ಪ್ರಧಾನಿ ಮೋದಿ, ರಾಹುಲ್, ಕೆಜ್ರೀವಾಲ್ ಪಾಲಿಗೆ ಹೊಸ ವರ್ಷ ಹೇಗಿರಲಿದೆ? ಯಾರ ಭಾಗ್ಯ ಹೊಳೆಯಲಿದೆ?
New Year 2024 Astrology: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷ ಅಂದರೆ 2024 ಪ್ರಧಾನಿ ಮೋದಿ, ರಾಹುಲ್ ಗಾಂಧಿ ಹಾಗೂ ಕೆಜೃವಾಲ್ ಪಾಲಿಗೆ ಹೇಗಿರಲಿದೆ? ಯಾರ ಭಾಗ್ಯ ಹೊಳೆಯಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)
ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವರ್ಷ 2024 ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಹೊಸ ವರ್ಷದಲ್ಲಿ ದೇವಗುರು ಬೃಹಸ್ಪತಿ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಕರ್ಮ ಫಲದಾತ ಶನಿ ದೇವ ಕೂಡ ಅಸ್ತಮಿಸಿ ಮತ್ತೆ ಉದಯಿಸಲಿದ್ದಾನೆ. ಇದರ ಜೊತೆಗೆ ವಕ್ರ ನಡೆಯನ್ನು ಕೂಡ ಅನುಸರಿಸಲಿದ್ದಾನೆ. ಆತನಿಂದ ಶಶ ಮಹಾಪುರುಷ ರಾಜಯೋಗ ಕೂಡ ರಚನೆಯಾಗುತ್ತಿದೆ. ವರ್ಷವಿಡೀ ಆತನ ಪ್ರಭಾವ ಗೋಚರಿಸಲಿದೆ. ಏಕೆಂದರೆ ಈ ವರ್ಷದ ಅಂಕಿ ಅಂದರೆ ಅದು 8 ಮತ್ತು 8 ಮೇಲೆ ಶನಿಯ ಆಧಿಪತ್ಯ ಇರುತ್ತದೆ. (Spiritual News In Kannada)
ಶನಿ ದೇವನನ್ನು ಸಾಮಾನ್ಯ ಜನರ ಕಾರಕ ಎಂದು ಭಾವಿಸಲಾಗುತ್ತ್ದೆ ಹಾಗೂ ವರ್ಷ 2024 ರಲ್ಲಿ ಸಂಪೂರ್ಣ ವರ್ಷ ಆತ ಧರ್ಮ ಹಾಗೂ ಆಧ್ಯಾತ್ಮದ ರಾಶಿಯಾಗಿರುವ ಕುಂಭ ರಾಶಿಯಲ್ಲಿಯೇ ಇರಲಿದ್ದಾನೆ. ಕುಂಭ ರಾಶಿಯಲ್ಲಿ ಶನಿಯ ಗೋಚಾರದ ಸಂದರ್ಭದಲ್ಲಿ ಮುಂದಿನ ವರ್ಷ ಜನವರಿ 22 ರಂದು ಬಹುನಿರೀಕ್ಷಿತ ರಾಮಮಂದಿರ ಪ್ರಾಣಪ್ರತಿಷ್ಠೆ ನೆರವೇರಲಿದೆ. ಇನ್ನೊಂದೆಡೆ ಆತನನ್ನು ನೌಕರಿಯ ಕಾರಕ ಎಂದೂ ಕೂಡ ಭಾವಿಸಲಾಗುತ್ತದೆ. 