5ರ ಸಂಖ್ಯೆ ಹೊಂದಿರುವ ಜನರು ಬಹಳಷ್ಟು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಜನರಿಗೆ ತಮ್ಮ ಪ್ರತಿಷ್ಠೆ ತೋರಿಸಲು ಅವರು ಸಾಕಷ್ಟು ಹರಟೆ ಹೊಡೆಯುತ್ತಾರೆ. ಇದರಿಂದಾಗಿ ಅಂತಹ ಜನರು ಜೋಕ್‌ಗಳಿಗೆ ಗುರಿಯಾಗುತ್ತಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News