ಐವತ್ತು ವರ್ಷಗಳ ಬಳಿಕ ಜನವರಿಯಲ್ಲಿ 3 ರಾಜಯೋಗಗಳ ರಚನೆ, ಲಕ್ಷ್ಮೀ ಕೃಪೆಯಿಂದ ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

Auspicious Yogas January 2024: ವೈದಿಕ ಜೋತಿಷ್ಯ ಶಾಸ್ತ್ರ ಪ್ರಕಾರ ಹೊಸ ವರ್ಷಾರಂಭದಲ್ಲಿಯೇ ಮೂರು ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಈ ರಾಜಯೋಗಗಳು ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿವೆ. (Spiritual News In Kannada)
 

Three Auspicious Yogas January 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ ತಿಂಗಳಿನಲ್ಲಿ ಹಲವು ಶುಭ ಹಾಗೂ ರಾಜಯೋಗಗಳು ರಚನೆಯಾಗುತ್ತಿವೆ. ಅವುಗಳ ಪ್ರಭಾವ ಮಾನವ ಜೀವನ ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸಲಿದೆ. ಜನವರಿಯಲ್ಲಿ ಸೂರ್ಯ ಹಾಗೂ ಮಂಗಳನ ಕೃಪೆಯಿಂದ ಒಂದೆಡೆ ಆದಿತ್ಯಮಂಗಳ ರಾಜಯೋಗ ರಚನೆಯಾಗುತ್ತಿದ್ದರೇ, ಇನ್ನೊಂದೆಡೆ ಚಂದ್ರ ಹಾಗೂ ಗುರುವಿನ ಮೈತ್ರಿಯಿಂದ ಗಜಕೇಸರಿ ಹಾಗೂ ಆಯುಷ್ಮಾನ ರಾಜಯೋಗ ರಚನೆಯಾಗುತ್ತಿದೆ. ಈ ಮೂರು ರಾಜಯೋಗಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲಿರಲಿದೆ. ಆದರೆ ಮೂರು ಅದೃಷ್ಟವಂತ ರಾಶಿಗಳ ಮೇಲೆ ಈ ಯೋಗಗಳು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿವೆ. ಬನ್ನಿ ಅವು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಜನವರಿ 2024 ರಲ್ಲಿ ಸೂರ್ಯ ಮಂಗಳರ ರವಿ-ಮಂಗಳ ರಾಜಯೋಗ ರಚನೆ, ಈ ರಾಶಿಗಳ ಜನರ ಜೀವನದಲ್ಲಿ ಹಣವೋ-ಹಣ ಹರಿದುಬರಲಿದೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Auspicious Yogas January 2024: ವೈದಿಕ ಜೋತಿಷ್ಯ ಶಾಸ್ತ್ರ ಪ್ರಕಾರ ಹೊಸ ವರ್ಷಾರಂಭದಲ್ಲಿಯೇ ಮೂರು ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಈ ರಾಜಯೋಗಗಳು ಕೆಲ ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿವೆ. (Spiritual News In Kannada)

2 /5

ಮೇಷ ರಾಶಿ: ಮೂರು ರಾಜ್ಯೋಗಗಳು ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿವೆ. ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಕೊನದಿಂದ ಇವು ನಿಮಗೆ ಅಪಾರ ಯಶಸ್ಸನ್ನು ಕರುಣಿಸಲಿವೆ. ನೌಕರಿಯಲ್ಲಿ ಉನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಹಣ ಉಳಿತಾಯ ಮಾಡುವಲ್ಲಿಯೂ ಕೂಡ ನೀವು ಅಪಾರ ಯಶಸ್ಸನ್ನು ಕಾಣುವಿರಿ. ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಕೂಡ ಬಲವಾಗಿರಲಿದೆ ಮತ್ತು ಲವ್ ಲೈಫ್ ಉತ್ತಮವಾಗಿರಲಿದೆ. ಹೂಡಿಕೆಯಿಂದ ನಿಮಗೆ ಅಪಾರ ಲಾಭ ಹರಿದು ಬರುವ ನಿರೀಕ್ಷೆ ಇದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹೊಸ ವ್ಯಾಪಾರ ಆಮಭಿಸಲು ಬಯಸುವವರಿಗೆ ಈ ಅವಧಿ ಉತ್ತಮವಾಗಿದೆ. 

3 /5

ವೃಷಭ ರಾಶಿ: ಮೂರೂ ರಾಜಯೋಗಗಳು ನಿಮಗೆ ಸಾಕಷ್ಟು ಶುಭಫಲಗಳನ್ನು ನೀಡಲಿವೆ. ವಾಹನ ಪ್ರಾಪರ್ಟಿ ಖರೀದಿಸುವ ಸಾಧ್ಯತೆ ಇದೆ. ಕೆಲಸ ವ್ಯಾಪಾರ ಈ ಅವಧಿಯಲ್ಲಿ ಸಾಕಷ್ಟು ಮೇರುಗನ್ನು ಪಡೆದುಕೊಳ್ಳಲಿದೆ. ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮಲ್ಲಿ ಒಂದು ಸಕಾರಾತ್ಮಕ ಶಕ್ತಿಯ ಸಂಚಾರ ಇರಲಿದೆ. ಕೆಲಸ ಕಾರ್ಯಗಳ ನಿಮಿತ್ತ ವಿದೇಶಕ್ಕೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ. ಸಾಹಸ ಪರಾಕ್ರಮ ಕೂಡ ಹೆಚ್ಚಾಗಲಿದೆ. 

4 /5

ಮಕರ ರಾಶಿ: ಈ ಮೂರು ರಾಜಯೋಗಗಳು ನಿಮ್ಮ ಪಾಲಿಗೂ ಕೂಡ ಅತ್ಯುತ್ತಮ ಸಾಬೀತಾಗಲಿವೆ. ಈ ರಾಜಯೋಗಗಳು ನಿಮಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ನೀಡಲಿವೆ. ಹೋದ ಕಾರ್ಯ ಆರಂಭಿಸಲು ಬಯಸುವವರಿಗೆ ಈ ಕಾಲ ಉತ್ತಮವಾಗಿದೆ. ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಿ ಐಷಾರಾಮಿ ಜೀವನವನ್ನು ಕಳೆಯುವಿರಿ. ಈ ಅವಧಿಯಲ್ಲಿ ನಿಮ್ಮ ಆತ್ಮ ವಿಶ್ವಾಸ ಅಪಾರ ಹೆಚ್ಚಾಗಲಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ವಿದ್ಯಾರ್ಥಿಗಳ ಪಾಲಿಗೆ ಸಮಯ ಅದ್ಭುತವಾಗಿದೆ. ಅದರಲ್ಲಿಯೂ ವಿಶೇಷವಾಗಿ ಸರ್ಕಾರಿ ನೌಕರಿಯ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)