2024ರಲ್ಲಿ ಲೋಕಸಭೆಗೆ ಚುನಾವಣೆಗಳೂ ಕೂಡ ನಡೆಯಲಿವೆ. ಹೇಗಿರುವಾಗ ಲೋಕಸಭೆ ಚುನಾವಣೆಯಲ್ಲಿ ಉದ್ಯೋಗ ಒಂದು ಪ್ರಮುಖ ವಿಚಾರವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಇಂದಿನ ಈ ಜೋತಿಷ್ಯ ಲೇಖನದಲ್ಲಿ ನಾವು ನಿಮಗೆ ದೇಶದ ಪ್ರಮುಖ ರಾಜಕೀಯ ಮುಖಂಡರ ಪಾಲಿಗೆ ಹೊಸ ವರ್ಷ ಹೇಗಿರಲಿದೆ ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
ಪ್ರಧಾನಿ ಮೋದಿಗೆ ನಿರೀಕ್ಷೆಗೆ ತಕ್ಕಂತೆ ಯಶಸ್ಸು
ಪ್ರಧಾನಿ ಮೋದಿ ಹುಟ್ಟಿದ್ದು ಸೆಪ್ಟೆಂಬರ್ 17, 1950 ಮಧ್ಯಾಹ್ನ ಗುಜರಾತನ ವಾಡ್ನಗರ್ ನಲ್ಲಿ. ಇದರಿಂದ ಪ್ರಧಾನಿ ಮೋದಿಯ ಜನ್ಮ ಕುಂಡಲಿಯಲಿ ವೃಶ್ಚಿಕ ಲಗ್ನವಿದೆ. ಇದಲ್ಲದೆ ಚಂದ್ರ ಮಂಗಳರ ಲಕ್ಷ್ಮಿ ಯೋಗ ಕೂಡ ರಚನೆಯಾಗುತ್ತಿದೆ. ಇದು ಪ್ರಧಾನಿಯ ರಾಜಕೀಯ ಜೀವನದಲ್ಲಿ ಕಳೆದ ಎರಡು ದಶಕಗಳಿಂದ ಯಶಸ್ಸನ್ನು ನೀಡುತ್ತಿದೆ. ಅಷ್ಟೇ ಅಲ್ಲ ಪ್ರಧಾನಿ ಮೋದಿಯ ಜನಪ್ರಿಯತೆ ದೇಶ ಅಷ್ಟೇ ಅಲ್ಲ ವಿದೇಶಗಳಿಗೂ ಕೂಡ ಪಸರಿಸುತ್ತಿದೆ. ಮಂಗಳ ಪ್ರಧಾನಿ ಮೋದಿಗೆ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವ ಕ್ಷಮತೆಯನ್ನು ನೀಡುತ್ತಿದ್ದಾನೆ. ಇನ್ನೊಂದೆಡೆ ಪ್ರಧಾನಿ ಮೋದಿಯ ಜಾತಕದ ಪಂಚಮ ಭಾವದಲ್ಲಿ ರಾಹು ಸ್ಥಿತನಾಗಿದ್ದಾನೆ. ಇದಲ್ಲದೆ ಲಾಭ ಭಾವದಲ್ಲಿನ ಸ್ಥಿತಿ ಕನ್ಯಾ ರಾಶಿಯಲ್ಲಿ ಬುಧ ಹಾಗೂ ದಶಮೇಷ ಸೂರ್ಯನ ದೃಷ್ಟಿ ಒಂದು ಅದ್ಭುತ ರಾಜಯೋಗ ರಚಿಸುತ್ತಿದ್ದು, ಇದು ಪ್ರಧಾನಿಯವರನ್ನು ರಾಜಕೀಯವಾಗಿ ದಕ್ಷರನ್ನಾಗಿಸುತ್ತಿದೆ ಮತ್ತು ಭಾಷಣದಲ್ಲಿ ಕುಶಲತೆಯನ್ನು ದಯಪಾಲಿಸುತ್ತಿದೆ.
