Vastu Tips: ತುಂಬಾ ಆಯಾಸವಾಗಿದ್ದರೂ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಎಷ್ಟೇ ಪ್ರಯತ್ನಿಸಿದರೂ ಶಾಂತಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲವೇ? ವಾಸ್ತು ಪ್ರಕಾರ ನಿಮ್ಮ ಮಲಗುವ ಕೋಣೆಯಲ್ಲಿರುವ ಕೆಲವು ಪದಾರ್ಥಗಳು ನಿದ್ರೆಗೆ ಭಂಗ ತರುತ್ತವೆ ಎನ್ನಲಾಗುತ್ತದೆ. 


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ (Astrology) ವಾಸ್ತು ಶಾಸ್ತ್ರಕ್ಕೂ ಕೂಡ ಅದರದೇ ಆದ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ಮಲಗುವ ಮೊದಲು ಬೆಡ್ ರೂಂನಿಂದ ಕೆಲವು ವಸ್ತುಗಳನ್ನು ಹೊರಗಿಡುವುದರಿಂದ ಆರಾಮದಾಯಕ ನೆಮ್ಮದಿಯ ನಿದ್ರೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗಿದ್ದರೆ, ಬೆಡ್ ರೂಂ ನಲ್ಲಿ ಯಾವ ವಸ್ತುಗಳನ್ನು ಇಡಬಾರದು... 


ಮಲಗುವಾಗ ಯಾವ ಕಾರಣಕ್ಕೂ ಈ 5 ವಸ್ತುಗಳನ್ನು ಬೆಡ್ ರೂಂನಲ್ಲಿಡಬೇಡಿ! 
ಎಲೆಕ್ಟ್ರಾನಿಕ್ ವಸ್ತುಗಳು: 

ಈ ಡಿಜಿಟಲ್ ಪ್ರಪಂಚದಲ್ಲಿ ಸ್ಮಾರ್ಟ್ ಫೋನ್ ಎಲ್ಲರ ಜೀವನಾಡಿ. ಸಂಗಾತಿಯಂತೆ ಸದಾ ಜೊತೆಗೆ ಇರುವ ಸ್ಮಾರ್ಟ್ ಫೋನ್ ಅನ್ನು ಮಲಗುವಾಗ ಜೊತೆಯಲ್ಲಿಟ್ಟುಕೊಳ್ಳಬಾರದು. ವಾಸ್ತು (Vastu) ಪ್ರಕಾರ, ಸ್ಮಾರ್ಟ್ ಫೋನ್ ಅಷ್ಟೇ ಅಲ್ಲ, ವಾಚ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಇತ್ಯಾದಿ ಎಲೆಕ್ಟ್ರಿಕ್ ಸಾಧನಗಳನ್ನು ನಿಮ್ಮ ಬೆಡ್ ರೂಂನಿಂದ ಹೊರಗೆ ಇಡಬೇಕು. 


ಇದನ್ನೂ ಓದಿ- Astro Tips: ಬೆಡ್ ರೂಂನಲ್ಲಿ ಈ ಫೋಟೋ ನೇತು ಹಾಕಿದ್ರೆ ಸುಖ-ಸಮೃದ್ಧಿ ಸಿಗಲಿದೆ!


ಪ್ರಮುಖ ದಾಖಲೆಗಳು: 
ವಾಸ್ತು ಶಾಸ್ತ್ರದ ಪ್ರಕಾರ, ಪುಸ್ತಕ ಸೇರಿದಂತೆ ಪ್ರಮುಖ ದಾಖಲೆಗಳನ್ನು ಮಲಗುವ ಕೋಣೆಯಿಂದ ಹೊರಗಿಡಬೇಕು. ವಾಸ್ತವವಾಗಿ ಬೆಡ್ ರೂಂನಲ್ಲಿ (Bedroom) ಇವುಗಳ ಉಪಸ್ಥಿತಿಯು ನಿದ್ರೆಗೆ ಭಂಗ ತರುತ್ತದೆ ನ್ನಲಾಗುತ್ತದೆ. 


ಚೂಪಾದ ವಸ್ತುಗಳು: 
ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ  ಕತ್ತರಿ, ಚಾಕು ಅಥವಾ ಇತರ ಚೂಪಾದ ವಸ್ತುಗಳನ್ನು ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ನಿದ್ರೆಗೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, ಇಂತಹ ವಸ್ತುಗಳು ಬೆಡ್ ರೂಂನಲ್ಲಿ ಇರದಂತೆ ನಿಗಾವಹಿಸಿ. 


ಹಣ/ಒಡವೆ: 
ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಹಣ ಅಥವಾ ಒಡವೆಗಳನ್ನು ಕೈಚೀಲದಲ್ಲಿ ಇಟ್ಟು ಮಲಗಬಾರದು. ಒಂದರ್ಥದಲ್ಲಿ ಇದು ಸಂಪತ್ತಿನ ದೇವತೆ ಲಕ್ಷ್ಮಿ ದೇವಿಗೆ ಮಾಡುವ ಅನುಮಾನವೂ ಹೌದು. ಜೊತೆಗೆ ಹಾಸಿಗೆ ಬಳಿ ಹಣ, ಆಭರಣ ಇಟ್ಟು ಮಲಗುವುದರಿಂದ ನಿದ್ರೆಗೂ ಅಡ್ಡಿಯಾಗುತ್ತದೆ. 


ಇದನ್ನೂ ಓದಿ- ಮಲಗುವಾಗ ದಿಂಬಿನ ಕೆಳಗೆ ಈ ಹೂವಿನ ದಳ ಇಟ್ಟರೆ ಅದೃಷ್ಟವೇ ಖುಲಾಯಿಸಿದಂತೆ! ಕೈ ತುಂಬಾ ದುಡ್ಡು... ಕೋಟ್ಯಾಂತರ ಆಸ್ತಿಗೆ ವಾರಸ್ದಾರರಾಗ್ತೀರಿ


ಕನ್ನಡಿ: 
ಬೆಡ್ ರೂಂನಲ್ಲಿ ಕನ್ನಡಿ ಇಡುವುದು ಸಾಮಾನ್ಯ ಪ್ರವೃತ್ತಿ. ಆದರೆ, ನೀವು ಮಲಗುವ ಜಾಗಕ್ಕೆ ಎದುರಾಗಿ ಕನ್ನಡಿ ಇರಬಾರದು. ಇದರಿಂದ ಮಾನಸಿಕ ಹಿಂಸೆ ಹೆಚ್ಚಾಗಿ ಗುಣಮಟ್ಟದ ನಿದ್ರೆ ಪಡೆಯಲು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.