ಪ್ರಧಾನಿ ಮೋದಿಯ ಮೇಲೆ ಲಗ್ನಭಾವದಲ್ಲಿ ಕುಳಿತಿರುವ ಮಂಗಳನ ಮಹಾ ದೆಸೆ ನಡೆಯುತ್ತಿದೆ. ಇದಲ್ಲದೆ ಶನಿಯ ಅಂತರ್ದೆಸೆ ಕೂಡ ನಡೆಯುತ್ತಿದೆ. ಇದು ಮೂರನೇ ಬಾರಿಗೆ ಅವರು ಭಾರತದ ಪ್ರಧಾನಿಯಾಗಲಿದ್ದಾರೆ ಎಂಬುದನ್ನೂ ಎತ್ತಿತೋರಿಸುತ್ತಿದೆ. ಶನಿ ಪ್ರಧಾನಿಯವರ ಗೋಚರ ಜಾತಕದ ತೃತೀಯ ಹಾಗೂ ಚತುರ್ಥ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದಲ್ಲದೆ ಶನಿ ದಶಮ ಭಾವದಲ್ಲಿ ಶುಭ ಗ್ರಹವಾಗಿರುವ ಶುಕ್ರನ ಜೊತೆಗೆ ಮೈತ್ರಿ ಮಾಡಿಕೊಂಡು ವಿರಾಜಮಾನನಾಗಿದ್ದಾನೆ. ಇನ್ನೊಂದೆಡೆ ಶುಭ ಗ್ರಹ ಪಂಚಮೇಷ ಗುರುವಿನ ಜೊತೆಗೆ ಸಮಸಪ್ತಕ ಯೋಗ ರಚಿಸಿ ತನ್ನ ಅಂತರ್ದೇಸೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಪ್ರಧಾನಮಂತಿರ್ಯಾಗುವ ಯೋಗ ರೂಪಿಸಿದ್ದಾನೆ. ಆದರೆ ಶನಿಯ ಮೂರನೇ ನೀಚ ದೃಷ್ಟಿ ದ್ವಾದಶ ಭಾವದ ಮೇಲಿದೆ. ಈ ಕಾರಣದಿಂದ ಆರೋಗ್ಯ ಸಮಸ್ಯೆ ಹಾಗೂ ವಿದೇಶಿ ಸಂಚಿನ ಕುರಿತು ಎಚ್ಚರಿಕೆವಹಿಸುವ ಕಾಲ ಬರುವ ಸಾಧ್ಯತೆ ಇದೆ. ಉಳಿದಂತೆ ಪ್ರಧಾನಿ ಮೋದಿ ಪಾಲಿಗೆ ಹೊಸ ವರ್ಷ ಅತ್ಯದ್ಭುತ ಸಾಬೀತಾಗಲಿದೆ.
ಸಿಎಂ ಅರವಿಂದ್ ಕೆಜ್ರೀವಾಲ್ ಪಾಲಿಗೆ ಹೊಸ ವರ್ಷ ಹೇಗಿರಲಿದೆ?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರೀವಾಲ್ ಅವರ ಜನ್ಮ ಕುಂಡಲಿಯ ಕುರಿತು ಹೇಳುವುದಾದರೆ, ಕೆಜ್ರೀವಾಲ್ ಜನಿಸಿದ್ದು, 16 ಆಗಸ್ಟ್ 1968 ರಂದು ಬೆಳಗೆ 7 ಗಂಟೆ 30 ನಿಮಿಷಕ್ಕೆ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ. ಅರವಿಂದ್ ಕೆಜ್ರೀವಾಲ್ ಅವರ ಜಾತಕ ಸಿಂಹ ಲಗ್ನ ಜಾತಕವಾಗಿದೆ. ಇದಲ್ಲದೆ ಪಂಚಮೇಷ ಗುರುವಿನ ಮಹಾದೆಸೆಯಲ್ಲಿ ರಾಹುವಿನ ಅಂತರ್ದೆಸೆ ನವಂಬರ್ 2021 ರಿಂದ ಮಾರ್ಚ್ 2024ರವರೆಗೆ ನಡೆಯುತ್ತಿದೆ. ಅಂತರ್ದೆಸೆ ನಾಥ ರಾಹು ಲಜ್ಞದಿಂದ ಅಷ್ಟಮ ಹಾಗೂ ಚಂದ್ರನಿಂದ ಹಾನಿಯ ದ್ವಾದಶ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದೇ ಕಾರಣದಿಂದ ಕೆಜ್ರೀವಾಲ್ ಅವರ ಮನೆಗೆ ಜಾರಿನಿರ್ದೇಶನಾಲಯದ ಹಲವು ನೋಟಿಸ್ ಗಳು ತಲುಪಿವೆ.
ಇನ್ನೊಂದೆಡೆ ಅರವಿಂದ್ ಕೆಜ್ರೀವಾಲ್ ಅವರ ಜಾತಕದಲ್ಲಿ ಹಾನಿ ದ್ವಾದಶ ಭಾವದಲ್ಲಿ ರುವ ಮಂಗಳ ಹಾಗೂ ಸೂರ್ಯ ಇಬ್ಬರು ಸರ್ಪ ದೆಷ್ಕಾಣ್ ನಿಂದ ಸಾಗಿ ಅಶುಭ ಯೋಗ ರೂಪಿಸುತ್ತಿವೆ, ಇದರ ಜೊತೆಗೆ ಸೆರೆವಾಸದ ಯೋಗ ಕೂಡ ರೂಪುಗೊಳ್ಳುತ್ತಿದೆ. ಇದಲ್ಲದೆ ಕೆಜ್ರೀವಾಲ್ ಅವರ ಮೇಲೆ ಕರ್ಮ ಫಲಡಾಟಾ ಶನಿಯ ಮಹಾದೆಸೆ ಕೂಡ ಮಾರ್ಚ್ 29, 2024 ರಿಂದ ಆರಂಭಗೊಳ್ಳುತ್ತಿದೆ ಮತ್ತು ಅದು ಅವರ ಪಾಲಿಗೆ ಶುಭವಾಗಿರುವುದಿಲ್ಲ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷ ಕಳಪೆ ಪ್ರದರ್ಶನ ತೋರಲಿದೆ ಎಂಬುದಾಗುತ್ತದೆ. ಏಕೆಂದರೆ ಇವರ್ ಜಾತಕದಲ್ಲಿ ಶನಿ ದ್ವಾದಶೇಶ ಚಂದ್ರನ ಜೊತೆಗೆ ವಿಶಯೋಗ ರಚಿಸಿ ಅಶುಭ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಇದನ್ನು ಜೋತಿಷ್ಯದಲ್ಲಿ ಅತ್ಯಂತ ಅಶುಭ ಎಂದು ಭಾವಿಸಲಾಗುತ್ತದೆ.
ಇದನ್ನೂ ಓದಿ-ಜನವರಿ 2024 ರಲ್ಲಿ ಸೂರ್ಯ ಮಂಗಳರ ರವಿ-ಮಂಗಳ ರಾಜಯೋಗ ರಚನೆ, ಈ ರಾಶಿಗಳ ಜನರ ಜೀವನದಲ್ಲಿ ಹಣವೋ-ಹಣ ಹರಿದುಬರಲಿದೆ!
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯಲ್ಲಿ ಇರಲ್ಲ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಜನ್ಮ 19 ಜೂನ್ 1970 ಮದ್ಯಾಹ್ನ 2 ಗಂಟೆ 20 ನಿಮಿಷಕ್ಕೆ ದೆಹಲಿಯಲ್ಲಿ. ಅವರ ರಾಶಿ ತುಲಾ ಲಗ್ನ ರಾಶಿ. ಅವರ ಲಗ್ನ ಹಾಗೂ ನವಾಂಶ ಜಾತಕದಲ್ಲಿ ದೇವಗುರು ಬೃಹಸ್ಪತಿ ವಕ್ರ ಭಾವದಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಆತ ಪಂಚಮ ಸ್ಥಾನದಲ್ಲಿರುವ ರಾಹು, ನವಾಮ ಸ್ತಾದಲ್ಲಿರುವ ಸೂರ್ಯ ಹಾಗೂ ಮಂಗಳರ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿದ್ದಾನೆ. ಇದಲ್ಲದೆ ರಾಹುಲ್ ಗಾಂಧಿ ಅವರ ಮೇಲೆ ರಾಹುವಿನ ಮಹಾದೇಸೆ ಕೂಡ ನಡೆಯುತ್ತಿದೆ ಮತ್ತು ಗುರುವಿನ ಅಂತರ್ದೆಸೆ ಕೂಡ ಸಾಗುತ್ತಿದೆ. ವೈದಿಕ ಜೋತಿಶ್ಯದಲ್ಲಿ ಇದನ್ನು ಅಶುಭ ಎಂದು ಭಾವಿಸಲಾಗುತ್ತದೆ. ಇದರಿಂದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಡ್ದಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಬೇಕಾಯಿತು. ಜಾತಕದ ಪಂಚಮ ಭಾವದಲ್ಲಿ ಸಾಗುತ್ತಿರುವ ರಾಹುವಿನ ಮಹಾದೇಸೆ ಹಾಗೂ ವರ್ಗೊತ್ತಮ ಗುರುವಿನ ಅಂತರ್ದೆಸೆ ರಾಹುಲ್ ಅವರನ್ನು ಲೋಕ ಸಭೆ ಚುನಾವಣೆಯಲ್ಲಿ ತಲುಪಿಸಲಿದೆ ಆದರೆ ಅವರ ಪಕ್ಷ ಮಾತ್ರ ಅಧಿಕಾರ ವಂಚಿತವಾಗಲಿದೆ.
ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ಜನವರಿಯಲ್ಲಿ 3 ರಾಜಯೋಗಗಳ ರಚನೆ, ಲಕ್ಷ್ಮೀ ಕೃಪೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